ಮಿಲ್ಲಿಂಗ್‌ನೊಂದಿಗೆ ಡ್ರಿಲಿಂಗ್ ಮತ್ತು ಟ್ಯಾಪಿಂಗ್‌ಗೆ DTC 400XL

Udyam Prkashan Kannad    20-Jan-2020
Total Views |

1_1  H x W: 0 x 
 
 
DTC ಅಂದರೆ ಡ್ರಿಲ್ ಟ್ಯಾಪ್ ಸೆಂಟರ್. ಈ ಮಶಿನ್ ಪ್ರಮುಖವಾಗಿ ಮಿಲ್ಲಿಂಗ್‌ನೊಂದಿಗೆ ಡ್ರಿಲಿಂಗ್ ಮತ್ತು ಟ್ಯಾಪಿಂಗ್ ಆಪರೇಶನ್‌ಗೋಸ್ಕರ ಬಳಸಲಾಗುತ್ತದೆ. ಹಲವಾರು ಯಂತ್ರೋಪಕರಣಗಳಿಗೆ ವೇಗವಾಗಿ ಡ್ರಿಲಿಂಗ್ ಮತ್ತು ಟ್ಯಾಪಿಂಗ್ ಮಾಡುವಾಗ ಸಾಕಷ್ಟು ಕಡಿಮೆ ಚಿಪ್‌ನಿಂದ ಚಿಪ್‌ಗೆ ಸಮಯವನ್ನು ಉಪಯೋಗಿಸಿ ಸೈಕಲ್ ಟೈಮ್ ಕಡಿಮೆ ಮಾಡುವುದು ಅತ್ಯಾಾವಶ್ಯಕವಾಗಿರುತ್ತದೆ. DTC ಯಲ್ಲಿರುವ ಉಚ್ಚಮಟ್ಟದ ರ್ಯಾಪಿಡ್ ಮತ್ತು ಎಕ್ಸಿಲರೇಶನ್ ಬಳಸಿ ಗ್ರಾಹಕರು ಅಪೇಕ್ಷಿಸಿದಂತೆ ದೋಷರಹಿತವಾಗಿ ಯಂತ್ರಭಾಗಗಳ ಉತ್ಪಾದನೆಯನ್ನು ವೇಗವಾಗಿ ಮಾಡಬಹುದು. ಈ ಪರಿಸ್ಥಿತಿಯಲ್ಲಿ ಕೆಲವಾರು ಕೆಲಸಗಳಲ್ಲಿ ಆರ್ಥಿಕ ಮತ್ತು ತಾಂತ್ರಿಕ ಅಂಶಗಳಿಂದಾಗಿ ಸಾಂಪ್ರದಾಯಿಕವಾದ ವಿ.ಎಮ್.ಸಿ.ಯ ಆಯ್ಕೆಯನ್ನು ಮಾಡುವುದು ಸೂಕ್ತ ಅನಿಸುವುದಿಲ್ಲ.
 
ಗ್ರಾಹಕರ ಅಪೇಕ್ಷೆ ಮತ್ತು ಬೇಡಿಕೆಗಳನ್ನು ಗಮನಿಸಿ ನಮ್ಮ ಡಿಸೈನ್ ತಂಡವು DTC 400XL ಮಶಿನ್‌ನ ನಿರ್ಮಾಣವನ್ನು ಮಾಡಿರುತ್ತದೆ. ನಾವು ಅಭಿವೃದ್ಧಿ ಪಡಿಸಿದ ಈ ಮಶಿನ್‌ನಿಂದಾಗಿ ಗ್ರಾಹಕರ ಸೈಕಲ್ ಟೈಮ್ ಕಡಿಮೆ ಮಾಡುವುದು ಸಾಧ್ಯವಾಗಿದೆ ಮತ್ತು ಸ್ಪಿಂಡಲ್‌ನ ಎಕ್ಸಿಲರೇಶನ್ ಅಥವಾ ಡೆಸಿಲರೇಶನ್ ಹೆಚ್ಚು ವೇಗವಾಗಿ ಮಾಡಬಹುದಾಗಿದೆ. ಜಾಗತಿಕ ಮಟ್ಟದಲ್ಲಿ ಮಶಿನ್‌ನ ಹೋಲಿಕೆಯಲ್ಲಿ ಇದು ಹೆಚ್ಚು ವಿಶ್ವಾಾಸಾರ್ಹ ಮತ್ತು ಕಡಿಮೆ ಖರ್ಚು ಇರುವಂತಹದ್ದಾಾಗಿದೆ. ಇದರ ಸಹಾಯದಿಂದ ಉತ್ಪಾಾದಕರು ಅಪೇಕ್ಷಿಸಿರುವ ನಿಖರತೆಯೊಂದಿಗೆ ಹೊಂದಾಣಿಕೆಯನ್ನು ಮಾಡದೇ ಕಡಿಮೆ ಸೈಕಲ್ ಟೈಮ್‌ನಲ್ಲಿ ಚಿಕ್ಕ ಯಂತ್ರಭಾಗಗಳ ತಯಾರಿಕೆಯನ್ನು ಮಾಡಬಲ್ಲರು.
 
DTC 400XL ಮಶಿನ್‌ ನ ವೈಶಿಷ್ಟ್ಯಗಳು
 
ಡ್ರಿಲ್ ಟ್ಯಾಪ್ ಮಶಿನಿಂಗ್ ಸೆಂಟರ್ DTC 400XL ಸಂಪೂರ್ಣವಾದ ಮಿಲ್ಲಿಂಗ್ ಸಾಮರ್ಥ್ಯದೊಂದಿಗೆ ಹೆಚ್ಚು ವೇಗವಾಗಿ ಡ್ರಿಲ್ ಟ್ಯಾಪ್ ಕೆಲಸಗಳಿಗೋಸ್ಕರ ಡಿಸೈನ್ ಮಾಡಲಾಗಿದೆ. ಈ ಮಶಿನ್ ಸರಳವಾದ ಮತ್ತು ದೃಢವಾಗಿದ್ದು ಅದರಲ್ಲಿ BT-30/BBT-30 ಸ್ಪಿಂಡಲ್ ಅಳವಡಿಸಲಾಗಿದೆ. ಯಂತ್ರಣೆಯ ಉಚ್ಚಮಟ್ಟದ ಶಕ್ತಿ, ಹೆಚ್ಚು ವೇಗ ಮತ್ತು ನಿರ್ದೋಷವಾದ ಟ್ಯಾಪಿಂಗ್ ಸಾಧಿಸಲು ಸೂಕ್ತವಾದ ರಚನೆಯ ಡಿಸೈನ್ ಮಾಡಿ ಮಶಿನ್ ಅಭಿವೃದ್ಧಿ ಪಡಿಸಲಾಗಿದೆ. ಈ ಮಶಿನ್ ಲಾಭಕಾರಿಯಾಗಿದ್ದು ರಚನೆಯ ದೃಢತೆಯನ್ನೂ ಕಾಪಾಡಲಾಗಿದೆ. ಹೆಚ್ಚು ಒಳ್ಳೆಯ ದೃಢತೆಗೋಸ್ಕರ ಮತ್ತು ಉಚ್ಚಮಟ್ಟ ಕೆಲಸಕ್ಕೋಸ್ಕರ ಮಶಿನ್‌ನಲ್ಲಿ ರೋಲರ್ ವಿಧದಲ್ಲಿರುವ LMಗೈಡ್‌ವೇಜ್ ಅಳವಡಿಸಲಾಗಿದೆ. ಮಶಿನ್‌ನ 3 X, Y ಮತ್ತು Z ಈ ಏಕ ರೇಖೆಯ ಅಕ್ಷಗಳಲ್ಲಿ ಅನುಕ್ರಮವಾಗಿ 60/60/48 ಮೀ./ ನಿಮಿಷಗಳಷ್ಟು ವೇಗವಿರುವ ರ್ಯಾಪಿಡ್ ಟ್ರಾವರ್ಸ್‌ಗಳನ್ನು ನೀಡಲಾಗಿದೆ. ಆದ್ದರಿಂದ ನಿರ್ದೋಷವಾದ ಟ್ಯಾಪಿಂಗ್ ಆಗುವುದರೊಂದಿಗೆ ಸೈಕಲ್ ಟೈಮ್ ಕಡಿಮೆ ಆಗುವಲ್ಲಿ ಸಹಾಯವಾಗುತ್ತದೆ. ದೃಢವಾದ ರಚನೆ ಮತ್ತು ಹೆಚ್ಚು ವೇಗದಿಂದಾಗಿ ಡ್ರಿಲ್ ಟ್ಯಾಪ್ ಮಶಿನಿಂಗ್ ಸೆಂಟರ್‌ನಲ್ಲಿ ಹೆಚ್ಚು ನಿಖರವಾಗಿರುವ ಮತ್ತು ಉತ್ಪಾಾದನೆಗೆ ಸೂಕ್ತವಾದ ಸಾಮರ್ಥ್ಯವು ಲಭಿಸುತ್ತದೆ.
 
ಸ್ವಯಂಚಾಲಿತ ಟೂಲ್ ಚೇಂಜರ್
 
ಟೂಲ್‌ಗಳನ್ನು ಬದಲಾಯಿಸಲು ಸಂಪೂರ್ಣ ಸ್ವಯಂಚಲಿತವಾದ ಟೂಲ್ ಚೇಂಜರ್ (ATC) ಡಿಸ್‌ಕ್‌ ಮ್ಯಾಾಗ್‌ಝಿನ್ ಓರೆಯಾಗಿ ಮಾಡುವ ಬದಲು, ನಾವು ಒಂದೊಂದು ಟೂಲ್ ಪಾಕೇಟ್ ಓರೆ ಮಾಡುವಂತಹ ಉಪಾಯವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರು. ಇದರಿಂದಾಗಿ ಅಲುಗಾಡುವಂತಹ ಎಲ್ಲ ವಸ್ತುಗಳ ಜಡತ್ವವು (ಇನ್ಸರ್ಶಿಯಾ) ಗಮನಾರ್ಹವಾಗಿ ಕಡಿಮೆಯಾಗಿ ಕೇವಲ ಒಂದೇ ಪಾಕೇಟ್‌ನ ಗಾತ್ರದಷ್ಟು ಉಳಿದಿದೆ. ಇದರಿಂದಾಗಿ ನಮಗೆ ಗರಿಷ್ಠ 10,000 ಆರ್.ಪಿ.ಎಮ್.ಗೋಸ್ಕರ 1.8 ಸೆಕಂಡುಗಳ ತನಕ ಅಂದರೆ ಜಪಾನೀ ಮಶಿನ್‌ಗಳಿಗೆ ಸರಿಸಮಾನವಾಗಿ ‘ಚಿಪ್‌ನಿಂದ ಚಿಪ್‌ನ ಸಮಯ’ ಕಡಿಮೆ ಮಾಡಲಾಯಿತು.
 
ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಬಳಸಿ ಸಿ.ಎನ್.ಸಿ. ಪ್ರಣಾಳಿಕೆಯಲ್ಲಿ ವಿಶಿಷ್ಟವಾದ ಡಿಸೈನ್ ಮಾಡಲಾಗಿರುವ ಮತ್ತು ಉತ್ಪಾದಿಸಲ್ಪಟ್ಟ ಕ್ಯಾಮ್‌ನಿಂದಾಗಿ ಇದು ಸಾಧ್ಯವಾಯಿತು. IMTX-2015 ರಲ್ಲಿ ಪ್ರಸ್ತುತ ಪಡಿಸಿರುವ 16 ಟೂಲ್ ಡಿಸ್‌ಕ್‌ ಮ್ಯಾಾಗ್‌ಝಿನ್ ಇರುವ ಮೊದಲ ಪ್ರೊಟೋಟೈಪ್ ಮಶಿನ್ ಆಂತರರಾಷ್ಟ್ರೀಯ ಗುಣಮಟ್ಟದ್ದಾಾಗಿತ್ತು, ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಇಂದು DTC 400XL ನ ವಿವಿಧ ಪ್ರಕಾರದ 150 ಕ್ಕಿಂತ ಹೆಚ್ಚು ಮಶಿನ್‌ಗಳು ದೇಶದಾದ್ಯಂತ ಅನೇಕ ಗ್ರಾಹಕರಲ್ಲಿ ಕಾರ್ಯಗತವಾಗಿವೆ.
 
ವಿಕಾಸವನ್ನು ಮಾಡುವಾಗ ಎದುರಾಗಿರುವ ಸಮಸ್ಯೆಗಳು
 

2_1  H x W: 0 x 
 
ಪ್ರಾಾರಂಭದಲ್ಲಿ ಟೂಲ್ ಬದಲಾಯಿಸುವಾಗ ಉಂಟಾಗುವಂತಹ ಶಬ್ದವನ್ನು ಕಡಿಮೆ ಮಾಡುವಲ್ಲಿ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತಿದ್ದವು. ಸ್ಪಿಂಡಲ್ ಟೇಪರ್ ಡಿಸ್‌ಕ್‌ ಸ್ಪ್ರಿಂಗ್ ಸ್ಟ್ಯಾಾಕ್‌ಗೆ ಜೋಡಿಸಿರುವ ಟೂಲ್ ಚೇಂಜರ್ ಕ್ಲ್ಯಾಾಂಪ್ ಮತ್ತು ಡಿಕ್ಲ್ಯಾಂಪ್‌ಗೋಸ್ಕರ ಬಳಸಲಾಗಿರುವ ಪ್ರಣಾಳಿಕೆಯಿಂದ ಶಬ್ದದ ಮಟ್ಟವು ಅನುಮತಿಯಿರುವ ಮಟ್ಟಕ್ಕಿಂತ ಹೆಚ್ಚು ಇತ್ತು. ಗ್ರಾಹಕರಿಗೆ ಸೈಕಲ್ ಟೈಮ್ ಕಡಿಮೆ ಮಾಡುವುದು ಸಾಧ್ಯವಿರಬೇಕು, ಎಂಬುಕ್ಕೋಸ್ಕರ ನಾವು ಟೂಲ್ ಬದಲಾಯಿಸುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದಾಗ ಈ ರೀತಿಯ ಶಬ್ದವು ಉಂಟಾಗುತ್ತಿತ್ತು. ಡಿಕ್ಲ್ಯಾಾಂಪಿಂಗ್ ಬಲವು ನೇರವಾಗಿ ಫೇಸ್ ಕ್ಯಾಾಮ್‌ನೆಡೆಗೆ ಬರುವುದರಿಂದ ಅನುಮತಿ ಇರುವ ಮಿತಿಗಿಂತ ಹೆಚ್ಚು ಶಬ್ದವು ಉಂಟಾಗುತ್ತಿತ್ತು, ಎಂಬ ಅಂಶವು ಸೂಕ್ಷ್ಮವಾಗಿ ಗಮನ ಹರಿಸಿದಾಗ ಕಂಡುಬಂತು.
 
ಹೊಸ ವೈಶಿಷ್ಟ್ಯಗಳು
 
ಪ್ಯಾಕೇಟ್ ಓರೆಯಾಗುವಂತಹ ಸ್ವಯಂಚಾಲಿತ ಟೂಲ್ ಚೇಂಜರ್
1.8 ಸೆಕಂಡುಗಳಷ್ಟು ಕಡಿಮೆಯಾಗಿರುವ ಚಿಪ್‌ನಿಂದ ಚಿಪ್‌ನ ಸಮಯ : ಚಿಪ್‌ನಿಂದ ಚಿಪ್‌ನ ಸಮಯದ ವ್ಯಾಾಖ್ಯೆಯನ್ನು ‘ಟೂಲ್ ಬದಲಾಯಿಸುವ ವೇಳೆ’ ಎಂದು ಹೇಳಲಾಗುತ್ತದೆ. ಒಂದುವೇಳೆ X, Y ಮತ್ತು Z ಅಕ್ಷವಿರುವ ಮಶಿನ್ ಗರಿಷ್ಠ N ಆರ್.ಪಿ.ಎಮ್.ನಿಂದ ಕೆಲಸ ಮಾಡುತ್ತಿದ್ದಲ್ಲಿ, ಇಂತಹ ಟೂಲ್ ಬದಲಾಯಿಸುವ ಆಜ್ಞೆಯನ್ನು ನೀಡಿದ ಸಮಯದಿಂದ ಅದನ್ನು ಅಳೆಯಲಾಗುತ್ತದೆ. ಆಗ ಸ್ಪಿಂಡಲ್ N/2 ನಷ್ಟು ವೇಗದಿಂದ ತಿರುಗುತ್ತದೆ. ಅದರಂತೆಯೇ ಅಕ್ಷಗಳ ಸ್ಟ್ರೋಕ್‌ನ ಸ್ಥಿತಿಯು ಸ್ಟ್ರೋಕ್‌ನ ಮಧ್ಯ ಭಾಗದಲ್ಲಿರಬೇಕು. ಟೂಲ್ ಬದಲಾಯಿಸುವ ಆಜ್ಞೆಯು ಸಿ.ಎನ್.ಸಿ. ಪ್ರಣಾಳಿಕೆಯಿಂದ ಮಶಿನ್ ಬರುವಾಗ ಎಲ್ಲ ಅಕ್ಷಗಳಲ್ಲಿ ಟೂಲ್ ಬದಲಾಯಿಸಲು ಸ್ಪಿಂಡಲ್‌ನ್ನು ಆ ದಿಕ್ಕಿಗೆ ಅಳವಡಿಸಿಯೇ ಕಾರ್ಯಗತಗೊಳಿಸಬೇಕು. ಅಕ್ಷವನ್ನು ಸ್ಟ್ರೋಕ್ ಮಧ್ಯ ಭಾಗಕ್ಕೆ ಬರಬೇಕು ಮತ್ತು ಸ್ಪಿಂಡಲ್‌ನಲ್ಲಿ N/2 ನಷ್ಟು ವೇಗವನ್ನು ಸಾಧಿಸಬೇಕು. 
 
ಇಂದು ಮಶಿನ್‌ನಲ್ಲಿ ಕಂಟ್ರೋಲ್ ಸಿಸ್ಟಮ್ ಅಪ್‌ಗ್ರೇಡ್ ಮಾಡಿ ಗ್ರಾಹಕರಿಗೆ ‘ಚಿಪ್‌ನಿಂದ ಚಿಪ್‌ನ ಸಮಯ’ 1.5 ಸೆಕಂಡುಗಳಷ್ಟು ಕಡಿಮೆ ಮಾಡುವುದು ಸಾಧ್ಯವಾಗಿದೆ. ಇದರ ಹೊರತಾಗಿ ನಾವು 24 ಟೂಲ್‌ಗಳಿರುವ ಒಂದು ವೈವಿಧ್ಯತೆಯನ್ನೂ ಉಪಲಬ್ಧ ಮಾಡಿಕೊಟ್ಟಿದ್ದೇವೆ.
 
ಮಶಿನ್‌ನ ವೈಶಿಷ್ಟ್ಯಗಳು
 

3_1  H x W: 0 x 
 
X/ Y/ Z ಅಕ್ಷಗಳಿಗೋಸ್ಕರ 60/ 60/ 48 ಮೀ./ ನಿಮಿಷಗಳಷ್ಟು ಹೆಚ್ಚು ರ್ಯಾಪಿಡ್.
ಮಶಿನ್‌ನ ರೆಸ್ಪಾಾನ್‌ಸ್‌ ಟೈಮ್ ಕಡಿಮೆ.
ಸ್ಪಿಂಡಲ್‌ನ ಹೆಚ್ಚು ವೇಗವಾದ ಎಕ್ಸಲರೇಶನ್/ಡಿಎಕ್ಸಲರೇಶನ್
ಸುಲಭವಾದ ಮಶಿನ್ : ವಿ.ಎಮ್.ಸಿ. ಮಶಿನ್‌ನ ಚೌಕಟ್ಟಿನಲ್ಲಿ DTC ಮಶಿನ್ ತಯಾರಿಸಲಾಗಿದೆ. ಗಾತ್ರದಲ್ಲಿರುವ ವ್ಯತ್ಯಾಸವು DTC1700x2650x2500 ಮಿ.ಮೀ., ಆದರೆ ಮಿಲ್ಲಿಂಗ್ 1750x2750x2650 ಮಿ.ಮೀ.ನಷ್ಟು ಇದೆ.
 
ಗ್ರಾಹಕರ ಅನುಭವ
 
ದೇಶದಾದ್ಯಂತ ಇರುವ ನಮ್ಮ ಗ್ರಾಹಕರಲ್ಲಿ ಸದ್ಯಕ್ಕೆ 150 ಕ್ಕಿಂತಲೂ ಹೆಚ್ಚು DTC 400XL ಮಶಿನ್‌ಗಳು ಯಶಸ್ವಿಯಾಗಿ ಕಾರ್ಯಗತವಾಗಿವೆ. ಮಶಿನ್‌ನಲ್ಲಿ ಫಾನುಕ್ ಕಂಪನಿಯ ಸಿ.ಎನ್.ಸಿ. 0imf ಪ್ರಣಾಳಿಕೆ ಮತ್ತು X ಅಕ್ಷದ ಸ್ಟ್ರೋಕ್‌ನ 2 ವಿಧಗಳಲ್ಲಿ 5.5kW/7.5kW ಸ್ಪಿಂಡಲ್ ಪವರ್ ನೀಡಲಾಗಿದೆ. ಮಶಿನ್ ಸ್ಟ್ರೋಕ್‌ನಲ್ಲಿ 500, 400 ಮತ್ತು 320 X, Y ಮತ್ತು Z ಅಕ್ಷ ಹೀಗೆ ಸ್ಟ್ರೋಕ್‌ನ ವಿಧಗಳನ್ನು ನೀಡಲಾಗಿದೆ. ಇದು 750x400 ಟೇಬಲ್‌ನ ಗಾತ್ರದಲ್ಲಿ ಉಪಲಬ್ಧವಿವೆ. ಇನ್ನೊಂದು ವಿಧದಲ್ಲಿ 700, 400 ಮತ್ತು 320 X, Y ಮತ್ತು Z ಅಕ್ಷದ ಸ್ಟ್ರೋಕ್ ಇರುವ 850x400 ಟೇಬಲ್‌ನ ಗಾತ್ರದೊಂದಿಗೆ ನೀಡಲಾಗಿದೆ. ಈ ಎರಡು ವಿಧಗಳಲ್ಲಿಯೂ ಸ್ಪಿಂಡಲ್ ಗರಿಷ್ಠ ವೇಗವು 10,000 ಆರ್.ಪಿ.ಎಮ್.ನಷ್ಟು ಇರುತ್ತದೆ.
 
ಮೇಲಿನ ಎಲ್ಲ ವೈಶಿಷ್ಟ್ಯಗಳು ಒಂದೇ ಉತ್ಪಾಾದನೆಯಲ್ಲಿ ಇರುವುದರಿಂದ ಡ್ರಿಲ್ಲಿಂಗ್ ಮತ್ತು ಟ್ಯಾಪಿಂಗ್‌ನಂತಹ ಮಹತ್ವದ ಕ್ರಿಯೆಗಳಲ್ಲಿ ಅನೇಕ ಗ್ರಾಹಕರಿಗೆ ಆವರ್ತನದ ಸಮಯ 40% ದಿಂದ 60% ದಷ್ಟು ಕಡಿಮೆ ಮಾಡುವುದು ಸಾಧ್ಯವಾಯಿತು. ಇದರಿಂದಾಗಿ ಆವಶ್ಯಕವಾದ ನಿರ್ದೋಷದೊಂದಿಗೆ ಹೊಂದಾಣಿಕೆಯನ್ನು ಮಾಡದೇ ಗ್ರಾಹಕರು ಹೆಚ್ಚು ಉತ್ಪಾಾದನೆಯ ಸಾಮರ್ಥ್ಯವನ್ನು ಸಾಧಿಸಿದರು. ಅಲ್ಲದೇ ಉತ್ಪಾಾದನೆಗಳ ಬೇಡಿಕೆಯನ್ನು ಸೂಕ್ತವಾದ ವೇಳೆಯಲ್ಲಿ ಪೂರ್ತಿಗೊಳಿಸುವುದೂ ಸಾಧ್ಯವಾಯಿತು.
 
ಕೇಸ್ ಸ್ಟಡಿ
 
ಚಾಕಣ್ (ಪುಣೆಯ ಹತ್ತಿರ) ಎಂಬಲ್ಲಿರುವ ಸುನಿತೀ ಇಂಜಿನಿಯರಿಂಗ್ ಕಂಪನಿಯಲ್ಲಿ 5 ಸಿ.ಎನ್.ಸಿ. ಮಶಿನ್ ಮತ್ತು ಒಂದು ವಿ.ಎಮ್.ಸಿ. ಮಶಿನ್ ಇತ್ತು. ಈ ಮಶಿನ್‌ನ ಇಂಡೆಕ್ಸಿಂಗ್ ಸಮಯವು ಹೆಚ್ಚಾಗಿತ್ತು. ಇದರಿಂದಾಗಿ ಒಟ್ಟು ಆವರ್ತನದ ಸಮಯದಲ್ಲಿ 25% ಸಮಯವು ಇಂಡೆಕ್ಸಿಂಗ್ ಮಾಡಲು ಬೇಕಾಗುತ್ತಿತ್ತು. ಆದ್ದರಿಂದ ಅವರು ಈಇ 400ಗಿಔ ಮಶಿನ್ ಖರೀದಿಸುವ ವಿಚಾರವನ್ನು ಮಾಡಿದರು.
 

4_1  H x W: 0 x 
 
ಈ ಮಶಿನ್‌ನ ಟೂಲ್ ಇಂಡೆಕ್ಸಿಂಗ್ ಟೈಮ್ ಕೇವಲ 3 ರಿಂದ 4 ಸೆಕಂಡುಗಳಷ್ಟು ಇದ್ದು ರ್ಯಾಪಿಡ್ 60 ಮೀ./ ನಿಮಿಷಗಳಷ್ಟು ಇದೆ. ಹಳೆಯ ಮಶಿನ್‌ನಲ್ಲಿ ಒಂದು ಟೂಲ್ ಬದಲಾಯಿಸಲು ನಮಗೆ 12 ಸೆಕಂಡುಗಳ ಅವಧಿಯು ಬೇಕಾಗುತ್ತಿತ್ತು. ರೆಗ್ಯುಲೇಟರ್ ಬಾಡಿಯ ಒಂದು ಭಾಗವು ಹಳೆಯ ವಿ.ಎಮ್.ಸಿ.ಯಲ್ಲಿ ತಯಾರಿಸುವಾಗ ನಮಗೆ 5 ಭಾಗಗಳಿಗೆ 2 ನಿಮಿಷ 20 ಸೆಕಂಡುಗಳ ಅವಧಿಯು ತಗಲುತ್ತಿತ್ತು. ಕಳೆದ ವರ್ಷದಿಂದ ನಾವು DTC 400XL ಮಶಿನ್ ಬಳಸುತ್ತಿದ್ದೇವೆ. ಈಗ ಈ ಭಾಗಗಳನ್ನು ಕೇವಲ 1.5 ನಿಮಿಷಗಳಲ್ಲಿಯೇ ಪೂರ್ತಿಗೊಳಿಸಲಾಗುತ್ತಿದೆ. ಮಶಿನ್‌ನ ಗಾತ್ರ ಅಚ್ಚುಕಟ್ಟಾಾಗಿದ್ದು ಅದರ ಬೆಲೆಯೂ ಪೂರೈಸುವಂತೆ ಇದೆ, ಎಂದು ‘ಸುನಿತೀ’ ಕಂಪನಿಯು ಶ್ರೀ. ಬಾಳಾಸಾಹೇಬ್ ಜೋಗದಂಡ ಇವರು ಈ ಮಶಿನ್‌ನ ವೈಶಿಷ್ಟ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
 
 
ಎ. ಈರಣ್ಣ
ಉಪ ಮಹಾವ್ಯವಸ್ಥಾಪಕರು,
ಡಿಸೈನ್ ಮತ್ತು ಅಭಿವೃದ್ಧಿ,
ಏಸ ಮ್ಯಾನಿಫ್ಯಾಕ್ಚರಿಂಗ್ ಸಿಸ್ಟಮ್‌ಸ್‌ 
9741460370
 
ಎ. ಈರಣ್ಣ ಇವರು ಕಳೆದ 5 ವರ್ಷಗಳಿಗಿಂತ ಹೆಚ್ಚು ಕಾಲಾವಧಿಯಲ್ಲಿ ಏಸ ಮ್ಯಾನಿಫ್ಯಾಾಕ್ಚರಿಂಗ್ ಸಿಸ್ಟಮ್‌ನ ಡಿಸೈನ್ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಉಪ ಮಹಾ ವ್ಯವಸ್ಥಾಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾಾರೆ. ಅವರು ಮಶಿನ್ ಡಿಸೈನ್, ಫಿಕ್ಸ್ಚರಿಂಗ್ ಮತ್ತು ಟೂಲ್ ಡಿಸೈನ್ ಕ್ಷೇತ್ರದಲ್ಲಿ 31 ವರ್ಷಗಳಷ್ಟು ದೀರ್ಘ ಅನುಭವವನ್ನು ಹೊಂದಿದ್ದಾಾರೆ.