ಸಿ.ಎನ್.ಸಿ. ಟೂಲ್ ಟರೇಟ್ ಅಲೈನ್‌ಮೆಂಟ್

Udyam Prkashan Kannad    30-Jan-2020
Total Views |


ಟೂಲ್ ಟರೇಟ್ ಇದು ಸಿ.ಎನ್.ಸಿ. ಮಶಿನ್‌ನ ಅವಿಭಾಜ್ಯವಾದ ಭಾಗವಾಗಿದೆ, ಎಂಬುದು ತಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಮಶಿನ್‌ನಲ್ಲಿ ಕೆಲಸ ಮಾಡುತ್ತಿರುವಾಗ ತುಂಬಾ ಸಲ ತಂತ್ರಜ್ಞರಿಂದ ಆದ ತಪ್ಪಿನಿಂದಾಗಿ ಅಥವಾ ತಪ್ಪಾಾದ ಆಫ್‌ಸೆಟ್ ನೀಡಿದ್ದರಿಂದ ಅಪಘಾತಗಳಾಗುತ್ತಿದ್ದವು. ಈ ಪರಿಸ್ಥಿತಿಯಲ್ಲಿ ಟರೇಟ್ ಅಪ್ಪಳಿಸಿದ್ದರಿಂದ ಸ್ಪಿಂಡಲ್ ಅಥವಾ ಟರೇಟ್ ಅಲೈನ್‌ಮೆಂಟ್ ಹಾಳಾಗುತ್ತಿತ್ತು.
 

1_1  H x W: 0 x 
 
ಮಶಿನ್‌ನಲ್ಲಿ BTP80, BTP 100 ಇತ್ಯಾದಿ ಬೇರೆಬೇರೆ ವಿಧದ ಟರೇಟ್‌ಗಳಿರುತ್ತವೆ. ಟರೇಟ್ ಮಶಿನ್‌ನಲ್ಲಿ 8 ಅ್ಯಲನ್
ಬೋಲ್ಟ್‌‌ಗಳನ್ನು ಅಳವಡಿಸಲಾಗಿರುತ್ತದೆ. ಟರೇಟ್‌ನ ಭಾಗಗಳ ನಷ್ಟವಾಗಬಾರದು ಅಥವಾ ಒಳಗಿನ ಭಾಗಗಳಲ್ಲಿ ಕಡಿಮೆ ಒತ್ತಡ ಬೀರಬೇಕು ಎಂಬುದಕ್ಕೋಸ್ಕರ ಇಂತಹ ಪರಿಸ್ಥಿತಿಯಲ್ಲಿ ಮೌಂಟಿಂಗ್ ಬೋಲ್ಟ್‌ ಆ ಜಾಗದಿಂದ ಸ್ವಲ್ಪ ಜಾರುವಂತಹ ವ್ಯವಸ್ಥೆಯು ಇರುತ್ತದೆ. ಇದರಿಂದಾಗಿ ಅಪಘಾತವಾದ ನಂತರ ಈ ಬೋಲ್ಟ್‌ ಸ್ವಲ್ಪ ಸ್ಲಿಪ್ ಮತ್ತು ಟರೇಟ್ ಜಾಗದಿಂದ ಅಲುಗಾಡುತ್ತದೆ. ಅಪಘಾತವಾದ ನಂತರ ಟರೇಟ್ X ಮತ್ತು Z ಅಕ್ಷದ ಅಲೈನ್‌ಮೆಂಟ್ ಪರೀಕ್ಷಿಸಬೇಕಾಗುತ್ತದೆ. ಸಾಮಾನ್ಯವಾಗಿ ಉತ್ಪಾದನೆ ಅಥವಾ ನಿರ್ವಹಣೆಯ ಅನುಭವವಿರುವ ಪ್ರತಿಯೊಬ್ಬ ತಂತ್ರಜ್ಞರು X ಅಕ್ಷದ ಅಲೈನ್‌ಮೆಂಟ್ ಮಾಡಬಲ್ಲರು. ಆದರೆ Z ಅಕ್ಷದ ಅಲೈನ್‌ಮೆಂಟ್ ಕಠಿಣವಾಗಿರುತ್ತದೆ, ಕಾರಣ ಅಪಘಾತವಾದಲ್ಲಿ ಟೂಲ್ ಡಿಸ್ಕವರ್ ಒತ್ತಡ (ಲೋಡ್) ಉಂಟಾಗುತ್ತದೆ. ಡಿಸ್ಕರ ಸ್ವಲ್ಪ ಎಡಬದಿಯಲ್ಲಿ ಕೆಳಗೆ ಸರಿಯುತ್ತದೆ. ಆ ಬದಿಗೆ ಭಾರವು ಹೆಚ್ಚಾಾಗಿದ್ದರಿಂದ ಅದರ ಅಲೈನ್ಮೆಂಟ್ ಮಾಡುವುದು ತುಂಬಾ ಕಠಿಣ ಮತ್ತು ವೇಳೆಯನ್ನು ವ್ಯರ್ಥ ಮಾಡುತ್ತದೆ.
 
ಒಂದು ವೇಳೆ ಅಲೈನ್ಮೆಂಟ್ ಯೋಗ್ಯ ರೀತಿಯಲ್ಲಿ ಮಾಡದೇ ಇದ್ದಲ್ಲಿ, ಯಂತ್ರಣೆಯಾಗುತ್ತಿರುವ ಭಾಗಗಳ ಮಾಪನವು ತಪ್ಪಾಾಗುವ, ಅದರಲ್ಲಿ ಟೂಲ್‌ನ ಚ್ಯಾಾಟರ್‌ನ ಗುರುತುಗಳು ಕಾಣುವ ಹಾಗೆಯೇ ಸಿಮ್ ಅಥವಾ ಟೂಲ್ ಹೋಲ್ಡರ್ ತುಂಡಾಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಇನ್ಸರ್ಟ್‌ನ ಬಾಳಿಕೆಯಲ್ಲಿಯೂ ಪರಿಣಾಮ ಬೀರುತ್ತದೆ. ಟೂಲ್‌ನ ರೇಕ್ ಕೋನ ಬದಲಾಗುತ್ತದೆ ಅಥವಾ ಟರ್ನಿಂಗ್ ಮಾಡುವಾಗ ಪಾಯಿಂಟ್ ಕಾಂಟ್ಯಾಾಕ್‌ಟ್‌ ಆಗುವ ಬದಲಾಗಿ ಫೇಸ್ ಕಾಂಟ್ಯಾಾಕ್‌ಟ್‌ ಆಗಿ ರಬಿಂಗ್ ಆಗಬಹುದು. ಇದರಿಂದಾಗಿ ಅಯೋಗ್ಯವಾದ ಉತ್ಪಾಾದನೆಯಾಗಿ ಉತ್ಪಾಾದನೆಯ ಮತ್ತು ಮಟೀರಿಯಲ್ ನಷ್ಟವಾಗಿ ತುಂಬಾ ದೊಡ್ಡ ನಷ್ಟವುಂಟಾಗುತ್ತದೆ. ಈ ರೀತಿ ಆಗಬಾರದು ಇದಕ್ಕೋಸ್ಕರ ಈ ಅಲೈನ್‌ಮೆಂಟ್‌ನ ಪ್ರಕ್ರಿಯೆಯ ಯೋಗ್ಯವಾದ ಮಾಹಿತಿಯ ತಿಳುವಳಿಕೆ ಇರುವುದು ಅವಶ್ಯಕವಾಗಿರುತ್ತದೆ. ಅಲೈನ್‌ಮೆಂಟ್ ಆಗದೇ ಮಶಿನ್ ಅನ್ ಮಾಡುವುದು ತುಂಬಾ ತೊಂದರೆಯನ್ನುಂಟು ಮಾಡುತ್ತದೆ.
 

2_1  H x W: 0 x 
 
ಹೊಸ ರೀತಿ
 
Z ಅಕ್ಷದ ಅಲೈನ್ಮೆಂಟ್ ಸುಲಭವಾದ ರೀತಿಯಲ್ಲಿ ಮಾಡಲು ನಮ್ಮ ಕೈಝನ್ ಟೀಮ್ ಹುಡುಕಿರುವ ತಂತ್ರವನ್ನು ಬಳಸಿದ ಕುರಿತು ವಿವರಗಳನ್ನು ಈ ಮುಂದೆ ನೀಡಲಾಗಿದೆ.
ಇದಕ್ಕೋಸ್ಕರ ಒಂದು 60 ಮಿ.ಮೀ. x 60 ಮೀ.ಮೀ. x 10 ಮಿ.ಮೀ. ಆಕಾರದ ಚೌಕೋನದ ಪ್ಲೇಟ್ ಬೇಕಾಗುತ್ತದೆ. ಈ ಪ್ಲೇಟ್‌ನಲ್ಲಿ ಡ್ರಿಲಿಂಗ್ ಮತ್ತು ಟ್ಯಾಪಿಂಗ್ ಮಾಡಿ ಅದನ್ನು X ಅಕ್ಷದ ಸ್ಲೈಡ್‌ನಲ್ಲಿ ಅಳವಡಿಸಲಾಯಿಸಿದಲ್ಲಿ ಅದು ಅಲುಗಾಡುವುದಿಲ್ಲ. 10 ಮಿ.ಮೀ. ದಪ್ಪದ ಈ ಚೌಕೋನದ ಪ್ಲೇಟ್‌ನಲ್ಲಿ 10 ಆಕಾರದ ಟ್ಯಾಾಪಿಂಗ್ ಮಾಡಲಾಯಿತು. ಹಾಗೆಯೇ ಒಂದು ರಂಧ್ರವನ್ನು ಆರುಪಾರಾಗಿ ಮಾಡಲಾಯಿತು. ಟ್ಯಾಪಿಂಗ್ ಇರುವ ಮೊದಲನೆಯ ರಂಧ್ರದಿಂದ (ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ) ಟರೇಟ್ ಟೂಲ್ ಡಿಸ್ಕ್‌ ತಳ್ಳಲಾಯಿತು. ಹಾಗೆಯೇ ಎರಡನೇ ರಂಧ್ರದಿಂದ ಟರೇಟ್ ಬಾಡಿಯಲ್ಲಿರುವ ಥ್ರೆಡೆಡ್ ರಂಧ್ರದಲ್ಲಿ ಹೋಗುವ ಸ್ಕ್ರೂನಿಂದಾಗಿ ಅದನ್ನು ಎಳೆಯಲಾಯಿತು. ಈ ರೀತಿಯಲ್ಲಿ Z ಅಕ್ಷವನ್ನು ಅಲೈನ್ ಮಾಡಬಹುದಾಗಿದೆ. 
 
ಲಾಭಗಳು
 
> ಮಶಿನ್ ಅಫ್ ಮಾಡುವ ಕಾಲಾವಧಿಯನ್ನು ಕಡಿಮೆ ಮಾಡಬಹುದಾಗಿದೆ. ವಿಶೇಷವಾಗಿ ಸಿ.ಎನ್.ಸಿ. ಮಶಿನ್ ಬಳಸುವವರಿಗೆ ಈಗ ಮಶಿನ್ ಹೆಚ್ಚು ಕಾಲ ಆಫ್ ಮಾಡಿ ಇಡುವ ಆವಶ್ಯಕತೆ ಇರುವುದಿಲ್ಲ.
ತುಂಬಾ ಕಡಿಮೆ ಕುಶಲತೆಯ ಅಗತ್ಯವು ಕಂಡುಬರುತ್ತದೆ.
ಈ ತಂತ್ರವನ್ನು ಕಾರ್ಯಗತಗೊಳಿಸಲು ತುಂಬಾ ಕಡಿಮೆ ಅಂಶಗಳ ಆವಶ್ಯಕತೆ ಇರುತ್ತದೆ.
 
 

mandar mahajan_1 &nb 
ಮಂದಾರ ಮಹಾಜನ್
ಬಿಜಿನೆಸ್ ಹೆಡ್
ಮೈಕ್ರೊಮ್ಯಾಟಿಕ್ ಮಶಿನ್ ಟೂಲ್ಸ್‌ ಪ್ರೈ.ಲಿ. 
9890623211
 
ಮೆಕ್ಯಾಾನಿಕಲ್ ಇಂಜಿನಿಯರ್ ಪದವೀಧರರಾಗಿರುವ ಶ್ರೀ. ಮಂದಾರ್ ಮಹಾಜನ್ ಇವರು ಮೈಕ್ರೋಮ್ಯಾಟಿಕ್ ಮಶಿನ್ ಟೂಲ್‌ಸ್‌ ಪ್ರೈ.ಲಿ. ಎಂಬ ಕಂಪನಿಯಲ್ಲಿ ಬಿಜಿನೆಸ್ ಹೆಡ್ ಎಂಬ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾಾರೆ. ಅವರು ಪ್ರೊಡಕ್ಷನ್ ಮತ್ತು ಮೆಂಟೆನನ್‌ಸ್‌‌ನಲ್ಲಿ 19 ವರ್ಷಗಳ ದೀರ್ಘ ಕಾಲಾವಧಿಯ                                                 ಅನುಭವವನ್ನು ಹೊಂದಿದ್ದಾಾರೆ.