ಡ್ರಿಲ್ಲಿಂಗ್ ಫಿಕ್ಸ್ಚರ್

Udyam Prkashan Kannad    30-Jan-2020
Total Views |


ಈ ಹಿಂದಿನ ಲೇಖನದಲ್ಲಿ ಒಂದು ಹೆವಿ ಸ್ಲಾಾಟ್‌ನ ಪ್ರಕ್ರಿಯೆ ಮತ್ತು ಅದಕ್ಕೋಸ್ಕರ ತಯಾರಿಸಿರುವ ಫಿಕ್ಸ್ಚರ್ ಕುರಿತಾದ ವಿವರಗಳನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ಡ್ರಿಲ್ಲಿಂಗ್‌ಗೋಸ್ಕರ ಬಳಸಲಾಗುವ ಫಿಕ್ಸ್ಚರ್‌ನ ವಿವರಗಳನ್ನು ತಿಳಿಯೋಣ.
 
ಯಂತ್ರೋಪಕರಣಗಳಲ್ಲಿ ರಂಧ್ರಗಳಿರುವುದು ಸಾಮಾನ್ಯವಾದ ವಿಷಯವಾಗಿದೆ. ಯಂತ್ರೋಪಕರಣಗಳನ್ನು ಜೋಡಿಸಲು ಸ್ಕ್ರೂ, ಬೋಲ್ಟ್‌ ಇತ್ಯಾದಿಗಳನ್ನು ಬಳಸಲಾಗುತ್ತದೆ. ಅವುಗಳನ್ನು ಅಳವಡಿಸಲು ಅನೇಕ ಜಾಗಗಳಲ್ಲಿ ರಂಧ್ರಗಳನ್ನು ಮಾಡಬೇಕಾಗುತ್ತದೆ. ಇದಕ್ಕೋಸ್ಕರ ಡ್ರಿಲ್ಲಿಂಗ್ ಫಿಕ್ಸ್ಚರ್‌ ನ ಉಪಯೋಗವನ್ನು ಬಹುದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ. ಡ್ರಿಲ್ಲಿಂಗ್ ಮಾಡಲು ಫಿಕ್ಸ್ಚರ್‌ ನ ಡಿಸೈನ್ ಮಾಡುವುದು ಮತ್ತು ಅದನ್ನು ಪ್ರತ್ಯಕ್ಷವಾಗಿ ತಯಾರಿಸುವುದು ತುಂಬಾ ಕ್ಲಿಷ್ಟವಾದ ಪ್ರಕ್ರಿಯೆಯಾಗಿದೆ. ಡ್ರಿಲ್ಲಿಂಗ್ ಮಾಡುತ್ತಿರುವಾಗ ಟೂಲ್ ಯಂತ್ರಣೆಯನ್ನು ಮಾಡುತ್ತದೆ, ಹಾಗೆಯೇ ಅದು ತುಂಡಾಗಿರುವ ಮಟೀರಿಯಲ್ ಹೊರಗೆ ಎಸೆಯುತ್ತದೆ. ಡ್ರಿಲ್ಲಿಂಗ್ ಮಾಡುತ್ತಿರುವಾಗ ಕಾರ್ಯವಸ್ತುವಿನ ಮಟೀರಿಯಲ್ ನಿರಂತರವಾಗಿ ತೆಗೆಯಲಾಗುತ್ತದೆ. ಒಂದು ವೇಳೆ ಡ್ರಿಲ್ ಕಾರ್ಯವಸ್ತುವಿನಿಂದ ಹೊರಗೆ ತೆಗೆದಲ್ಲಿ ಅಥವಾ ರಂಧ್ರಗಳು ಆರುಪಾರಾಗಿ ಮಾಡಿದರೆ ಮಾತ್ರ ಯಂತ್ರಣೆಯು ಮುಗಿಯುತ್ತದೆ. ಟರ್ನಿಂಗ್‌ನಲ್ಲಿಯೂ ನಿರಂತರವಾಗಿ ಮಟೀರಿಯಲ್ ತೆಗೆಯಲಾಗುತ್ತದೆ, ಡ್ರಿಲ್ಲಿಂಗ್ ಮತ್ತು ಟರ್ನಿಂಗ್‌ನಲ್ಲಿರುವ ಹೋಲಿಕೆಯು ಇಷ್ಟೇ ಆಗಿರುತ್ತದೆ.
 
ಟರ್ನಿಂಗ್ ಮಾಡುವಾಗ ಕಾರ್ಯವಸ್ತು ತಿರುಗುತ್ತದೆ ಮತ್ತು ಟೂಲ್‌ನ ಒಂದು ತುದಿಯಿಂದ ಯಂತ್ರಣೆಯು ಆಗುತ್ತಿರುತ್ತದೆ. ಆದರೆ ಡ್ರಿಲ್ಲಿಂಗ್ ಮಾಡುವಾಗ ಕಾರ್ಯವಸ್ತು ಸ್ಥಿರವಾಗಿರುತ್ತದೆ ಮತ್ತು ಡ್ರಿಲ್‌ನ ಎರಡು ತುದಿಗಳಲ್ಲಿಯೂ ಯಂತ್ರಣೆಯ ಆಗುತ್ತಿರುತ್ತದೆ. ಇದರಿಂದಾಗಿ ಅನೇಕ ಸಲ ಕೂಲಂಟ್‌ನ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ. ಟರ್ನಿಂಗ್, ಮಿಲ್ಲಿಂಗ್ ಫಿಕ್ಸ್ಚರ್‌ನ ಹೋಲಿಕೆಯಲ್ಲಿ ಡ್ರಿಲ್ಲಿಂಗ್ ಫಿಕ್ಸ್ಚರ್ ಜಾಸ್ತಿ ಪ್ರಮಾಣದಲ್ಲಿ ಬೇಕಾಗುತ್ತದೆ. ಇದರಿಂದಾಗಿ ಯಾವುದೇ ವಿಧದ ಫಿಕ್ಸ್ಚರ್ ತಯಾರಿಸುವುದು ಇದರ ಕುರಿತು ಹೆಚ್ಚು ಆಳವಾಗಿ ವಿಚಾರ ಮಾಡಬೇಕಾಗುತ್ತದೆ. ಫಿಕ್ಸ್ಚರ್‌ನ ಆಯ್ಕೆ ಮಾಡಲು ಹಲವಾರು ಮುಖ್ಯವಾದ ಅಂಶಗಳನ್ನು ಈ ಮುಂದೆ ನೀಡಲಾಗಿವೆ.
 
ಫಿಕ್ಸ್ಚರ್ ಆಯ್ಕೆ ಮಾಡಲು ಮುಖ್ಯವಾದ ಅಂಶಗಳು
1. ಡ್ರಿಲ್ಲಿಂಗ್ ಮಶಿನ್‌ನ ವಿಧ. ಉದಾಹರಣೆ, ಬೆಂಚ್ ಡ್ರಿಲ್ಲಿಂಗ್ ಮಶಿನ್, ಪಿಲರ್ ಟೈಪ್ ಡ್ರಿಲ್ಲಿಂಗ್ ಮಶಿನ್, ಮಲ್ಟಿಸ್ಪಿಂಡಲ್ ಡ್ರಿಲ್ಲಿಂಗ್ ಮಶಿನ್, ರೆಡಿಯಲ್ ಡ್ರಿಲ್ಲಿಂಗ್ ಮಶಿನ್.
2. ಕಾರ್ಯವಸ್ತುವಿನ ಆಕಾರ ಮತ್ತು ಭಾರ.
3. ಕಾರ್ಯವಸ್ತುಗಳ ಸಂಖ್ಯೆ.
4. ಒಂದು ರಂಧ್ರಕ್ಕೋಸ್ಕರ ಒಂದೇ ಟೂಲ್‌ನ (ಕೇವಲ ಡ್ರಿಲ್‌ನ) ಬಳಕೆ.
5. ಒಂದು ರಂಧ್ರಕ್ಕೋಸ್ಕರ ಡ್ರಿಲ್, ಚಾಂಪರ್, ಟ್ಯಾಾಪ್ ಇಂತಹ ಅನೇಕ ಟೂಲ್‌ಗಳ ಬಳಕೆ.
6. ಮಶಿನ್‌ನ ಸಾಮರ್ಥ್ಯ: ಟೇಬಲ್‌ನ ಆಕಾರ, X ಮತ್ತು Y ಅಕ್ಷದ ಮಾಪನ, Z ಅಕ್ಷದ ಸಾಮರ್ಥ್ಯ.
 
ಯಾವಾಗಲೂ ಬಳಸಲಾಗುವ ಡ್ರಿಲ್ಲಿಂಗ್ ಫಿಕ್ಸ್ಚರ್‌ನ ವಿಧಗಳು
1. ಟೆಂಪ್ಲೇಟ್
2. ಟೆಂಪ್ಲೇಟ್ ಜಿಗ್
3. ಪ್ಲೇಟ್ ಟೈಪ್ ಜಿಗ್
4. ಬಾಕ್‌ಸ್‌ ಟೈಪ್ ಫಿಕ್ಸ್ಚರ್ ಅಥವಾ ಜಿಗ್
5. ಅ್ಯಂಗಲ್ ಪ್ಲೇಟ್ ಟೈಪ್ ಜಿಗ್
6. ಪಾಟ್ ಟೈಪ್ ಫಿಕ್ಸ್ಚರ್
7. ಟರ್ನ್ ಓವರ್ ಜಿಗ್ ಅಥವಾ ಟೇಬಲ್ ಜಿಗ್ (ಸಣ್ಣ ಕಾರ್ಯವಸ್ತುಗಳಿಗೋಸ್ಕರ)
8. ಟಂಬಲ್ ಟೈಪ್ ಜಿಗ್ (ಸಣ್ಣ ಕಾರ್ಯವಸ್ತುಗಳಿಗೋಸ್ಕರ)
9. ಇಂಡೆಕ್ಸಿಂಗ್ ಫಿಕ್ಸ್ಚರ್
10. ಯುನಿವರ್ಸಲ್ (ಪಂಪ್) ಜಿಗ್
11. ರಿಂಗ್ ಜಿಗ್
12. ಲೀಫ್ ಟೈಪ್ ಫಿಕ್ಸ್ಚರ್ ಸ್ವಿಂಗ್ ಪ್ಲೇಟ್ ಟೈಪ್ ಫಿಕ್ಸ್ಚರ್
13. ಟ್ರುನಿಯನ್ ಟೈಪ್ ಜಿಗ್
 
ಮೇಲೆ ಹೇಳಿರುವ ವಿವಿಧ ಪ್ರಕಾರಗಳಲ್ಲಿ ಹಲವಾರು ಜಿಗ್‌ಗಳ ಕುರಿತಾದ ವಿವರಗಳನ್ನು ಈ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ. ಡ್ರಿಲ್ಲಿಂಗ್ ಫಿಕ್ಸ್ಚರ್ ತಯಾರಿಸುವುದಾದಲ್ಲಿ ಹೆಚ್ಚು ಆಳವಾದ ವಿಚಾರ ಮಾಡುವುದೂ ತುಂಬಾ ಮಹತ್ವದ್ದಾಗಿದೆ. ಹಾಗೆಯೇ ಡ್ರಿಲ್ಲಿಂಗ್ ಮಾಡಲು ಫಿಕ್ಸ್ಚರ್‌ನ ಡಿಸೈನ್ ಮಾಡುವುದು ಮತ್ತು ಅದನ್ನು ತಯಾರಿಸುವುದೂ ಒಂದು ಕ್ಲಿಷ್ಟವಾದ ಪ್ರಕ್ರಿಯೆಯಾಗಿದೆ, ಎಂಬುದೂ ತಮ್ಮ ಗಮನಕ್ಕೆ ಬರಬಹುದು. ಡ್ರಿಲ್ಲಿಂಗ್ ಫಿಕ್ಸ್ಚರ್ ಮತ್ತು ಡ್ರಿಲ್ಲಿಂಗ್ ಜಿಗ್ ಇವೆರಡರಲ್ಲಿರುವ ವ್ಯತ್ಯಾಸವು ತುಂಬಾ ಸಲ ಗಮನಕ್ಕೆ ಬರುವುದಿಲ್ಲ. ಈ ಎರಡು ವಿಧಗಳ ವೈಶಿಷ್ಟ್ಯಗಳನ್ನು ಈ ಮುಂದೆ ನೀಡಲಾಗಿದೆ.
 
ಡ್ರಿಲ್ಲಿಂಗ್ ಫಿಕ್ಸ್ಚರ್
 
ಈ ಫಿಕ್ಸ್ಚರ್‌ನಲ್ಲಿ ಕೇವಲ ಕಾರ್ಯವಸ್ತುವನ್ನು ಸರಿಯಾಗಿ ಹಿಡಿದಿಡಲಾಗುತ್ತದೆ. 3-2-1 ಈ ಸೂತ್ರದ ಪ್ರಕಾರ ಕಾರ್ಯವಸ್ತು ಫಿಕ್ಸ್ಚರ್‌ನಲ್ಲಿ ಇಡಲಾಗುತ್ತದೆ (ಲೊಕೇಟ್). (ಸಂದರ್ಭಃ ಲೋಹಕಾರ್ಯ ನವಂಬರ್ 2018) ಯಾವ ದಿಕ್ಕಿನಲ್ಲಿ ಡ್ರಿಲ್ಲಿಂಗ್ ಮಾಡಬೇಕೋ, ಆ ದಿಕ್ಕನ್ನು ಬಿಟ್ಟು ಉಳಿದ 3 ದಿಕ್ಕುಗಳಲ್ಲಿ ದೃಢವಾಗಿ ಹಿಡಿದಿಡಲಾಗುತ್ತದೆ. ಇದರಿಂದಾಗಿ ಯಂತ್ರಣೆಯನ್ನು ಮಾಡುವಾಗ ಕಾರ್ಯವಸ್ತು ಅಲುಗಾಡುವುದಿಲ್ಲ. ಹಾಗೆಯೇ ಕಾರ್ಯವಸ್ತು ಯಾವಾಗಲೂ ಅದೇ ಜಾಗದಲ್ಲಿ ಅಳವಡಿಸಲ್ಪಡುತ್ತದೆ. ಆದ್ದರಿಂದಲೇ ಗುಣಮಟ್ಟದ ಕುರಿತು ನಿರಂತರವಾದ ಖಾತರಿಯನ್ನು ನೀಡಬಹುದಾಗಿದೆ. ಇದರಲ್ಲಿ ಟೂಲ್ (ಡ್ರಿಲ್, ರಿಮರ್) ಗೈಡ್ ಮಾಡಲಾಗುವುದಿಲ್ಲ. ಉದಾಹರಣೆ, ಟ್ಯಾಾಪಿಂಗ್ ಪಿಕ್ಸ್ಚರ್, ಚ್ಯಾಾಂಪರಿಂಗ್ ಫಿಕ್ಸ್ಚರ್, ಸ್ಪಾಾಟ್ ಫೇಸಿಂಗ್ ಫಿಕ್ಸ್ಚರ್, ಸಿ.ಎನ್.ಸಿ. ಮಶಿನ್‌ನಲ್ಲಿ ಅಳವಡಿಸಲಾಗಿರುವ ಫಿಕ್ಸ್ಚರ್ ಇತ್ಯಾದಿ.
 
ಡ್ರಿಲ್ಲಿಂಗ್ ಜಿಗ್
 
ಡ್ರಿಲ್ಲಿಂಗ್ ಜಿಗ್ ಇದು ಕೂಡಾ ಡ್ರಿಲ್ಲಿಂಗ್ ಫಿಕ್ಸ್ಚರ್‌ನಂತೆಯೇ ಇರುತ್ತದೆ. ಆದರೆ ಇದರಲ್ಲಿ ಟೂಲ್ (ಡ್ರಿಲ್, ರೀಮರ್) ಗೈಡ್ ಮಾಡಲಾಗಿರುತ್ತದೆ. ಇದಕ್ಕೋಸ್ಕರ ಗೈಡ್ ಬುಶ್‌ನ ಉಪಯೋಗವನ್ನು ಮಾಡಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಯಾವ ಡ್ರಿಲ್ಲಿಂಗ್ ಫಿಕ್ಸ್ಚರ್‌ನಲ್ಲಿ ಗೈಡ್ ಬುಶ್ ಇರುತ್ತದೆಯೋ, ಅದಕ್ಕೆ ಡ್ರಿಲ್ಲಿಂಗ್ ಜಿಗ್ ಎಂದು ಹೇಳುತ್ತಾಾರೆ.
 

2_1  H x W: 0 x 
 
2_2 H x W: 0 x 
 
ಡ್ರಿಲ್ಲಿಂಗ್ ಜಿಗ್ ತಯಾರಿಸುವಾಗ ಅಥವಾ ಉಪಯೋಗಿಸುವಾಗ ವಹಿಸಬೇಕಾದ ಮುತುವರ್ಜಿ
1.ಜಿಗ್ ದೃಢವಾಗಿರಬೇಕು. ಹೊರಗಿನ ಶಕ್ತಿಯಿಂದಾಗಿ ಅದರ ನಿಖರತೆಯಲ್ಲಿ ವಿಪರೀತವಾದ ಪರಿಣಾಮವಾಗಬಾರದು.
2.ಕಾರ್ಯವಸ್ತುವನ್ನು ಹಿಡಿದಿಡುವಾಗ ಪ್ರಮಾಣಕ್ಕಿಂತ ಹೆಚ್ಚು ಶಕ್ತಿಯನ್ನು ನೀಡಿದ್ದರಿಂದ ಜಿಗ್ ಅಲ್ಲಾಾಡಬಾರದು.
3.ಡ್ರಿಲ್ಲಿಂಗ್‌ನ ಶಕ್ತಿಯಿಂದ ಕಾರ್ಯವಸ್ತುವಿನ ಕದಲಿಕೆಯಾದಲ್ಲಿ ಅದಕ್ಕೆ ಸೂಕ್ತವಾದ ಆಧಾರ ನೀಡಬೇಕು.
4.ಕಾರ್ಯವಸ್ತು ಜಿಗ್‌ನಲ್ಲಿ ಲೋಡ್ - ಅನ್‌ಲೋಡ್ ಮಾಡಲು ಸಾಕಷ್ಟು ಜಾಗ ಇರುವುದೂ ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ಕೆಲಸಗಾರರ ಕೈಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.
5.ಒಂದು ವೇಳೆ ಯಂತ್ರಣೆಯನ್ನು ಮಾಡಿದ ನಂತರ ಡ್ರಿಲ್ಲಿಂಗ್‌ನ ಚಿಪ್ ರೆಸ್ಟ್‌ ಪ್ಯಾಾಡ್‌ನಲ್ಲಿ ಉಳಿದಲ್ಲಿ, ದೋಷಪೂರ್ಣವಾದ ಕಾರ್ಯವಸ್ತುವು ಸಿಗುತ್ತದೆ. ರೆಸ್‌ಟ್‌ ಪ್ಯಾಾಡ್ ಕಡಿಮೆ ಆಕಾರದ್ದಾಗಿರಬೇಕು. ಇದರಿಂದಾಗಿ ಕೆಲಸಗಾರರಿಗೆ ಕಡಿಮೆ ಜಾಗಗಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ.
6.ರಂಧ್ರಗಳನ್ನು ಮಾಡಲು ನೀಡಿರುವ ಗೈಡ್ ಬುಶ್ ಕಠಿಣ ಮತ್ತು ಗ್ರೈಂಡ್ ಮಾಡಿದ್ದಾಗಿರಬೇಕು.
7.ಅಗತ್ಯವಿದ್ದಲ್ಲಿ ಉಷ್ಣಾಾಂಶವನ್ನು ನಿಯಂತ್ರಿಸಲು ಕೂಲಂಟ್‌ನ ವ್ಯವಸ್ಥೆಯನ್ನು ಇಡುವುದು ಅವಶ್ಯಕವಾಗಿದೆ.
8.ಕಾರ್ಯವಸ್ತು ದೊಡ್ಡದು ಅಥವಾ ಭಾರವಾಗಿದ್ದಲ್ಲಿ ಅದನ್ನು ತೆಗೆಯಲು ತಾಂತ್ರಿಕ ವ್ಯವಸ್ಥೆಯು ಇರಬೇಕು. ಉದಾಹರಣೆ, ಇಜೆಕ್ಷನ್. ಇದರಿಂದಾಗಿ ಕೆಲಸಗಾರರಿಗೆ ಅಡಚಣೆಯನ್ನು ಎದುರಿಸಬೇಕಾಗುವುದಿಲ್ಲ. ಹಾಗೆಯೇ ಅಪಘಾತದ ಸಾಧ್ಯತೆಯೂ ಇರುವುದಿಲ್ಲ.
9.ವಿಶೇಷವಾಗಿ ಡ್ರಿಲ್ಲಿಂಗ್ ಮಾಡುವಾಗ ಚಿಪ್ ಯೋಗ್ಯವಾಗಿ ಹೊರಗೆ ಬರುವ ಕುರಿತು ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಕಾರ್ಯವಸ್ತುವಿನ ಮಟೀರಿಯಲ್ ಸಡಿಲ (ಚಿತ್ರ ಕ್ರ. 1) ಅಥವಾ ಬಿರುಸಾಗಿದ್ದಲ್ಲಿ (ಚಿತ್ರ ಕ್ರ. 2) ಅದರಂತೆ ಸೂಕ್ತವಾದ ಡಿಸೈನ್ ಮಾಡಬೇಕು.
10.ವೆಲ್ಡೆಡ್ ಅಥವಾ ಎರಕ ಹಾಕಿದ ಫಿಕ್ಸ್ಚರ್‌ನ ಯೋಗ್ಯವಾದ ಸ್ಟ್ರೆಸ್ ರಿಲೀವಿಂಗ್ ಮಾಡಬೇಕು. ಇಲ್ಲದಿದ್ದಲ್ಲಿ ಸ್ವಲ್ಪ ಸಮಯದ ನಂತರ ಅದರ ನಿಖರತೆಯು ಹಾಳಾಗುತ್ತದೆ. ವಿವಿಧ ಭಾಗಗಳನ್ನು ತಯಾರಿಸಿ, ಅವುಗಳನ್ನು ಒಟ್ಟಾಾಗಿ ಜೋಡಿಸಿ, ಒಂದು ವೇಳೆ ಫಿಕ್ಸ್ಚರ್ ತಯಾರಿಸಿದರೆ (ಬಿಲ್‌ಟ್‌‌ಅಪ್ ಫಿಕ್ಸ್ಚರ್) ಸ್ಟ್ರೆಸ್ ರಿಲೀವ್ ಮಾಡುವ ಆವಶ್ಯಕತೆಯು ಇರುವುದಿಲ್ಲ. ಇದರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅ್ಯಲನ್ ಕ್ಯಾಾಪ್ ಸ್ಕ್ರೂ ಉಪಯೋಗಿಸಬೇಕು. ಕಾರಣ ಈ ಸ್ಕ್ರೂ ಸಹಜವಾಗಿ ತೆಗೆಯುವುದು ಅಸಾಧ್ಯ. ಸಾಧ್ಯವಾದಷ್ಟು ಮಟ್ಟಿಗೆ ಸ್ಕ್ರೂ ಆಯಿಲ್‌ನಲ್ಲಿ ಮುಳುಗಿಸಿಯೇ ಅಳವಡಿಸಬೇಕು. ಹೀಗೆ ಮಾಡಿದ್ದರಿಂದ ಸ್ಕ್ರೂ ಸ್ವಲ್ಪ ಕಾಲಾವಧಿಯ ನಂತರ ತೆಗೆಯಲು ಕಷ್ಟವಾಗುವುದಿಲ್ಲ. ಹಾಗೆಯೇ ಅದಕ್ಕೆ ತುಕ್ಕು ಹಿಡಿಯುವುದಿಲ್ಲ. ತುಂಬಾ ಸಲ ತಿಳುವಳಿಕೆ ಇಲ್ಲದ್ದರಿಂದ ಇದನ್ನು ಕಾರ್ಯಗತಗೊಳಿಸಲಾಗುವುದಿಲ್ಲ. ನಿಖರವಾದ ಮಾಪನವನ್ನು ಮಾಡಲು ಡಾವೆಲ್ ಪಿನ್ ಬಳಸಲಾಗುತ್ತದೆ. ಡಾವೆಲ್ ಪಿನ್ ಬಳಸಿದ್ದರಿಂದ ಭಾಗವನ್ನು ತೆಗೆದು ಮತ್ತೆ ಜೋಡಿಸಿದಲ್ಲಿ ಮಾಪನದಲ್ಲಿ ವ್ಯತ್ಯಾಸವು ಉಂಟಾಗುವುದಿಲ್ಲ. ಹಾಗೆಯೇ ಎರಡು ಮಾಪನಗಳಿಗೆ ಇರುವ ಪರಸ್ಪರ ಸಂಬಂಧ ಕಾಪಾಡಲಾಗುತ್ತದೆ. (ಡಾವೆಲ್ ಪಿನ್‌ನ ಇನ್ನಿತರ ವಿವರಗಳಿಗೋಸ್ಕರ ಸಂದರ್ಭ: ಲೋಹಕಾರ್ಯ, ಡಿಸೆಂಬರ್ 2018).
11.ಜಿಗ್ ಪ್ಲೇಟ್ ಸುರಕ್ಷಿತವಾಗಿರುವುದು ತುಂಬಾ ಮಹತ್ವದ್ದಾಗಿದೆ. ಇದರಿಂದಾಗಿ ಒಂದುವೇಳೆ ಜಿಗ್ ಅಥವಾ ಫಿಕ್ಸ್ಚರ್ ಬಳಸದಿದ್ದಲ್ಲಿ, ಆಗ ಅದನ್ನು ಸ್ವಚ್ಛಗೊಳಿಸಿ ಅದಕ್ಕೆ ಗ್ರೀಸ್ ಅಥವಾ ಆಯಿಲ್ ಲೇಪಿಸಿ ಸುರಕ್ಷಿತವಾದ ಜಾಗದಲ್ಲಿ ಇಡಬೇಕು. ಡ್ರಿಲ್ಲಿಂಗ್ ಜಿಗ್‌ನಲ್ಲಿ 10 ರಿಂದ 20 ಮೈಕ್ರಾನ್‌ಗಳಲ್ಲಿ ರಂಧ್ರಗಳ (0.010 ರಿಂದ 0.020 ಮಿ.ಮೀ.) ಕೇಂದ್ರದ ಮಾಪನವನ್ನು ನಿಯಂತ್ರಿಸಲಾಗಿರುತ್ತದೆ.
12.ಜಿಗ್ ಪ್ಲೇಟ್‌ನಿಂದ ಯಾವಾಗಲೂ ಕ್ಲ್ಯಾಂಪಿಂಗ್ ನೀಡಬಾರದು. ಕಾರಣ ಇದರಿಂದಾಗಿ ಜಿಗ್ ಪ್ಲೇಟ್ ತನ್ನಷ್ಟಕ್ಕೆ ಅಳವಡಿಸಲ್ಪಡಬಹುದು. ಇದರಿಂದಾಗಿ ಗೈಡ್ ಬುಶ್‌ನ ಅಕ್ಷವು ಓರೆಯಾಗಬಹುದು ಮತ್ತು ಇದರಿಂದಾಗಿ ಡ್ರಿಲ್ ಓರೆಯಾಗುತ್ತದೆ ಅಥವಾ ತುಂಡಾಗುವ ಸಾಧ್ಯತೆಯೂ ಇರುತ್ತದೆ. ಇದರ ಹೊರತಾಗಿ ದೋಷಗಳಿಂದ ಕೂಡಿರುವ ಕಾರ್ಯವಸ್ತುವು ತಯಾರಾಗುತ್ತದೆ. ಒಂದು ವೇಳೆ ಹಾಗೆ ಕ್ಲ್ಯಾಂಪಿಂಗ್ ನೀಡಿದಲ್ಲಿ ಸಾಧ್ಯವಾದಲ್ಲಿ ಕೈಯಿಂದಲೇ ಬಿಗಿ ಮಾಡಬಹುದಾದಂತಹ ಕ್ಲ್ಯಾಂಪಿಂಗ್ ನೀಡಬೇಕು. ಇದರಿಂದಾಗಿ ಅದರ ವಿಪರೀತವಾದ ಪರಿಣಾಮವು ಜಿಗ್ ಪ್ಲೇಟ್‌ನಲ್ಲಿ ಉಂಟಾಗುವುದಿಲ್ಲ.
13.ಜಿಗ್‌ನಲ್ಲಿ ಕಾರ್ಯವಸ್ತುವನ್ನು ತೆಗೆಯುವಾಗ ಮತ್ತು ಅಳವಡಿಸುವಾಗ, ಹಾಗೆಯೇ ಅದರ ನಿರ್ವಹಣೆಯನ್ನು ಮಾಡುವಾಗ ಗ್ಲೌಸ್‌ಗಳನ್ನು ಧರಿಸುವುದೂ ಕಡ್ಡಾಾಯವಾಗಿದೆ. ಹೀಗೆ ಮಾಡದಿದ್ದಲ್ಲಿ ಕಾರ್ಯವಸ್ತುವಿಗೆ ಇರುವ ಬರ್ ಮತ್ತು ಚೂಪಾದ ಮೂಲೆಗಳಿಗೆ ಹಾನಿಯಾಗುವ ಅಪಾಯವು ಉಂಟಾಗಬಹುದು.
14.ಮಶಿನ್ ಆನ್ ಇರುವಾಗ ಗ್ಲೌಸ್‌ಗಳನ್ನು ತೆಗೆದಿಡುವುದೂ ತುಂಬಾ ಆವಶ್ಯಕವಾಗಿದೆ. ಹಾಗೆ ಮಾಡದಿದ್ದಲ್ಲಿ ಗ್ಲೌಸ್‌ಗಳು ತಿರುಗುತ್ತಿರುವ ಡ್ರಿಲ್‌ನಲ್ಲಿ ಸಿಲುಕುವ ಭಯವೂ ಇರುತ್ತದೆ.
15.ಫೂಲ್ ಪ್ರೂೂಫಿಂಗ್ : ಜಿಗ್ ಮತ್ತು ಫಿಕ್ಸ್ಚರ್‌ಗೋಸ್ಕರ ತುಂಬಾ ಮಹತ್ವದ ಅಂಶವೆಂದರೆ, ‘ಫೂಲ್ ಪ್ರೂೂಫಿಂಗ್’. ಇದನ್ನು ಮಾಡಿದ್ದರಿಂದ ಯಾವುದೇ ರೀತಿಯಲ್ಲಿ ವಿವರಗಳ ತಿಳುವಳಿಕೆ ಇಲ್ಲದ ಕೆಲಸಗಾರನು ಯಂತ್ರಣೆಯನ್ನು ಮಾಡುತ್ತಿದ್ದರೂ ತಪ್ಪಾಾದ ಕಾರ್ಯವಸ್ತುವು ತಯಾರಾಗುವುದಿಲ್ಲ. ಕಾರಣ ಕಾರ್ಯವಸ್ತು ತಪ್ಪಾಾದ ರೀತಿಯಲ್ಲಿ ಜಿಗ್‌ನಲ್ಲಿ ಅಳವಡಿಸಲ್ಪಡುವುದಿಲ್ಲ. ಒಂದು ವೇಳೆ ಅದು ತಪ್ಪಾಾಗಿ ಅಳವಡಿಸಿ ಯಂತ್ರಣೆಯಾದರೂ ತಪ್ಪುು ಗಮನಕ್ಕೆ ಬರುವ ತನಕ ಎಲ್ಲ ಭಾಗಗಳೂ ವ್ಯರ್ಥವಾಗಿರುತ್ತವೆ.
 

3_1  H x W: 0 x 

6_1  H x W: 0 x 
 
ಚಿತ್ರ ಕ್ರ. 3 ರಲ್ಲಿ ತೋರಿಸಿರುವ ಕಾರ್ಯವಸ್ತು ಚಿತ್ರ ಕ್ರ. 4ರಲ್ಲಿ ತೋರಿಸಿರುವ ಫಿಕ್ಸ್ಚರ್‌ನಲ್ಲಿ ಇಡಲಾಗುತ್ತದೆ. ಫ್ಲಂಜ್‌ನ ಫೇಸ್ ಫಿಕ್ಸ್ಚರ್‌ನ ಪ್ಲೇಟ್‌ನಲ್ಲಿ ಅಳವಡಿಸಲಾಗಿರುತ್ತದೆ. ಈಗ ನಾವು ಪಿನ್ ‘’ P ಕೆಲಸವನ್ನು ವೀಕ್ಷಿಸೋಣ. ಫ್ಲಂಜ್ ‘B’ ಯ ವ್ಯಾಸವು ದೊಡ್ಡದಾಗಿದ್ದರಿಂದ ಒಂದುವೇಳೆ ಕಾರ್ಯವಸ್ತುವನ್ನು ವಿರುದ್ಧವಾಗಿ ಅಳವಡಿಸಿದ್ದಲ್ಲಿ ಫ್ಲಂಜ್ ‘B’ ಯ ವ್ಯಾಸವು ಪಿನ್ P‘’ ನಿಂದಾಗಿ ಪ್ಲೇಟ್‌ನಲ್ಲಿ ಅಳವಡಿಸಲ್ಪಡುವುದಿಲ್ಲ. ಒಂದು ವೇಳೆ P ತೆಗೆದರೂ ಆ ಕಾರ್ಯವಸ್ತು ಹಿಮ್ಮುಖವಾಗಿ ಅಳವಡಿಸಬಹುದು. ಅದಕ್ಕೋಸ್ಕರವೇ ಪಿನ್ P ಗೆ ‘ಫೂಲ್ ಪ್ರೂೂಫಿಂಗ್’ ಪಿನ್ ಎಂದು ಹೇಳಲಾಗುತ್ತದೆ. ಈಗ ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ.
 
ಚಿತ್ರ ಕ್ರ. 5 ರಲ್ಲಿ ತೋರಿಸಿದಂತೆ ಕಾರ್ಯವಸ್ತುವಿನಲ್ಲಿ ಫ್ಲ್ಯಾಟ್ ‘ಸಿ’, ರಂಧ್ರ ‘ಎ’ ಮತ್ತು ಫ್ಲಂಜ್‌ನಲ್ಲಿರುವ 8 ರಂಧ್ರಗಳು ‘ಬಿ’ ಇದರ ಪರಸ್ಪರವಾದ ಸಂಬಂಧವೂ ಆವಶ್ಯಕವಾಗಿದೆ. ಜಿಗ್‌ನಲ್ಲಿ ರಂಧ್ರ ‘ಎ’ಯ ಯಂತ್ರಣೆಯನ್ನು ಮಾಡಬೇಕಾಗಿದೆ. ಲೊಕೋಟಿಂಗ್ ಪಿನ್ P ಯಲ್ಲಿ (ಚಿತ್ರ ಕ್ರ. 6) ಕಾರ್ಯವಸ್ತು ಅಳವಡಿಸಲಾಗಿದೆ. ಈಗ 8 ರಲ್ಲಿ ಯಾವುದೇ ರಂಧ್ರದಲ್ಲಿ ಕಾರ್ಯವಸ್ತು ಅಳವಡಿಸಲ್ಪಡುತ್ತದೆ. ಇದರಿಂದಾಗಿ ಫ್ಲ್ಯಾಟ್ ‘ಸಿ’ ನಿಂತಿರುವಾಗ ಕಾರ್ಯವಸ್ತು ಅಳವಡಿಸಲ್ಪಡುತ್ತದೆ. ಅಂದರೆ ರಂಧ್ರ ‘ಎ’, ಫ್ಲ್ಯಾಟ್‌ನಲ್ಲಾಾಗುವುದರ ಬದಲಾಗಿ ವ್ಯಾಾಸದಲ್ಲಿ ಮಾಡಲಾಗುತ್ತದೆ. ಕಾರ್ಯವಸ್ತು ವಿಶಿಷ್ಟವಾದ ರೀತಿಯಲ್ಲಿ ಅಳವಡಿಸಲು ಫುಲ್ ಪ್ರೂೂಪಿಂಗ್ ಬ್ಲಾಾಕ್ ‘ಡಿ’ ಅಳವಡಿಸಲಾಗಿದೆ. ಇದರಿಂದಾಗಿ ಕಾರ್ಯವಸ್ತು ಇನ್ನಿತರ ಯಾವುದೇ ಜಾಗದಲ್ಲಿ ಅಳವಡಿಸಲ್ಪಡುವುದಿಲ್ಲ.
 

5_1  H x W: 0 x 

6_1  H x W: 0 x 
 
ಟೆಂಪ್ಲೇಟ್
 

7_1  H x W: 0 x 
 

8_1  H x W: 0 x 
 
1 ರಿಂದ 1.5 ಮಿ.ಮೀ. ದಪ್ಪದ ಪ್ಲೇಟ್‌ನಿಂದ ಟೆಂಪ್ಲೇಟ್ ತಯಾರಿಸಲಾಗುತ್ತದೆ. ಕಡಿಮೆ ಸಂಖ್ಯೆಯ (15 ರಿಂದ 20) ಕಾರ್ಯವಸ್ತುಗಳನ್ನು ತಯಾರಿಸಬೇಕಾದಾಗ (ಪ್ರೊಟೋಟೈಪ್) ಈ ರೀತಿಯ ಟೆಂಪ್ಲೇಟ್‌ನ ಸಹಾಯದಿಂದ ಅವುಗಳನ್ನು ತಯಾರಿಸಲಾಗುತ್ತವೆ. ಚಿತ್ರ ಕ್ರ. 7 ರಲ್ಲಿ ಒಂದು ಉರುಟಾದ ಫ್ಲಂಜ್‌ನಲ್ಲಿ ‘ಬಿ’ ವ್ಯಾಾಸದ 8 ರಂಧ್ರಗಳನ್ನು ಸಮಾನವಾದ ಅಂಶಗಳಲ್ಲಿ (45o) ಮಾಡಬೇಕಾಗುತ್ತದೆ. ಟೆಂಪ್ಲೇಟ್‌ನ ಹೊರಗಿನ ವ್ಯಾಾಸ ಮತ್ತು ಕಾರ್ಯವಸ್ತುವಿನ ಹೊರಗಿನ ವ್ಯಾಾಸವನ್ನು ಹೊಂದಿಸಲಾಯಿತು. ಈಗ ಟೆಂಪ್ಲೇಟ್ ಚಿತ್ರ ಕ್ರ. 8 ರಲ್ಲಿ ತೋರಿಸಿದಂತೆ ಕಾರ್ಯವಸ್ತುವನ್ನು ಹಿಡಿದಿಡಲಾಯಿತು. ಮೊದಲಾಗಿ ಈ ಟೆಂಪ್ಲೇಟ್‌ನಲ್ಲಿ 1 ಮಿ.ಮೀ. ವ್ಯಾಾಸದ 8 ರಂಧ್ರಗಳು ಕಾರ್ಯವಸ್ತುವಿನಲ್ಲಿ ಕೊಟ್ಟಂತೆ ಮಾಡಲಾಯಿತು. ಈ 1 ಮಿ.ಮೀ. ವ್ಯಾಾಸದ ರಂಧ್ರಗಳ ಸಂದರ್ಭದ ಪ್ರಕಾರ ಸೆಂಟರ್ ಪಂಚ್‌ನ ಸಹಾಯದಿಂದ ಈ 8 ರಂಧ್ರಗಳನ್ನು ಗುರುತಿಸಲಾಯಿತು. ಈ ಗುರುತಿಸಿರು ಕೇಂದ್ರಗಳ ಡ್ರಿಲ್ಲಿಂಗ್ ಮಾಡಲಾಯಿತು. ಈ ರಂಧ್ರಗಳ ಚಿಪ್ ಸರ್ಕಲ್ ವ್ಯಾಾಸದ ಟಾಲರನ್‌ಸ್‌ ಹೆಚ್ಚಾಾಗಿದ್ದರಿಂದ ಈ ರೀತಿಯ ಟೆಂಪ್ಲೇಟ್‌ಗಳ ಸಹಾಯದಿಂದ ರಂಧ್ರಗಳನ್ನು ಮಾಡುವುದೂ ಸಾಧ್ಯವಾಗಿದೆ. ಇದರಿಂದಾಗಿ ಕಾರ್ಯವಸ್ತುವಿನ ಮಾರ್ಕಿಂಗ್‌ನ ವೇಳೆಯಲ್ಲಿ ಉಳಿತಾಯವಾಗುತ್ತದೆ. ಈ ರೀತಿಯ ಟೆಂಪ್ಲೇಟ್‌ಗಳು ಸಹಜವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ತಯಾರಿಸುವುದೂ ಸಾಧ್ಯವಾಗಿದೆ.
 
ಟೆಂಪ್ಲೇಟ್ ಜಿಗ್
 

9_1  H x W: 0 x 
 

10_1  H x W: 0  
 
ಕಾರ್ಯವಸ್ತು ಮತ್ತು ಟೆಂಪ್ಲೇಟ್ ಜಿಗ್ ಇವೆರಡರ ಆಕಾರವು ಖಚಿತವಾಗಿಯೂ ಒಂದೇ ರೀತಿ ಇರುತ್ತದೆ. ಚಿತ್ರ ಕ್ರ. 9 ರಲ್ಲಿ ತೋರಿಸಿದಂತೆ ಟೆಂಪ್ಲೇಟ್ ಜಿಗ್ ಕಾರ್ಯವಸ್ತುವಿನಲ್ಲಿ ಇಟ್ಟು ಡ್ರಿಲ್‌ನಿಂದ ರಂಧ್ರಗಳನ್ನು ಮಾಡಬಹುದಾಗಿದೆ. ಈ ಸಂಪೂರ್ಣವಾದ ಪ್ಲೇಟ್ ಕಠಿಣ (ಹಾರ್ಡ್) ಮಾಡಲಾಗುತ್ತದೆ. ಇದರಿಂದಾಗಿ ಟೆಂಪ್ಲೇಟ್‌ನ ರಂಧ್ರಗಳು ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಕಾರ್ಯವಸ್ತುವಿನ ರಂಧ್ರಗಳ ಕೇಂದ್ರದ ದೂರವು ಹೆಚ್ಚು ನಿರ್ದೋಷವಾಗಿದ್ದಲ್ಲಿ ಮತ್ತು ಕಾರ್ಯವಸ್ತುವಿನ ಸಂಖ್ಯೆಯು ಕಡಿಮೆ ಇದ್ದಲ್ಲಿ ಟೆಂಪ್ಲೇಟ್ ಜಿಗ್ ಬಳಸಲಾಗುತ್ತದೆ. ಚಿತ್ರ ಕ್ರ. 10 ರಲ್ಲಿರುವ ಕಾರ್ಯವಸ್ತುವಿನಲ್ಲಿ ತೋರಿಸಿದಂತೆ ನಿಯಂತ್ರಿಸಿರುವ ರಂಧ್ರಗಳಿದ್ದಲ್ಲಿ ಆ ರಂಧ್ರಗಳಲ್ಲಿ ಗೈಡ್ ಮಾಡಿ 4 ರಂಧ್ರಗಳ ಯಂತ್ರಣೆಯನ್ನು ಮಾಡುವುದೂ ಸಾಧ್ಯವಾಗಿದೆ. ಮೇಲಿನ ಎರಡೂ ಉದಾಹರಣೆಯಲ್ಲಿ ಟೆಂಪ್ಲೇಟ್ ಮತ್ತು ಕಾರ್ಯವಸ್ತು ಒಟ್ಟಾಾಗಿಯೇ ಹಿಡಿದಿಡಲಾಗುತ್ತದೆ.
 
ಪ್ಲೇಟ್ ಟೈಪ್ ಜಿಗ್
 
 
11_1  H x W: 0
 
ಟೆಂಪ್ಲೇಟ್ ಜಿಗ್‌ನಲ್ಲಿ ಬುಶ್ ಅಳವಡಿಸಿದಲ್ಲಿ ಅದರ ಪ್ಲೇಟ್ ಟೈಪ್ ಜಿಗ್ ತಯಾರಾಗುತ್ತದೆ. ಇದರಲ್ಲಿ ಕಾರ್ಯವಸ್ತು ಮತ್ತು ಜಿಗ್ ಪ್ಲೇಟ್‌ನ ಆಕಾರವು ಬೇರೆಬೇರೆ ಇರಬಹುದು. ಹಾಗೆಯೇ ಜಿಗ್ ಪ್ಲೇಟ್, ಕಾರ್ಯವಸ್ತುವಿನಲ್ಲಿ ಕ್ಲ್ಯಾಂಪ್ ಮಾಡಲಾಗುತ್ತದೆ. ಆಗ ಕಾರ್ಯವಸ್ತುಗಳ ಸಂಖ್ಯೆಯು ಹೆಚ್ಚು ಇರುತ್ತದೆ ಮತ್ತು ರಂಧ್ರಗಳ ಮಧ್ಯದ ದೂರವು ಹೆಚ್ಚು ನಿರ್ದೋಷವಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಈ ವಿಧದ ಜಿಗ್ ಬಳಸಲಾಗುತ್ತದೆ. (ಚಿತ್ರ ಕ್ರ.11).
ಸಾರಾಂಶ
 
1.ಯಂತ್ರೋಪಕರಣಗಳನ್ನು ಜೋಡಿಸಲು ಸಾಧ್ಯವಾದಷ್ಟು ಮಟ್ಟಿಗೆ ಅ್ಯಲನ್ ಕ್ಯಾಾಪ್ ಸ್ಕ್ರೂ ಬಳಸಬೇಕು.
2.ಅ್ಯಲನ್ ಕ್ಯಾಾಪ್ ಸ್ಕ್ರೂ ಅಳವಡಿಸುವಾಗ ಅದಕ್ಕೆ ಆಯಿಲ್ ಹಚ್ಚಬೇಕು.
3.ವೆಲ್ಡೆಡ್ ಅಥವಾ ಎರಕ ಹಾಕಿರುವ ಫಿಕ್ಸ್ಚರ್ ಯೋಗ್ಯ ರೀತಿಯಲ್ಲಿ ಸ್ಟ್ರೇಸ್ ರಿಲಿವ್ ಮಾಡಬೇಕು.
4.ರೆಸ್ಟ್‌ ಪ್ಯಾಾಡ್ ಸಾಕಷ್ಟು ಕಡಿಮೆ ಆಕಾರದ್ದಾಗಿರಬೇಕು.
5.ಮಶಿನ್ ನಡೆಯುತ್ತಿರುವಾಗ ಹ್ಯಾಂಡ್ ಗ್ಲೌಸ್ ತೆಗೆದಿಡುವುದು ಅತ್ಯಗತ್ಯವಾಗಿದೆ.
6.ಡಾವೆಲ್ ಪಿನ್‌ನ ಉಪಯೋಗವನ್ನು ಮಾಡಿದ್ದರಿಂದ ಯಂತ್ರೋಪಕರಣಗಳನ್ನು ತೆಗೆದು ಮತ್ತೆ ಜೋಡಿಸಿದಲ್ಲಿ ಮಾಪನದಲ್ಲಿ ವ್ಯತ್ಯಾಸವು ಕಂಡುಬರುವುದಿಲ್ಲ.
7.ಜಿಗ್ ಪ್ಲೇಟ್‌ನಿಂದ ಎಂದೂ ಕ್ಲ್ಯಾಂಪಿಂಗ್ ಕೊಡಬಾರದು.
8.ಟರ್ನಿಂಗ್ ಮತ್ತು ಡ್ರಿಲ್ಲಿಂಗ್‌ನಲ್ಲಿರುವ ವ್ಯತ್ಯಾಸವನ್ನು ಗಮನಿಸಬೇಕು.
9.ಫುಲ್ ಪ್ರೂಫಿಂಗ್ ತುಂಬಾ ಮಹತ್ವದ್ದಾಗಿದೆ.
 
 

Ajit Deshpande_1 &nb 
 ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು,
ARAI SAE
9011018388
 
ಅಜಿತ ದೇಶಪಾಂಡೆ ಇವರು ಜಿಗ್ಸ್‌ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್‌ಜ್‌ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.