ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ : ಇಂದು ಮತ್ತು ನಾಳೆ

Udyam Prakashan    19-Mar-2020
Total Views |


1_1  H x W: 0 x 
 
ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಕುರಿತು (3D ಪ್ರಿಂಟಿಂಗ್) ಪ್ರಾರಂಭದಿಂದಲೂ ಇದ್ದ ಹುಮ್ಮಸ್ಸು ಈಗ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹಿಂದಿನ 5 ವರ್ಷಗಳ ಕಾಲಾವಧಿಯಲ್ಲಿ ಈ ಕುರಿತು ಪ್ರಸಾರ ಮಾಧ್ಯಮಗಳಲ್ಲಿ ಆಗುತ್ತಿರುವ ಪ್ರಶಂಸೆಯು ಈಗ ಕಡಿಮೆ ಆಗಿದೆ. ಪ್ರತ್ಯಕ್ಷವಾಗಿ ಡಿಸೈನ್, ಕೆಲಸದ ಯೋಜನೆ ಇತ್ಯಾದಿಗಳ ಕುರಿತು ಕೆಲಸ ಮಾಡಲಾಗುತ್ತಿದೆ. ಆದರೆ ಸದ್ಯಕ್ಕೆ ಅಸ್ತಿತ್ವದಲ್ಲಿರುವ ತಂತ್ರಜ್ಞಾನದ ಜಾಗವನ್ನು ಆಕ್ರಮಿಸಲು ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮೂಡಿಬಂದಿಲ್ಲ, ಆದರೆ ಕಾರ್ಯವಸ್ತುಗಳ ಕೊನೆಯ ರೂಪದ ತನಕ ತಲುಪುದಕ್ಕೋಸ್ಕರ ಬಳಸಲಾಗುವಂತಹ ಪ್ರಕ್ರಿಯೆ ಮತ್ತು ಅಪ್ಲಿಕೇಶನ್ ಗೆ ಅನುಸಾರವಾಗಿ ಯಂತ್ರಣೆ, ಇ.ಡಿ.ಎಮ್., ಇ.ಸಿ.ಎಮ್., ಕಾಸ್ಟಿಂಗ್, ಫೋರ್ಜಿಂಗ್ ಇತ್ಯಾದಿ ತಂತ್ರಜ್ಞಾನದೊಂದಿಗೆ ಒಟ್ಟಾಗಿ ಅದನ್ನು ಬಳಸುವುದು ಆತ್ಯಾವಶ್ಯಕವಾಗಿದೆ, ಎಂಬುದು ಈಗ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಸಮಸ್ಯೆಯನ್ನು ಪರಿಪೂರ್ಣವಾಗಿ ಪರಿಹರಿಸಲು ಅನೇಕ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮಶಿನ್ ಉತ್ಪಾದಕರು ಸದ್ಯಕ್ಕಿರುವ ತಂತ್ರಜ್ಞಾನವನ್ನು ಬಳಸುತ್ತಿರುವ ಮಶಿನ್ ಉತ್ಪಾದಕರೊಂದಿಗೆ ಮಾತುಕತೆಯನ್ನು ಮಾಡುತ್ತಿದ್ದಾರೆ.
 
ಎಡಿಟಿವ್ ಮ್ಯಾನ್ಯುಫ್ಯಾಕ್ಚರಿಂಗ್ ನ ಉಪಲಬ್ಧವಿರುವ ವಿವಿಧ ತಂತ್ರಜ್ಞಾನದ ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
 
1. ಸ್ಟಿರಿಯೋಲಿಥೋಗ್ರಾಫಿ (SLA) ಇದು ಎಲ್ಲಕ್ಕಿಂತಲೂ ಹಳೆಯ ರೀತಿಯಾಗಿದೆ. ಈ ರೀತಿಯಲ್ಲಿ 3D ಪ್ರಿಂಟಿಂಗ್ ಇದು 1987 ರಲ್ಲಿ ಪ್ರಾರಂಭವಾಯಿತು. ಕ್ಯಾಡ್ ಮೂಲಕ (ಕಂಪ್ಯೂಟರ್ ಎಡೆಡ್ ಡಿಸೈನ್) ಚಿತ್ರಗಳನ್ನು ತಯಾರಿಸಿ ಅದರಂತೆಯೇ ವಸ್ತುಗಳನ್ನು ತಯಾರಿಸಲು ಪ್ರಾರಂಭವಾಯಿತು. ಆದರೆ ಈ ತಂತ್ರವು ತುಂಬಾ ವರ್ಷಗಳ ಕಾಲ ಪ್ರಾಯೋಗಿಕ ರೀತಿಯಲ್ಲಿಯೇ ಉಳಿಯಿತು. ಈ ಪ್ರಕ್ರಿಯೆಯಲ್ಲಿ ಅನೇಕ ವಿಧದ ರೆಝಿನ್ ನಿಂದ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. SLA ಯಲ್ಲಿ ಲಿಕ್ವಿಡ್ ರೆಝಿನ್ ಬಳಸಲಾಗುತ್ತದೆ.
 
2. ಸಿಲೆಕ್ಟಿವ್ ಲೇಸರ್ ಸಿಂಟರಿಂಗ್ ನಲ್ಲಿ (SLS) ಪ್ಲಾಸ್ಟಿಕ್, ನೈಲಾನ್, ಸಿರ್ಯಾಮಿಕ್ ಈ ವಿಧದ ಮಟೀರಿಯಲ್ ಗಳ ತುಂಬಾ ಸೂಕ್ಷ್ಮವಾದ ಪಾವಡರ್ ಬೇಕಾಗಿರುವ ಆಕಾರದಲ್ಲಿ ಸಿಂಪಡಿಸಲಾಗುತ್ತದೆ ಮತ್ತು ಶಕ್ತಿಶಾಲಿಯಾದ ಲೇಸರ್ ನಿಂದ ಅದರ ಪಾವಡರ್ ಕರಗಿಸಿ ಅದರ ಸ್ತರಗಳನ್ನು (ಲೇಯರ್) ಒಂದರ ಮೇಲೊಂದು ತಯಾರಿಸಿ ಬೇಕಾಗಿರುವ 3D ವಸ್ತುವನ್ನು ತಯಾರಿಸಲಾಗುತ್ತದೆ.
 
3. ಫ್ಯುಜ್ಡ್ ಡಿಪಾಸಿಶನ್ ಮಾಡೆಲಿಂಗ್ ನಲ್ಲಿ (FDM) (ಚಿತ್ರ ಕ್ರ. 1) ರೀಲ್ ನಲ್ಲಿ ಸುತ್ತಿರುವ ತಂತಿಯು ಒಂದು ನಾಸಲ್ ನಿಂದ ಹೊರಗೆ ಬರುತ್ತಿರುವಾಗ ಬಿಸಿಯಾಗಿ ಕರಗಿರುವ ಮಟೀರಿಯಲ್ ನ 3D ಚಿತ್ರದಂತೆ ಆಕಾರವು ಮೂಡಿಬರುತ್ತದೆ. ಈ ಆಕಾರದ ಒಂದರ ಮೇಲೊಂದು ಸ್ತರಗಳು ತಯಾರಾಗುತ್ತವೆ. ಇದು ತಂಪಾದ ನಂತರ ನಮಗೆ ಬೇಕಾಗಿರುವ ವಸ್ತು ತಯಾರಾಗುತ್ತದೆ. ಒಂದು ಸ್ತರ (ಲೇಯರ್) ಆದ ನಂತರ ವಸ್ತು ತಯಾರಾಗುವ ಬೇಸ್ ಕೆಳಗೆ ಬರುತ್ತದೆ ಮತ್ತು ಮುಂದಿನ ಸ್ತರವು ತಯಾರಾಗುತ್ತದೆ. ಈ ವಿಧದ 3D ಪ್ರಿಂಟಿಂಗ್ ನಲ್ಲಿ ಉಚ್ಚಮಟ್ಟದ ಸರ್ಫೇಸ್ ಫಿನಿಶ್ ಲಭಿಸುತ್ತದೆ. ಮಧ್ಯಮ ರೀತಿಯ ನಿಖರತೆಯೂ ಲಭಿಸುತ್ತದೆ, ಹಾಗೆಯೇ ವಸ್ತು ದೃಢವಾಗುತ್ತದೆ.
 
4. ಮಲ್ಟಿ ಜೆಟ್ ಫ್ಯುಜನ್ ನಲ್ಲಿ (MJF) ನೈಲಾಲ್ 11 ಮತ್ತು ನೈಲಾನ್ 12 ಇಂತಹ ಮಟೀರಿಯಲ್ ಬಳಸಲಾಗುತ್ತದೆ. ಇದರಲ್ಲಿ 80 ಮೈಕ್ರಾನ್ ದಪ್ಪದ ತುಂಬಾ ಸೂಕ್ಷ್ಮವಾದ ಸ್ತರವನ್ನು ಮಾಡುವುದೂ ಸಾಧ್ಯವಾಗಿದೆ. ಇದರಿಂದಾಗಿ ಹೆಚ್ಚು ಸಾಂದ್ರತೆಯ ಮತ್ತು ಕಡಿಮೆ ರಂಧ್ರಗಳಿರುವ ವಸ್ತು ತಯಾರಾಗುತ್ತದೆ. ಇದರ ಮೂಲಕ ಇಂಜೆಕ್ಷನ್ ಮೋಲ್ಡಿಂಗ್ ಗೆ ಸರಿಸಮಾನವಾದ ಭಾಗಗಳು ತಯಾರಾಗುತ್ತವೆ.
 

2_1  H x W: 0 x 
 
5. ಮಲ್ಟಿ ಜೆಟ್ ಮಾಡೆಲಿಂಗ್ (MJM) ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಪ್ಲಾಸ್ಟಿಕ್ ನ ಭಾಗಗಳನ್ನು ತಯಾರಿಸಲಾಗುತ್ತದೆ. ಸರ್ಫೇಸ್ ಫಿನಿಶ್ ಉನ್ನತ ಗುಣಮಟ್ಟದ್ದು ಸಿಗುತ್ತದೆ. ಕ್ಲಿಷ್ಟವಾದ ಭಾಗಗಳೂ ಉನ್ನತ ಗುಣಮಟ್ಟದಲ್ಲಿ ಸಹಜವಾಗಿ ತಯಾರಿಸುವುದು ಸಾಧ್ಯ.
 
6. ಡೈರೆಕ್ಟ್ ಮೆಟಲ್ ಲೇಸರ್ ಸಿಂಟರಿಂಗ್ (DMLS) ಪ್ರಕ್ರಿಯೆಯಲ್ಲಿ ಲೋಹಗಳ ಭಾಗಗಳನ್ನು ತಯಾರಿಸಬಹುದಾಗಿದೆ. ಇದರಲ್ಲಿ 20 ರಿಂದ 30 ಮೈಕ್ರಾನ್ ದಪ್ಪದ ಲೇಯರ್ ತಯಾರಿಸಬಹುದು. 2007 ರಲ್ಲಿ EOC ಕಂಪನಿಯು ಮೊದಲಾಗಿ DMLS ಮಶಿನ್ (ಚಿತ್ರ ಕ್ರ. 2) ಕಮರ್ಶಿಯಲ್ ತತ್ವಗಳನ್ನು ಅನುಸರಿಸಿ ತಯಾರಿಸಿದ್ದರು. ಇದರ ಮೂಲಕ ಸ್ಟೇನ್ ಲೆಸ್ ಸ್ಟೀಲ್, ಅಲ್ಯುಮಿನಿಯಮ್, ಟೈಟ್ಯಾನಿಯಮ್ ಇತ್ಯಾದಿ ಲೋಹಗಳ ಭಾಗಗಳನ್ನು ತಯಾರಿಸಲಾಗುತ್ತದೆ. ಏರೋಸ್ಪೇಸ್, ಆಟೊಮೋಟಿವ್ ಇತ್ಯಾದಿ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನದಿಂದ ತುಂಬಾ ದೊಡ್ಡ ಕೊಡುಗೆಯನ್ನು ಅಪೇಕ್ಷಿಸಲಾಗಿದೆ.
 
7. ಪಾಲಿಜೆಟ್ ಪ್ರಿಂಟರ್ (ಚಿತ್ರ ಕ್ರ. 3) ಇಂಕ್ ಜೆಟ್ ಪ್ರಿಂಟರ್ ನಂತೆಯೇ ಕೆಲಸವನ್ನು ನಿರ್ವಹಿಸುತ್ತದೆ. ಅನೇಕ ನಾಸಲ್ ಗಳಿಂದ ಪಾಲಿಮರ್ ನ 10 ಮೈಕ್ರಾನ್ ದಪ್ಪದ ಒಂದರ ಮೇಲೊಂದು ಸ್ತರವನ್ನು ತಯಾರಿಸಿ, ನಂತರ ಅಲ್ಟ್ರಾ ವೈಲೆಟ್ (UV) ಕಿರಣಗಳಿಂದ ಅದನ್ನು ಕ್ಯುರ್ ಮಾಡಲಾಗುತ್ತದೆ. ಇದರಲ್ಲಿ 6 ವಿವಿಧ ಬಣ್ಣಗಳು ಉಪಲಬ್ಧವಿವೆ.
 
ಉತ್ಪಾದನೆಯ ತಂತ್ರಜ್ಞಾನ ಮತ್ತು ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್
 

3_1  H x W: 0 x 
 
ಮೇಲೆ ತಿಳಿಸಿದ ತಂತ್ರಜ್ಞಾನವನ್ನು ಬಳಸಿ ವಸ್ತುಗಳನ್ನು ತಯಾರಿಸಿದ ನಂತರ ಅದರಲ್ಲಿ ಅನೇಕ ಪ್ರಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಕ್ಯಾಡ್ ನ ಸಾಫ್ಟ್ ವೇರ್ ಎಷ್ಟೇ ಒಳ್ಳೆಯದಾಗಿದ್ದರೂ ಕೂಡಾ ಡ್ರಾಯಿಂಗ್ ಮಾಡುವುದು ಸಾಧ್ಯವೇ ಇದೆ ಎಂದು ಹೇಳಲಾಗುವುದಿಲ್ಲ. ಒಳ್ಳೆಯ ಮಶಿನ್ ಇದ್ದರೂ ಕೂಡಾ ತಕ್ಷಣ ಉಚ್ಚ ಗುಣಮಟ್ಟದ ವಸ್ತುವನ್ನು ತಯಾರಿಸುವುದೂ ಅಸಾಧ್ಯ, ಅದಕ್ಕೋಸ್ಕರ ತುಂಬಾ ಅಂಶಗಳ ತಿಳುವಳಿಕೆ ಮತ್ತು ಅನುಭವ ಇರುವುದೂ ಅಷ್ಟೇ ಆವಶ್ಯಕವಾಗಿದೆ. ಆ ಮಟೀರಿಯಲ್ ನ ಗುಣಧರ್ಮ ಏನಿದೆ, ಉಷ್ಣಾಂಶದಿಂದಾಗಿ ಆ ಮಟೀರಿಯಲ್ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ, ಯಾವುದೇ ಒಂದು ಭಾಗದ ಡಿಸೈನ್ ಮಾಡುವಾಗ ಅದರ ಕುರಿತು ಯಾವ ಮುತುವರ್ಜಿ ವಹಿಸಬೇಕು, ಇತ್ಯಾದಿ ಅಂಶಗಳ ಕುರಿತು ಆಳವಾದ ಜ್ಞಾನ ಇರುವುದೂ ಅತ್ಯಾವಶ್ಯಕವಾಗಿದೆ. ಇಂದಿಗೂ ಈ ತಂತ್ರಜ್ಞಾನವು ಎಲ್ಲೆಡೆಯಲ್ಲಿಯೂ ರೂಢಿಯಲ್ಲಿ ಇಲ್ಲದೇ ಇರುವುದರಿಂದ ಆಗಾಗ ಪ್ರಯೋಗ, ಸಂಶೋಧನೆ ಮತ್ತು ಪರೀಕ್ಷಣೆಯನ್ನೂ ಮಾಡಬೇಕಾಗುತ್ತದೆ.
 

4_1  H x W: 0 x 
 
ಒಂದು ವೇಳೆ ಯಂತ್ರಭಾಗಗಳು ಡಿಸೈನ್ ನ ಹಂತದಲ್ಲಿಯೇ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮಾಡಲು ಅನುಕೂಲವಾಗಲು ತಯಾರಾದಲ್ಲಿ ಅದು ಎಂದಿಗೂ ಸೂಕ್ತವಾಗಿರುತ್ತದೆ. ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ತಂತ್ರಜ್ಞಾನಕ್ಕೋಸ್ಕರ ಯಂತ್ರಭಾಗಗಳ ಡಿಸೈನ್ ಮಾಡುವುದು ಇದು ಇಂದಿನ ಕಾಲದಲ್ಲಿ ಕಡಿಮೆ ಪ್ರಮಾಣದಲ್ಲಿ ಉಪಲಬ್ಧವಿರುವ ಕೌಶಲ್ಯವಾಗಿದೆ. ಕಾರಣ ಈ ತಂತ್ರಜ್ಞಾನದ ಪ್ರಚಾರ ಮತ್ತು ಪ್ರಸಾರವು ಮಿತಿಯಲ್ಲಿದೆ. ಅರ್ಥಾತ್, ಹೊಸ ತಂತ್ರಜ್ಞಾನದ ಆಗಮನದಿಂದ ಮತ್ತು ಪ್ರಸಾರದಿಂದ ಯಂತ್ರಭಾಗಗಳ ಡಿಸೈನ್ ನ ಸಾಮರ್ಥ್ಯ ಖಂಡಿತವಾಗಿಯೂ ಹೆಚ್ಚಾಗಬಹುದು. ಹಾಗೆಯೇ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಯ ಸಿಮ್ಯುಲೇಶನ್ ಗೋಸ್ಕರ ಸಾಫ್ಟ್ವೇರ್ ಗಳೂ ಉಪಲಬ್ಧವಿವೆ.
 
ಸಾಮಾನ್ಯವಾಗಿ ಉಪಲಬ್ಧವಿರುವ ತಂತ್ರಜ್ಞಾನದ ಮೂಲಕ ಯಾವುದೇ ಒಂದು ಯಂತ್ರಭಾಗದ ಉತ್ಪಾದನೆಯನ್ನು ಮಾಡುವಲ್ಲಿ ಸಮಸ್ಯೆಗಳು ಉಂಟಾದರೂ ಕೂಡಾ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಯನ್ನು ಬಳಸುವ ವಿಚಾರವನ್ನು ಮಾಡಲಾಗುತ್ತದೆ.
 
ನಮ್ಮ ದೈನಂದಿನ ಕೆಲಸದಲ್ಲಿ ಅದಕ್ಕೆ ವಸ್ತುಗಳನ್ನು ಪರೀಕ್ಷಿಸಿ ಪಾಸ್ ಮಾಡುವುದು ಎಂದು ನಾವು ಹೇಳುತ್ತೇವೆ. ಅದಕ್ಕೆ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ನಲ್ಲಿ ‘ಸರ್ಟಿಫಿಕೇಶನ್’ ಎಂದೂ ಹೇಳಲಾಗುತ್ತದೆ. ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಯಂತ್ರಭಾಗಗಳ ಪ್ರಮಾಣಪತ್ರ (ಪಾರ್ಟ್ ಸರ್ಟಿಫಿಕೇಶನ್ – ಕೊನೆಯ ಎಪ್ಲಿಕೇಶನ್ ನಲ್ಲಿ ಬಳಸಲು ಯಂತ್ರಭಾಗವು ಯೋಗ್ಯವಾಗಿದೆಯೇ ಎಂದು ದೃಢಪಡಿಸುವ ಪ್ರಕ್ರಿಯೆ) ಪಡೆಯುವುದು, ಒಂದು ತುಂಬಾ ವಿಸ್ತಾರವಾದ, ತೊಡಕಾಗಿರುವ ಪ್ರಕ್ರಿಯೆಯಾಗಿದೆ. ಇದಕ್ಕೋಸ್ಕರ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಬೃಹತ್ ಪ್ರಮಾಣದಲ್ಲಿ ಸಮಯ ಮತ್ತು ಅನೇಕ ಬದಲಾವಣೆಗಳನ್ನು ಮಾಡುವುದೂ ಆವಶ್ಯಕವಾಗಿದೆ.
 
ಸದ್ಯದ ಅಪ್ಲಿಕೇಶನ್ ಗೋಸ್ಕರ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಯನ್ನು ಬಳಸುವ ಆವಶ್ಯಕತೆಯನ್ನು ಪರೀಕ್ಷಿಸಲು ಈ ಮುಂದಿನ ಕೆಲವು ಅಂಶಗಳು ಸೂಕ್ತವಾಗಿರುವ ಕುರಿತು ದೃಢಪಡಿಸುವುದೂ ಅತ್ಯಾವಶ್ಯಕವಾಗಿದೆ.
· ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ನಿಂದ ಆದಾಯವನ್ನು ನೀಡುವ ನಿಖರವಾದ ಮೌಲ್ಯ.
· ಬದಲಾವಣೆಗಳನ್ನು ಮಾಡಲು ತಗಲುವ ಖರ್ಚು.
· ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಗೆ ತಗಲುವ ಖರ್ಚು.
· ಇನ್ನಿತರ ಅಪಾಯ.
· ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಯ ಇನ್ನಿತರ ಲಾಭಗಳು.
 
ಭಾರತದಲ್ಲಿ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮಶಿನ್ ಉದ್ಯಮದಲ್ಲಿರುವ ವ್ಯವಹಾರವು ಸುಮಾರು 450 ಕೋಟಿಗಳಷ್ಟಿದೆ. ಮಾರುಕಟ್ಟೆಯಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಅಂದರೆ 47 ಶೇಕಡಾ ಪಾಲು M/s EOS ಸಿಸ್ಟಮ್ ಇವರದ್ದೇ ಆಗಿದೆ. ಭಾರತದಲ್ಲಿ ಡೆಸ್ಕ್ ಟಾಪ್ ಇನ್ಸ್ಟಾಲೇಶನ್ ನ ಅಂಕೆ-ಸಂಖ್ಯೆಗಳು ಸುಮಾರು 10,000 ಇದೆ ಮತ್ತು ಔದ್ಯೋಗಿಕ
ಇನ್ ಲ್ಟಾಲೇಶನ್ ನ ಸಂಖ್ಯೆ ಸುಮಾರು 650 ಇದೆ.
ಅನೇಕ ಕ್ಷೇತ್ರಗಳಲ್ಲಿ ವಿವಿಧ ಕೆಲಸಗಳಿಗೋಸ್ಕರ ಒಂದು ಸುಲಭವಾದ ಪ್ರಕ್ರಿಯೆಗೆ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಬಳಸಲಾಗುತ್ತದೆ. ಇದರ ಕುರಿತು ಕೆಲವು ಉದಾಹರಣೆಗಳನ್ನು ಈ ಮುಂದೆ ನೀಡಲಾಗಿದೆ.
 
ಏರೋಸ್ಪೇಸ್
 
GE ಏರೋ ಇಂಜಿನ್ ನಾಸಲ್ ಅಸೆಂಬ್ಲಿ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮುಖಾಂತರವೇ ಮಾಡಲಾಗುತ್ತದೆ. ಬೋಯಿಂಗ್ ನ ಪ್ರಯಾಣಿಕರ ವಿಮಾನದಲ್ಲಿ ಓವರ್ ಹೆಟ್ ಸ್ಟೋರೇಜ್ ರೇಕ್ ಗೋಸ್ಕರ ಪ್ಯಾನೆಲ್ ನಂತಹ ಹಲವಾರು ಪ್ಲಾಸ್ಟಿಕ್ ನ ಭಾಗಗಳನ್ನು ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮೂಲಕ ತಯಾರಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಬಳಸುವ ಪ್ರಮುಖವಾದ ಕಾರಣವೆಂದರೆ ಭಾಗಗಳ ತೂಕ ಕಡಿಮೆಯಾಗುವ ಸಾಧ್ಯತೆಯೇ ಸರಿ. ಇಸ್ರೋದಲ್ಲಿ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮೂಲಕ ಉಪಗ್ರಹಗಳಿಗೆ ಹಲವಾರು ಮಹತ್ವದ ಭಾಗಗಳನ್ನು ತಯಾರಿಸಲಾಗುತ್ತದೆ.
 

5_1  H x W: 0 x 
 
ಪ್ರೋಸ್ಥೆಟಿಕ್ಸ್, ಇಂಪ್ಲಾಂಟ್
 
ಈ ಕ್ಷೇತ್ರದಲ್ಲಿ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಯು ದೊಡ್ಡ ಪ್ರಮಾಣದಲ್ಲಿ ರೂಢಿಯಾಗಿದೆ. ಸುಮಾರು 97 ಶೇಕಡಾ ಶ್ರವಣ ಯಂತ್ರಗಳು ಇದೇ ಪ್ರಕ್ರಿಯೆಯನ್ನು ಬಳಸಿ ಮಾಡಲಾಗುತ್ತವೆ. ಅನೇಕ ಆರ್ಥೋಪೆಡಿಕ್ (ಚಿತ್ರ ಕ್ರ. 4 ಮತ್ತು 5) ಮತ್ತು ಇನ್ನಿತರ ಇಂಪ್ಲಾಂಟ್ ಗಳು ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತವೆ. ರೋಗಿಯ ಬೇಡಿಕೆಗಳಿಗೆ ಅನುಸಾರವಾಗಿ ಇಂಪ್ಲಾಂಟ್ ಸರಿಹೊಂದಿಸಬಹುದಾಗಿದೆ, ಆದ್ದರಿಂದ ಈ ತಂತ್ರಜ್ಞಾನವು ಮಿತಿಯಿಲ್ಲದೇ ಬಳಸುವುದೂ ಸಾಧ್ಯವಾಗಿದೆ. ಅನೇಕ ವಿಧದ ಪ್ರೊಸ್ಥೆಟಿಕ್ಸ್ ತಯಾರಿಸಲಾಗುತ್ತವೆ. ಇದರ ಬೆಲೆಯು ಸಾಮಾನ್ಯವಾಗಿ 1,500 ಡಾಲರ್ ನಿಂದ 8,000 ಡಾಲರ್ ಗಳಷ್ಟಿರುತ್ತದೆ. ಆದರೆ ಇದರ ಬಾಳಿಕೆ ಸಾಧಾರಣವಾಗಿ 5 ವರ್ಷ ಇರುತ್ತದೆ. ಚಿಕ್ಕ ಮಕ್ಕಳಿಗೆ ಇದನ್ನು ಬೇಗನೆ ಬದಲಾಯಿಸಬೇಕಾಗುತ್ತದೆ. ಇದಕ್ಕೆ ವಿಮೆಯ ಆಶ್ರಯವು ಇಲ್ಲದಿರುವುದರಿಂದ ಇದು ಪೂರೈಸುವುದಿಲ್ಲ. ಆದರೆ 3D ಪ್ರಿಂಟಿಂಗ್ ಬಳಸಿ ಇದರ ಬೆಲೆಯನ್ನು ಕೇವಲ 50 ಡಾಲರ್ ಗಳಷ್ಟು ಕಡಿಮೆಯಾಗುತ್ತದೆ. 3D ಸಿಸ್ಟಮ್ ನಂತಹ ಕಂಪನಿಯು ಡಿ.ಎಮ್.ಪಿ. ಫ್ಲೆಕ್ಸ್ 350 ಸೀರಿಸ್ ನ ಅನೇಕ ಮಶಿನ್ ಗಳನ್ನು ಮಾರುಕಟ್ಟೆಯಲ್ಲಿ ವಿತರಣೆ ಮಾಡಲಾಯಿತು. ಇದರಿಂದಾಗಿ ಇಲ್ಲಿಯ ವರೆಗೆ ಲಕ್ಷಗಟ್ಟಲೆ ವೈದ್ಯಕೀಯ ಇಂಪ್ಲಾಂಟ್ ಗಳನ್ನು ತಯಾರಿಸಲಾಯಿತು.
 
ವಾಹನ ಉದ್ಯೋಗ
 
ಈ ಕ್ಷೇತ್ರದಲ್ಲಿ ಸದ್ಯಕ್ಕೆ ಬಳಸಲಾಗುತ್ತಿರುವ ತಂತ್ರಜ್ಞಾನವು ತುಂಬಾ ತಾರ್ಕಿಕವಾದ ರೀತಿಯಲ್ಲಿ ಅಭಿವೃದ್ಧಿಯಾಗಿರುವುದರಿಂದ ಇಲ್ಲಿ ಇಂದಿಗೂ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಬಳಸಿ ಹೆಚ್ಚೆನು ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಇದಕ್ಕೆ ಪ್ರಮುಖವಾದ ಕಾರಣಗಳೆಂದರೆ ಸದ್ಯಕ್ಕಿರುವ ಪ್ರಕ್ರಿಯೆಯ ಆಪ್ಟಿಮೈಸ್ಡ್ ಬೆಲೆ ಮತ್ತು ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಸಾಮರ್ಥ್ಯವೂ ಇದೆ. ಆದರೆ ಕೆಲವು ವಿಶಿಷ್ಟವಾದ ಭಾಗಗಳನ್ನು ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮೂಲಕ ತಯಾರಿಸಲಾಗುತ್ತದೆ. ಉದಾಹರಣೆ, ಕಡಿಮೆ ಗುಣಮಟ್ಟದ ಬಿಜಾಗರಿಗಳು, ಪಾದಚಾರಿಗಳ ರಕ್ಷಣೆಗೆ ಬಳಸಲಾಗುವಂತಹ ಬ್ರೆಕೇಟ್. ಇವೆಲ್ಲವನ್ನು ಫಾರ್ಮ್ಯುಲಾ 1 ಮತ್ತು ಸುಪರ್ ಕಾರ್ ಗಳಲ್ಲಿ ಬಳಸಲಾಗುತ್ತದೆ. ಕಾರಣ ಅಲ್ಲಿ ಉತ್ಪಾದನೆಯು ಕಡಿಮೆ ಇರುತ್ತದೆ ಮತ್ತು ತೂಕದ ಪ್ರಮಾಣದಲ್ಲಿ ದೃಢತೆ ಈ ಗುಣಾಕಾರಗಳು ತುಂಬಾ ಮಹತ್ವದ್ದಾಗಿರುತ್ತವೆ. ಉದಾಹರಣೆ, ಬುಗಾಟಿ ಚಿರಾನ್ ನಂತಹ ಸುಪರ್ ಕಾರ್ ಗಳಿಗೋಸ್ಕರ ಬ್ರೇಕ್ ಕ್ಯಾಲಿಪರ್, ಹೀಟ್ ಶೀಲ್ಡ್ ನ ನಿರ್ಮಾಣ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಮೂಲಕವೇ ಮಾಡಲಾಗುತ್ತದೆ.
 

6_1  H x W: 0 x 
 
ಟೂಲಿಂಗ್, ಡೈ ಮೋಲ್ಡ್
 
ಆಪ್ಟಿಮೈಸ್ಡ್ ಭಾರ ಮತ್ತು ಇನರ್ಶಿಯಾ ಇರುವ ಮತ್ತು ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ತಯಾರಿಸಿರುವ ಮಿಲ್ಲಿಂಗ್ ಕಟರ್ ಬಾಡಿ ಸ್ಯಾಂಡ್ ವಿಕ್ ನಲ್ಲಿ ತಯಾರಾಗುತ್ತವೆ. ಕೂಲಂಟ್ ಸ್ಲಾಟ್ ಒಳಗೊಂಡಿರುವ ಇಂಜೆಕ್ಷನ್ ಮೋಲ್ಡಿಂಗ್ ಡೈ ಸಾಂಪ್ರದಾಯಿಕ ಡೈ ಬ್ಲಾಕ್ ನ ಸ್ಪರ್ಧೆಯೊಂದಿಗೆ ಮಾರುಕಟ್ಟೆಯಲ್ಲಿ ಉಪಲಬ್ಧವಿದೆ. ಹಳೆಯ ವಿಧದಲ್ಲಿ ಡೈ ತಯಾರಿಸುವಾಗ ರಂಧ್ರಗಳನ್ನು ಮಾಡಲಾಗುತ್ತದೆ ಮತ್ತು ಪ್ರಭಾವಶಾಲಿಯಾದ ಕೂಲಂಟ್ ನ ಪೈಪ್ ಗಳನ್ನು ಪೂರೈಸಲು ಕ್ಲಿಷ್ಟಕರವಾದ ಯಂತ್ರಣೆಯನ್ನು ಮಾಡಬೇಕಾಗುತ್ತಿತ್ತು. ಚಿತ್ರ ಕ್ರ. 6 ರಲ್ಲಿ ಒಂದು ಜಟಿಲವಾದ ಯಂತ್ರಣೆಯ ಉದಾಹರಣೆಯನ್ನು ತೋರಿಸಲಾಗಿದೆ. ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಯನ್ನು ಬಳಸಿ ಇಂತಹ ವಸ್ತುಗಳನ್ನು ತಯಾರಿಸುವುದು ತುಂಬಾ ಸುಲಭವಾಗಿದೆ.
 
ಕಲಾಕೃತಿಗಳು
 
ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಪ್ರಕ್ರಿಯೆಯ ಮೂಲಭೂತ ವೈಶಿಷ್ಟ್ಯಗಳಿಂದಾಗಿ ಆದನ್ನು ಬಳಸಿ ಅಳವಡಿಸಿರುವ ಕಲಾಕೃತಿಗಳಿಗೆ ತುಂಬಾ ಬೇಡಿಕೆ ಇರುತ್ತದೆ ಮತ್ತು ಅದರಲ್ಲಿ ವಿವಿಧತೆ ಮತ್ತು ಕಲಾನೈಪುಣ್ಯತೆಗೋಸ್ಕರ ಡಿಸೈನರ್ ಅಥವಾ ಕಲಾಕಾರರಿಗೆ ಅವರ ಕೌಶಲ್ಯಕ್ಕೆ ಮಿತಿಯಿಲ್ಲದ ಅವಕಾಶಗಳು ಉಪಲಬ್ಧವಿರುತ್ತವೆ.
 
ಮಾದರಿ (ಪ್ರೊಟೋಟೈಪ್)
 
ಈ ಕ್ಷೇತ್ರದಲ್ಲಿ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತದೆ. ಕಾರಣ ಸದ್ಯದ ತಂತ್ರಜ್ಞಾನವನ್ನು ಹೋಲಿಸಿದಲ್ಲಿ ಕಚ್ಚಾ ವಸ್ತುಗಳ, ಅದೇ ವಿಧದಿಂದ ಅನೇಕ ಭಾಗಗಳನ್ನು ತಯಾರಿಸುವುದು ಸಾಧ್ಯವಾಗಿದೆ. ಇದಕ್ಕೆ ಯಾವುದೇ ವಿಶೇಷ ಟೂಲಿಂಗ್ ನ ಆವಶ್ಯಕತೆ ಇರುವುದಿಲ್ಲ. ಒಂದು ವೇಳೆ ತಮ್ಮಲ್ಲಿ ಮಶಿನ್, ಡಿಸೈನ್ ಮಾಡುವ ಸಾಮರ್ಥ್ಯ ಮತ್ತು ಮೂಲಭೂತ ಸೌಲಭ್ಯಗಳು ಉಪಲಬ್ಧವಿದ್ದಲ್ಲಿ, ನಾವು ಅವುಗಳನ್ನು ಕೇವಲ ತಯಾರಿಸುವ ಕೆಲಸವನ್ನೇ ಮಾಡಬೇಕು.
 
3D ತಂತ್ರಜ್ಞಾನವು ಈಗ ತಂತ್ರಜ್ಞಾನಕ್ಕೆ ಪೂರಕವಾಗಲಿದೆ, ಇದರಿಂದಾಗಿ ಸದ್ಯಕ್ಕೆ ಬಳಸಲಾಗುತ್ತಿರುವ ತಂತ್ರಜ್ಞಾನವು ತಕ್ಷಣ ಅವಧಿಯನ್ನು ಮೀರುತ್ತದೆ, ಎಂಬುದನ್ನು ಹೇಳುವುದು ಅಸಾಧ್ಯ, ಎಂಬುದು ಮೇಲಿನ ವಿಶ್ಲೇಷಣೆಯಿಂದ ಗಮನಕ್ಕೆ ಬರುತ್ತಿದೆ. ಉದಾಹರಣೆ, ಇಲೆಕ್ಟ್ರಿಕ್ ವಾಹನಗಳು (EV) ಮಾರುಕಟ್ಟೆಯಲ್ಲಿ ಕಾಲೂರಿವೆ, ಇದರ ಅರ್ಥ ಪೆಟ್ರೋಲ್ ಮತ್ತು ಡಿಸೈಲ್ ವಾಹನಗಳ ನಿರ್ಮಿತಿಯನ್ನು ಮಾಡುವಂತಹ ಕಂಪನಿಗಳು ಮುಚ್ಚಲ್ಪಡುತ್ತವೆ, ಎಂಬುದಲ್ಲ. ಉದ್ಯಮ ಕ್ಷೇತ್ರದಲ್ಲಿ ಈ ತನಕ ಆಗಿರುವ ತುಂಬಾ ಕ್ರಾಂತಿಕಾರಿಯಾದ ಬದಲಾವಣೆಗಳಂತೆಯೇ ಇದೂ ಒಂದು ಬದಲಾವಣೆ ಎಂದು ಹೇಳಬಹುದು. ಸದ್ಯದ ಪರಿಸ್ಥಿತಿಯಲ್ಲಿ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ಹೆಚ್ಚು ಸುಲಭತೆಯನ್ನು ತರಲು ಈ ತಂತ್ರಜ್ಞಾನವನ್ನು ಮುಂಬರುವ ದಿನಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ, ಇದು ಮಾತ್ರ ಖಂಡಿತ. ಇದರಿಂದಾಗಿ ಈ ಬದಲಾವಣೆಯನ್ನು ನಾವು ಹೇಗೆ ಸ್ವೀಕರಿಸುತ್ತೇವೆ, ಇದರಲ್ಲಿಯೂ ಭವಿಷ್ಯತ್ಕಾಲದ ಯಶಸ್ಸು ಅವಲಂಬಿಸಿದೆ.
 
 
9359104060
 
ಅಜಿತ್ ದೇಶಪಾಂಡೆ, ಅಂಬರ್ ಜೋಶಿ ಈ ಲೇಖಕರಿಬ್ಬರೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ದೀರ್ಘ ಅನುಭವವನ್ನು ಹೊಂದಿದ್ದಾರೆ. ಮುಂಬಯಿಯಲ್ಲಿ ಏರ್ಪಡಿಸಲಾಗಿದ್ದ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಯಾಗಾರದಲ್ಲಿ ಉದ್ಯಮ ಪ್ರಕಾಶನದ ವತಿಯಿಂದ ಇವರು ಸಹಭಾಗಿಗಳಾಗಿದ್ದರು.