ಮಶಿನ್ ಮೆಂಟೆನನ್ಸ್ : ಹೈಡ್ರಾಲಿಕ್ ವಾಲ್ವ್ ಬ್ಲಾಕ್

Udyam Prkashan Kannad    12-Dec-2019
Total Views |
 
ಕಾರಖಾನೆಗಳಲ್ಲಿ ಕೆಲಸ ಮಾಡುತ್ತಿರುವಾಗ ಅನೇಕ ಬಾರಿ ಯಂತ್ರೋಪಕರಣಗಳು ಹಾಳಾಗುತ್ತವೆ. ಹಾಳಾಗಿರುವ ಯಂತ್ರೋಪಕರಣಗಳನ್ನು ಬದಲಾಯಿಸುವಾಗ ಯೋಗ್ಯವಾದ ಮತ್ತು ನಿರ್ದೋಷವಾದ ಭಾಗಗಳನ್ನು ಅಳವಡಿಸದಿದ್ದಲ್ಲಿ ಗಂಭೀರವಾದ ಪರಿಣಾಮಗಳು ಸಂಭವಿಸುತ್ತವೆ. ಇಂತಹ ಪರಿಣಾಮಗಳಿಂದಾಗಿ ಮಶಿನ್‌ನಲ್ಲಿ ಶಾಶ್ವತವಾದ ದೋಷಗಳು ಉದ್ಭವಿಸುವ ಸಾಧ್ಯತೆಯೂ ಇರುತ್ತದೆ. ಈ ಲೇಖನದಲ್ಲಿ ಈ ಕುರಿತಾದ ಉದಾಹರಣೆಯನ್ನು ನೋಡೋಣ.
 

1_1  H x W: 0 x 
 
ಒಂದು ಕಂಪನಿಯಲ್ಲಿ 1000 ಟನ್ ಸಾಮರ್ಥ್ಯದ ಪ್ರೆಸ್‌ನಲ್ಲಿ 300 ಕಿ./ಸೆಂ.ಮೀ.2 ಒತ್ತಡದ ಬದಲಾಗಿ 150 ಕಿ./ಸೆಂ.ಮೀ.2 ಇಷ್ಟೇ ಒತ್ತಡವು ಸಿಗುತ್ತಿತ್ತು. ಇದರಿಂದಾಗಿ ಪ್ರೆಸ್‌ನ ಸಾಮರ್ಥ್ಯವು 500 ಟನ್‌ನಷ್ಟು ಕಡಿಮೆ ಆಯಿತು. ಇದರ ಕುರಿತಾದ ದೂರು ನಿರ್ವಹಣೆಯ ವಿಭಾಗಕ್ಕೆ (ಮೆಂಟೆನನ್ಸ್ ಡಿಪಾರ್ಟ್‌ಮೆಂಟ್) ತಲುಪಿತು. ನಿರ್ವಹಣೆಯನ್ನು ಮಾಡುವ ಇಂಜಿನಿಯರ್ ಪಂಪ್‌ನಿಂದ ರಿಲೀಫ್ ವಾಲ್ವ್‌ನ ಸಹಾಯದಿಂದ ಒತ್ತಡವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಿದನು. ಆದರೂ ಒತ್ತಡವು ಹೆಚ್ಚಾಗುತ್ತಿರಲಿಲ್ಲ. ರ್ಯಾಮ್‌ನ ಚಟುವಟಿಕೆ ಆಗದೇ ಇರುವಾಗ ರಿಲೀಫ್ ವಾಲ್ವ್ ಮತ್ತು ಡೈರೆಕ್ಷನ್ ವಾಲ್ವ್ ಒಟ್ಟಾಗಿಯೇ ಕೆಲಸ ಮಾಡುತ್ತವೆ ಮತ್ತು ಪಂಪ್‌ನ ಡಿಲಿವರಿಯ ಭಾಗದಲ್ಲಿರುವ ಆಯಿಲ್ ಟ್ಯಾಂಕ್‌ನಲ್ಲಿ ಬಿಡಲಾಗುತ್ತದೆ. ಇದರಿಂದಾಗಿ ನಿರ್ವಹಣಾ ವಿಭಾಗದ ವ್ಯವಸ್ಥಾಪಕರು ರಿಲೀಫ್ ವಾಲ್ವ್ ಮತ್ತು ಡೈರೆಕ್ಷನ್ ವಾಲ್ವ್ ಬದಲಾಯಿಸುವುದನ್ನು ನಿರ್ಧರಿಸಲಾಯಿತು. ವಾಲ್ವ್ ಖರೀದಿಸಿ ತರಲಾಯಿತು ಮತ್ತು ಅದನ್ನು ಅಳವಡಿಸಿದನಂತರ ಯೋಗ್ಯವಾದ ಒತ್ತಡವು ಲಭಿಸಿತು. ಆದರೆ ಅದರ ನಂತರ ಆಯಿಲ್‌ನ ಉಷ್ಣಾಂಶವು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂತು.
 
1. ಹೆಚ್ಚು ಉಷ್ಣಾಂಶದಿಂದಾಗಿ ಆಯಿಲ್‌ನ ವಿಸ್ಕಾಸಿಟಿ ಕಡಿಮೆ ಆಗುತ್ತಿತ್ತು.
2. ಹೆಚ್ಚು ಉಷ್ಣಾಂಶದಿಂದಾಗಿ ಅನೇಕ ವಾಲ್ವ್‌ಗಳ ಸ್ಪೂಲ್ ಬಿಸಿಯಾಗಿ ಅಸಮಾನವಾಗಿ ಹರಡುತ್ತಿತ್ತು ಮತ್ತು ಚಟುವಟಿಕೆಯಾಗುವಾಗ ತಡೆಯಲ್ಪಡುತ್ತಿತ್ತು. ಇದರಿಂದಾಗಿ ಪ್ರೆಸ್ ಸರಿಯಾಗಿ ನಡೆಯುತ್ತಿರಲಿಲ್ಲ. ಅದರಲ್ಲಿ ಆಗಾಗ ತಡೆಗಳುಂಟಾಗುತ್ತಿದ್ದವು. ಅನೇಕ ಬಾರಿ ಪ್ರೆಸ್ ನಿಲ್ಲಿಸಬೇಕಾಗುತ್ತಿತ್ತು ಮತ್ತು ಆಯಿಲ್ ತಂಪಾದ ನಂತರ ಮತ್ತೆ ಪ್ರಾರಂಭಿಸಬೇಕಾಗುತ್ತಿತ್ತು. ಇಂತಹ ತೊಂದರೆಯಿಂದಾಗಿ ಉತ್ಪಾದಕತೆಯೂ ಕಡಿಮೆಯಾಯಿತು.
 
ಪ್ರೆಸ್‌ನಲ್ಲಿರುವ ಆಯಿಲ್ ತುಂಬಾ ದಿನಗಳಲ್ಲಿ ಬದಲಾಯಿಸಿರಲಿಲ್ಲ, ಎಂದು ಇದರ ಕುರಿತಾದ ಅಭ್ಯಾಸವನ್ನು ಮಾಡುವಾಗ ಗಮನಕ್ಕೆ ಬಂತು. ಇದರಿಂದಾಗಿ ನಿರ್ವಹಣಾ ವಿಭಾಗದ ವ್ಯವಸ್ಥಾಪಕರಿಗೆ ಆಯಿಲ್ ಬದಲಾಯಿಸಲು ಸೂಚನೆಗಳನ್ನು ನೀಡಲಾಯಿತು. ಇದಕ್ಕೋಸ್ಕರ 5000 ಲೀಟರ್ ಆಯಿಲ್‌ನ ಆವಶ್ಯಕತೆ ಇತ್ತು. ಹಳೆಯ ಆಯಿಲ್‌ನ್ನು ಮಾರಾಟ ಮಾಡಿ ಬರುವ ಮೊತ್ತವನ್ನು ಕಳೆದರೂ, ಹೊಸದಾಗಿ ಖರೀದಿಸಬೇಕಾಗುವ ಆಯಿಲ್‌ಗೋಸ್ಕರ 5 ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಬೇಕಾಗಿತ್ತು. ಆದರೂ ಇದರಲ್ಲಿ ಬದಲಾವಣೆಯಾಗಿಲ್ಲ. ಆಯಿಲ್ ಬದಲಾಯಿಸಿದ ನಂತರವೂ ಆಯಿಲ್‌ನ ಉಷ್ಣಾಂಶವು ಹೆಚ್ಚಾಗುತ್ತಿತ್ತು.
 
ಕಾರಖಾನೆಯಲ್ಲಿರುವ ಹವಾಮಾನದಲ್ಲಿದ್ದ ಉಷ್ಣಾಂಶವು ಹೆಚ್ಚಾಗಿದ್ದರಿಂದ ಆಯಿಲ್‌ನ ಉಷ್ಣಾಂಶವು ನೈಸರ್ಗಿಕವಾಗಿ ಕಡಿಮೆ ಆಗುತ್ತಿಲ್ಲ, ಎಂಬುದರ ಕುರಿತು ವಿಚಾರ ಮಾಡಿ ನಿರ್ವಹಣಾ ವ್ಯವಸ್ಥಾಪಕರು ಕಾರಖಾನೆಯಲ್ಲಿ ಸೂಕ್ತವಾದ ಎತ್ತರದ ಜಾಗದಲ್ಲಿ ಹೀಟ್ ಎಕ್‌ಸ್‌‌ಚೆಂಜರ್ ಅಳವಡಿಸಿದರು. ಇದಕ್ಕೆ ಆಯಿಲ್ ಮತ್ತು ಕೂಲಿಂಗ್ ಟಾವರ್‌ನಿಂದ ನೀರಿಗೋಸ್ಕರ ಬೇಕಾಗುವ ಪೈಪ್ ಜೋಡಿಸಲಾಯಿತು. ಇದಕ್ಕೋಸ್ಕರ 2 ಲಕ್ಷ ರೂಪಾಯಿ ಖರ್ಚಾಯಿತು. ಆದರೂ ಪ್ರೆಸ್‌ನಲ್ಲಿ ಯಾವುದೇ ಸುಧಾರಣೆಯಾಗಿಲ್ಲ.
 
ಅನೇಕ ರೀತಿಯ ಪ್ರಯತ್ನಗಳನ್ನೂ ಮಾಡಿಯೂ ಆಯಿಲ್‌ನ ಉಷ್ಣಾಂಶವು ಕಡಿಮೆ ಆಗುತ್ತಿರಲಿಲ್ಲ. ಈ ಪ್ರಯತ್ನಗಳಿಂದಾಗಿ ಪ್ರೆಸ್‌ನಲ್ಲಿರುವ ದೋಷಗಳು ಇನ್ನಷ್ಟು ಗಂಭೀರವಾದವು. ಪ್ರೆಸ್‌ನಲ್ಲಿದ್ದ 75 ಕಿಲೋವ್ಯಾಟ್‌ನ ರೇಡಿಯಲ್ ಪಿಸ್ಟನ್ ಪಂಪ್ ಹಾಳಾಯಿತು. ಈ ಪಿಸ್ಟನ್ ಓಪನ್ ಮಾಡಿದಾಗ ಪಿಸ್ಟನ್ ಸವೆದಿರುವುದು ಮತ್ತು ಅದರಲ್ಲಿದ್ದ ಇನ್ನಿತರ ಭಾಗಗಳೂ ಹಾಳಾಗಿರುವುದು ಗಮನಕ್ಕೆ ಬಂತು. ಆ ಪಂಪ್ ದುರಸ್ತಿ ಮಾಡಲು ಉತ್ಪಾದಕರ ಕಡೆಗೆ ಕಳುಹಿಸಲಾಯಿತು. ಪಂಪ್‌ನ ದುರಸ್ತಿಗೋಸ್ಕರ ಹಾಳಾಗಿರುವ ಭಾಗಗಳ ಬದಲಾವಣೆಗೆ ಕೆಲವಾರು ಭಾಗಗಳನ್ನು ಆಮದು ಮಾಡುವ ಆವಶ್ಯಕತೆ ಇದೆ, ಆದ್ದರಿಂದ ಪಂಪ್‌ನ ದುರಸ್ತಿಗೆ ಮೂರು ತಿಂಗಳುಗಳ ಕಾಲಾವಧಿ ಬೇಕು. ಅಲ್ಲದೇ ದುರಸ್ತಿಯ ಖರ್ಚು ಅಂದಾಜು 3 ಲಕ್ಷ ರೂಪಾಯಿಗಳಷ್ಟು ಆಗಬಹುದು, ಎಂಬುದಾಗಿ ಉತ್ಪಾದಕರು ತಿಳಿಸಿದರು.
 
ಉತ್ಪಾದಕರ ಹೇಳಿಕೆಯಂತೆ ಪಂಪ್ ದುರಸ್ತಿಯನ್ನು ಯೋಗ್ಯವಾಗಿಯೇ ಮಾಡಲಾಯಿತು. ನಂತರ ಪ್ರೆಸ್ ಮತ್ತೆ ಪ್ರಾರಂಭಿಸುವ ಮುಂಚೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಇದೇ ಕ್ಷೇತ್ರದಲ್ಲಿರುವ ಒಬ್ಬ ತಜ್ಞ ಸಲಹೆಗಾರರ ಸಲಹೆಯನ್ನು ಪಡೆದರು. ಸಲಹೆಗಾರರು ಉಂಟಾಗಿದ್ದ ದೋಷಗಳ ಕುರಿತಾದ ವಿವರಗಳನ್ನು ಅರಿತುಕೊಂಡರು. ತುಂಬಾ ಸೂಕ್ಷ್ಮವಾಗಿ ಪ್ರೆಸ್‌ನ ನಿರೀಕ್ಷಣೆಯನ್ನು ಮಾಡಿ ಕೆಲವು ಅಂಶಗಳನ್ನು ಸೂಚಿಸಿದರು.
 
1.ಹೈಡ್ರಾಲಿಕ್ ಪ್ರೆಸ್ ಒಂದು ಸಲ ಪ್ರಾರಂಭಿಸಿದಲ್ಲಿ ಅದು ಉತ್ಪಾದನೆಯು ಮುಗಿಯುವ ತನಕ ಅದರ ಮುಖ್ಯವಾದ ಪಂಪ್ ಅನ್ ಇರುತ್ತದೆ. ಅಲ್ಲಿ ಈ ಮುಂದಿನ ರೀತಿಯಲ್ಲಿ ಕೆಲಸವು ನಡೆಯುತ್ತದೆ.
ಹೈಡ್ರಾಲಿಕ್ ಶಕ್ತಿ = ಒತ್ತಡ + ಹರಿಯುವಿಕೆ
2. ರ್ಯಾಮ್ ಅಲುಗಾಡುತ್ತಿರುವವರೆಗೆ ಈ ಶಕ್ತಿಯನ್ನು ಯಾಂತ್ರಿಕ ಶಕ್ತಿಯಲ್ಲಿ ರೂಪಾಂತರಿಸಲಾಗುತ್ತದೆ.
3. ಉತ್ಪಾದನೆಯು ನಡೆಯುತ್ತಿರುವಾಗ ಕಾರ್ಯವಸ್ತು ಪ್ರೆಸ್‌ನಲ್ಲಿ ಎತ್ತಿ ಇಡುವಾಗ ಮತ್ತು ಇಳಿಸುವಾಗ, ಡೈ ಬದಲಾಯಿಸುವಾಗ, ತಪಾಸಣೆಯು ಆಗುತ್ತಿರುವಾಗ, ಡೈಗೆ ಲುಬ್ರಿಕಂಟ್ ಸೇರಿಸುವಾಗ ಮತ್ತು ಇತರ ವೇಳೆಯಲ್ಲಿ ರ್ಯಾಮ್ ನಿಲ್ಲಿಸಲಾಗಿರುತ್ತದೆ. ಇದೇ ವೇಳೆಯಲ್ಲಿ ಡೈರೆಕ್ಷನ್ ವಾಲ್ವ್ ನ್ಯುಟ್ರಲ್ ಸ್ಥಿತಿಯಲ್ಲಿ ಇರುತ್ತದೆ ಮತ್ತು ಆಯಿಲ್ ಮತ್ತೆ ತಿರುಗಿ ಟ್ಯಾಂಕ್‌ನಲ್ಲಿ ಸೇರುತ್ತದೆ.
4. ಈ ಆಯಿಲ್‌ನ ಪ್ರವಾಹಕ್ಕೆ ಯಾವುದೇ ಒತ್ತಡವು ಇರುವುದಿಲ್ಲ. ಒತ್ತಡವು ಸೊನ್ನೆಯಾದ್ದರಿಂದ ಶಕ್ತಿಯೂ ಸೊನ್ನೆಯಾಗಿರುತ್ತದೆ.
5. ಚಿತ್ರ ಕ್ರ. 2 ರಲ್ಲಿ ಹೈಡ್ರಾಲಿಕ್ ಸರ್ಕಿಟ್ ನೋಡಿದಾಗ ಮುಂಚಿನ ಮತ್ತು ನಂತರದ ಡೈರೆಕ್ಷನ್ ವಾಲ್ವ್ ನಲ್ಲಿರುವ ವ್ಯತ್ಯಾಸವು ಕಂಡುಬರುತ್ತದೆ. ಮೂಲತಃ ಡೈರೆಕ್ಷನ್ ವಾಲ್ವ್, ಪ್ರೆಸ್ ನಿಂತಿರುವಾಗ ಆಯಿಲ್ ಟ್ಯಾಂಕ್‌ಗೆ ತಲುಪುತ್ತಿತ್ತು. ಆದರೆ ನಂತರ ಅಳವಡಿಸಲಾಗಿರುವ ಡೈರೆಕ್ಷನ್ ವಾಲ್ವ್ ಆಯಿಲ್‌ನ ಪ್ರವಾಹವನ್ನು ನಿಲ್ಲಿಸುತ್ತಿತ್ತು. ಇದರಿಂದಾಗಿ ಪಂಪ್ ರಿಲೀಫ್ ವಾಲ್ವ್‌ನ ಒತ್ತಡಕ್ಕೆ ವಿರುದ್ಧವಾಗಿ ಆಯಿಲ್ ಕಳಿಸಲಾಗುತ್ತಿತ್ತು.
 

2_1  H x W: 0 x 
 
6. ಈ ಹೈಡ್ರಾಲಿಕ್ ಶಕ್ತಿಯು ಯಾಂತ್ರಿಕ ಶಕ್ತಿಯಲ್ಲಿ ರೂಪಾಂತರ ಆಗದೇ ಇರುವುದರಿಂದ ಔಷ್ಣಿಕ ಶಕ್ತಿಯಲ್ಲಿ ರೂಪಾಂತರಿಸಲ್ಪಡುತ್ತಿತ್ತು. ಇದರಿಂದಾಗಿ ಆಯಿಲ್‌ನ ಉಷ್ಣಾಂಶವು ಹೆಚ್ಚಾಗುತ್ತಿತ್ತು.
 
ಮೇಲಿನ ನಿರೀಕ್ಷಣೆಗಳನ್ನು ನೊಂದಣಿ ಮಾಡಿದ ನಂತರ ಯೋಗ್ಯವಾಗ ವಾಲ್ವ್ ಅಳವಡಿಸಲಾಯಿತು ಮತ್ತು ಪ್ರೆಸ್ ಸರಿಯಾಗಿ ಕೆಲಸ ಮಾಡಲಾರಂಭಿಸಿತು.
 
ನಿರ್ವಹಣಾ ವಿಭಾಗವು ದೋಷದ ಮೂಲ ಕಾರಣವನ್ನು ಹುಡುಕಿ, ಅದಕ್ಕೆ ಸೂಕ್ತವಾದ ಪರಿಹಾರವನ್ನು ಮಾಡಿದರು. ಆದರೆ ಹಾಳಾಗಿರುವ ಭಾಗವನ್ನು ಬದಲಾಯಿಸಿಯೂ, ಅದನ್ನು ಮೂಲ ಭಾಗದಂತೆ ಅಳವಡಿಸಲಿಲ್ಲಾ, ಆದ್ದರಿಂದ ಆಯಿಲ್‌ನ ಉಷ್ಣಾಂಶವು ಹೆಚ್ಚಾಗುವಂತಹ ಹೊಸ ಪ್ರಶ್ನೆಯೇ ಮೂಡಿಬಂತು. ಇದಕ್ಕೆ ಕಾರಣವಿಲ್ಲದೇ ಖರ್ಚು ಹೆಚ್ಚಾಗುತ್ತಾ ಹೋಯಿತು, ಸಮಯವೂ ವ್ಯರ್ಥವಾಯಿತು, ಉತ್ಪಾದನೆಯೂ ನಿಂತು ಹೋಯಿತು ಮತ್ತು ಮಾನಸಿಕ ಒತ್ತಡವನ್ನೂ ಸಹಿಸಬೇಕಾಯಿತು. ಇದರಿಂದಾಗಿ ಮಶಿನ್‌ನಲ್ಲಿರುವ ದೋಷಗಳ ಕುರಿತು ವಿಚಾರ ಮಾಡುವಾಗ ನಾವು ಮೇಲಿನ ಎಲ್ಲ ಅಂಶಗಳನ್ನು ಗಮನಿಸಿ ವಿಚಾರ ಮಾಡುವುದೂ ಆವಶ್ಯಕವಾಗಿದೆ.
 

anil_1  H x W:  
ಅನಿಲ ಅ. ಗುಪ್ತೆ
ತಾಂತ್ರಿಕ ಸಲಹೆಗಾರರು
9767890284
 
 
ಅನಿಲ ಅ. ಗುಪ್ತೆ ಇವರು ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದಾರೆ. ಇವರಿಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ 54 ವರ್ಷಗಳಷ್ಟು ದೀರ್ಘ ಕಾಲಾವಧಿಯ ಅನುಭವವಿದೆ. ಟಾಟಾ ಮೋಟರ್ಸ್‌ನಲ್ಲಿ ಮೆಂಟೆನನ್ಸ್ ಮತ್ತು ಪ್ರೊೊಜೆಕ್‌ಟ್ಸ್‌‌ಗೆ ಸಂಬಂಧಪಟ್ಟ ಪ್ಲಾಂಟ್‌ನ ಇಂಜಿನಿಯರಿಂಗ್‌ನ ಕೆಲಸದ ಅನುಭವವಿದ್ದು ಸದ್ಯಕ್ಕೆ ತಾಂತ್ರಿಕ ಸಲಹೆಗಾರರೆಂದು ಸೇವೆಯನ್ನು ಸಲ್ಲಿಸುತ್ತಿದ್ದಾರೆ.