‘ಮಝಾಕ್’ನ ಮಲ್ಟಿ ಎಕ್ಸಿಸ್ ಮಿಲ್ಲಿಂಗ್ ಮಶಿನ್

Udyam Prkashan Kannad    30-Jan-2020
Total Views |

1_1  H x W: 0 x
 
 
ಸಿ.ಕೆ. ಬಿರ್ಲಾ ಗ್ರೂಪ್ ಇವರ ನಿಯೋಸಿಮ್ ಈ ಕಂಪನಿಯು ವಾಹನ ಉದ್ಯಮಕ್ಕೋಸ್ಕರ ಬೇಕಾಗುವಂತಹ ಹೆವಿ ಯಂತ್ರೋಪಕರಣಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದೆ. ಪುಣೆಯ ಸಮೀಪದಲ್ಲಿರುವ ತಳೆಗಾವ್ ಢಮಢೇರೆ ಎಂಬಲ್ಲಿ ಈ ಕಂಪನಿಯ ಒಂದು ಫೌಂಡ್ರಿ ಮತ್ತು ಬೇರೆಯೇ ಆದ ಒಂದು ಮಶಿನ್ ಶಾಪ್ ಇದೆ. ಟ್ರಕ್, ಬಸ್, ಟ್ರ್ಯಾಕ್ಟರ್ ಹಾಗೆಯೇ ಸಣ್ಣ ಗಾತ್ರದ ಅರ್ಥ್‌ಮೂವಿಂಗ್ ಇಕ್ವಿಪ್‌ ಮೆಂಟ್‌ಗಳಿಗೆ ಬೇಕಾಗುವ ಗೇರ್ ಬಾಕ್‌ಸ್‌, ಡಿಫರನ್ಶಿಯಲ್ ಹೌಸಿಂಗ್ ಇತ್ಯಾಾದಿ ಹೆವಿ ಯಂತ್ರೋಪಕರಣಗಳ ಕಾಸ್ಟಿಂಗ್ ಈ ಕಂಪನಿಯಲ್ಲಿರುವ ಫೌಂಡ್ರಿಯಲ್ಲಿ ಮಾಡಲಾಗುತ್ತದೆ. ಇದರಲ್ಲಿ ಹೆಚ್ಚಿನ ಯಂತ್ರ ಭಾಗಗಳ ಪಿನಿಶ್ ಯಂತ್ರಣೆಯನ್ನು ಮಾಡಿ ಅವರು ಗ್ರಾಾಹಕರಿಗೆ ಪೂರೈಸುತ್ತಾಾರೆ.
 
ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಡಿಫರನ್ಶಿಯಲ್ ಹೌಸಿಂಗ್ ಎಸ್.ಜಿ. ಆಯರ್ನ್‌ನಲ್ಲಿ ಕಾಸ್ಟ್‌ ಮಾಡಿದ್ದು ಇದರ ತೂಕವು ಅಂದಾಜು 60 ಕಿ.ಗ್ರಾಂ.ನಷ್ಟು ಇರುತ್ತದೆ. ಇಂಜಿನ್‌ನಲ್ಲಿ ತಯಾರಾಗುವಂತಹ ಪಾವರ್ ಎಕ್ಸಲ್‌ ನತನಕ ತಲುಪಿಸುವ ಯಂತ್ರಣೆಯಲ್ಲಿ ಇದೊಂದು ತುಂಬಾ ಮಹತ್ವದ ಘಟಕವಾಗಿರುವುದರಿಂದ ಇದರ ಯಂತ್ರಣೆಯು ತುಂಬಾ ಜಟಿಲವಾಗಿರುತ್ತದೆ. ಇದರಲ್ಲಿ ಅನೇಕ ಮಾಪನಗಳು ಹೌಸಿಂಗ್‌ನ ಮುಂಭಾಗದಲ್ಲಿರುವ ಮುಂಭಾಗಕ್ಕೆ ಸಂಬಂಧಪಟ್ಟಿರುತ್ತದೆ. ಇದರಿಂದಾಗಿ ಈ ಹೌಸಿಂಗ್‌ನ ಮುಂಭಾಗವನ್ನು ಕಾಸ್ಟಿಂಗ್‌ನಿಂದ ಫಿನಿಶ್ ಯಂತ್ರಭಾಗಗಳ ತನಕ ಮಾಡಲಾಗುವ ಮಿಲ್ಲಿಂಗ್ ತುಂಬಾ ಮಹತ್ವದ್ದಾಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ವಾಹನಗಳ ಉದ್ದಿಮೆಯಲ್ಲಿರುವ ಒಂದು ಪ್ರಸಿದ್ಧವಾದ ಕಂಪನಿಯಿಂದ ಡಿಫರನ್ಶಿಯಲ್ ಹೌಸಿಂಗ್ ತಯಾರಿಸುವ ಆರ್ಡರ್ ಅವರಿಗೆ ಲಭಿಸಿತು. ಅವರಲ್ಲಿದ್ದ ಅನೇಕ ಮಶಿನಿಂಗ್ ಸೆಂಟರ್‌ಗಳಲ್ಲಿ ಈ ಯಂತ್ರಣೆಗೆ ಸಂಬಂಧಪಟ್ಟ ಬೇರೆಬೇರೆ ತಪಾಸಣೆಗಳನ್ನು ಮಾಡಿದರು. ಆದರೆ ಉತ್ಪಾದಕತೆ ಮತ್ತು ಗುಣಮಟ್ಟದಂತಹ ಮಹತ್ತರವಾದ ಅಂಶಗಳ ಕುರಿತು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಈ ಮಧ್ಯೆ ಆ ಕಂಪನಿಯಲ್ಲಿ ನಾವು ಮಝಾಕ್ ಕಂಪನಿಯ ನೆಕ್ಸಸ್ 6800 ಎಂಬ ಹಾರಿಝಾಂಟಲ್ ಮಶಿನಿಂಗ್ ಸೆಂಟರ್ ಅಳವಡಿಸಿದ್ದೆವು. ಈ ಮಶಿನ್‌ನಲ್ಲಿ ಸ್ಪಿಂಡಲ್‌ನ ಶಕ್ತಿಯು ಬಹಳಷ್ಟು ಇರುವುದರಿಂದ ಅವರು ಡಿಫರನ್ಶಿಯಲ್ ಹೌಸಿಂಗ್ ಮಶಿನಿಂಗ್ ಇದೇ ಮಶಿನ್‌ನಲ್ಲಿ ಮಾಡುವುದನ್ನು ನಿರ್ಧರಿಸಿದರು. ಈ ಮಶಿನ್‌ನಲ್ಲಿ ನಾರ್ಮಲ್, ಹೈ ಸ್ಪೀಡ್ ಮತ್ತು ಹೈ ಟಾರ್ಕ್ ಎಂಬ ಮೂರು ವಿಧದ ಸ್ಪಿಂಡಲ್‌ಗಳು ಲಭ್ಯವಿವೆ. (ಹೆಚ್ಚಿನ ವಿವರಗಳಿಗೆ ಕೋಷ್ಟಕ ಕ್ರ. 1 ಪರಿಶೀಲಿಸಿ.) ಅವರಲ್ಲಿ ಹೈ ಟಾರ್ಕ್ ಸ್ಪಿಂಡಲ್ ಅವರಲ್ಲಿದೆ. ಇದರಿಂದಾಗಿ ಫೇಸ್ ಬಟಿಂಗ್ ಮಾಡಿ ಹೆವಿ ಕಟಿಂಗ್ ಪ್ಯಾರಾಮೀಟರ್ ಅಳವಡಿಸಿ ತುಂಬಾ ವೇಗದಲ್ಲಿ ಯಂತ್ರಣೆಯನ್ನು ಮಾಡಬಹುದಾಗಿದೆ. ಇದರಲ್ಲಿ ಗರಿಷ್ಠ 300 ಮಿ.ಮೀ.ನಷ್ಟು ವ್ಯಾಾಸವಿರುವ ಮಿಲ್ಲಿಂಗ್ ಕಟರ್ ಬಳಸುವಾಗ ಪ್ರಕ್ರಿಯೆಯ ಆವಶ್ಯಕತೆಗೆ ಅನುಸಾರವಾಗಿ ಅಥವಾ ಟೂಲಿಂಗ್ ಉತ್ಪಾದಕರು ಸೂಚಿಸಿದಂತೆ ಕಟಿಂಗ್ ಪ್ಯಾರಾಮೀಟರ್ ಬಳಸಬಹುದು. 
 

2_1  H x W: 0 x 
 
ಈ ಹೆವಿ ಯಂತ್ರಭಾಗಗಳ ಮುಂಭಾಗದಲ್ಲಿ ಫೇಸ್ ಮಿಲ್ಲಿಂಗ್ ಮಾಡುವಾಗ ಹಲವಾರು ಅಡಚಣೆಗಳನ್ನು ಎದುರಿಸಬೇಕಾಯಿತು. ಕಾಸ್ಟಿಂಗ್‌ನಿಂದ ಇಷ್ಟು ದೊಡ್ಡ ಭಾಗಗಳ (ಪಾರ್ಟ್) ಅಂದಾಜು 400x400 ಮಿ.ಮೀ. ಗಾತ್ರದ ಮಿಲ್ಲಿಂಗ್ ಮಾಡುವಾಗ ಗರಿಷ್ಠ ಎರಡು ಕಟ್‌ಗಳಿಂದಲೇ ಯಂತ್ರಣೆಯನ್ನು ಮುಗಿಸುವುದು ಉತ್ಪಾದಕರ ದೃಷ್ಟಿಯಲ್ಲಿ ಅಗತ್ಯವಾಗಿತ್ತು. ಯಾಕೆಂದರೆ ಕಟರ್‌ನ ಗರಿಷ್ಠ ವ್ಯಾಾಸವು 300 ಮಿ.ಮೀ. ಇದೆ. ಮಝಾಕ್‌ನ ಸ್ಪಿಂಡಲ್‌ನ ಶಕ್ತಿಯು 37 Kw (50hp) ಇದೆ. ಇದರಿಂದಾಗಿ ಪ್ರಾಾರಂಭದ ಓರಟಾದ ತುಂಡಿನ ಆಳವು (ಡೆಪ್ಥ್‌ ಆಫ್ ಕಟ್) 7 ರಿಂದ 8 ಮಿ.ಮೀ. ಅಳವಡಿಸಿ 800 ಆರ್.ಪಿ.ಎಮ್. ಮತ್ತು 1300 ಮಿ.ಮೀ./ ನಿಮಿಷ ಸೈಕಲ್ ವೇಗದಿಂದ ಯಂತ್ರಣೆಯನ್ನು ಮಾಡಲಾಯಿತು. ಮಝಾಕ್‌ನ
 
ಎಚ್.ಎಮ್.ಸಿ.ಯ ಮೂಲ ಭಾರವೇ ತುಂಬಾ ಹೆಚ್ಚಾಾಗಿದೆ. ಇದರಿಂದಾಗಿ ದೊಡ್ಡ ಭಾಗಗಳ ಯಂತ್ರಣೆಯನ್ನು ಮಾಡುವಾಗ ಕಂಪನಗಳು ಮತ್ತು ಶಬ್ದವೂ ಉಂಟಾಗುವುದಿಲ್ಲ. ಪ್ರಾರಂಭದ ತುಂಡಿಗೆ ಗರಿಷ್ಠ ಪ್ರಮಾಣದಲ್ಲಿ ಅತಿರಿಕ್ತವಾದ ಮಟೀರಿಯಲ್ ತೆಗೆಯಬಹುದಾಗಿದ್ದರಿಂದ ಫಿನಿಶ್ ಕಟ್ ಸುಮಾರು 0.5 ಮಿ.ಮೀ.ನಷ್ಟು ಅಳದ್ದು ಮಾಡಬಹುದಾಗಿದೆ. ಈ ಯಂತ್ರಣೆಯಿಂದಾಗಿ ಈ ಮಹತ್ವದ ಫೇಸ್‌ನ ಸರ್ಫೇಸ್ ಪಿನಿಶ್ ಮತ್ತು ಇನ್ನಿತರ ಮಹತ್ತರವಾದ ಮಾಪನಗಳನ್ನು ಸೂಕ್ತವಾಗಿ ಇರಿಸುವುದು ಸಾಧ್ಯವಾಗಿದೆ. Ra ಮೌಲ್ಯ, Rz ಮೌಲ್ಯ ಮತ್ತು Rmz ಮೌಲ್ಯ ಇತ್ಯಾದಿ ಘಟಕಗಳಿಗೆ ಅಗತ್ಯಕ್ಕೆ ತಕ್ಕಂತೆ ಸರ್ಫೇಸ್ ಪಿನಿಶ್ ಕಾಪಾಡಲಾಯಿತು.
 
ಈ ಮಶಿನ್‌ನಲ್ಲಿ ಗರಿಷ್ಠ X ಅಕ್ಷದ ಪ್ರವಾಸವು (ಕಾಲಮ್‌ನ ಬಲಬದಿಗೆ ಮತ್ತು ಎಡಬದಿಗೆ) 1050 ಮಿ.ಮೀ. Y ಅಕ್ಷದ ಪ್ರವಾಸವು (ಸ್ಪಿಂಡಲ್‌ನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ) 900 ಮಿ.ಮೀ. Z ಅಕ್ಷದ ಪ್ರವಾಸವು (ಟೇಬಲ್‌ನ ಹಿಂಭಾಗ ಮತ್ತು ಮುಂಭಾಗದಲ್ಲಿ) 980 ಮಿ.ಮೀ. ಉಪಲಬ್ಧವಿರುವುದರಿಂದ ಯಂತ್ರಭಾಗಗಳು ಮತ್ತು ಮಿಲ್ಲಿಂಗ್ ಕಟರ್ ಎದುರುಬದುರಾಗಿ ತಕ್ಷಣ ಹೊಂದಾಣಿಸುವಲ್ಲಿ ಅಕ್ಷೀಯ ಚಟುವಟಿಕೆಗಳನ್ನು ತುಂಬಾ ಕಡಿಮೆ ಸಮಯದಲ್ಲಿ ಮಾಡುವುದು ಸಾಧ್ಯ. ಪ್ರೊಗ್ರಾಮ್‌ನಲ್ಲಿ 3 ಅಥವಾ 4 ಅಕ್ಷಗಳಲ್ಲಿ ಯಂತ್ರಣೆಯನ್ನು ಮಾಡುವ ಸಾಮರ್ಥ್ಯ ಲಭ್ಯವಿದೆ. ಇದರಿಂದಾಗಿ ಪ್ರತ್ಯಕ್ಷವಾಗಿ ಮಶಿನಿಂಗ್ ಬಿಟ್ಟು ಇನ್ನಿತರ ಚಟುವಟಿಕೆಗಳ ಸಮಯ (ನಾನ್ ಕಟಿಂಗ್ ಟೈಮ್) ತುಂಬಾ ಕಡಿಮೆ ಮಾಡಬಹುದಾಗಿದೆ. ಈ ಡಿಫರನ್ಶಿಯಲ್ ಹೌಸಿಂಗ್‌ನ ಯಂತ್ರಣೆಯ ಒಟ್ಟು ಸಮಯವು ಪ್ರಾಾರಂಭದಲ್ಲಿ ಸುಮಾರು 42 ನಿಮಿಷಗಳಷ್ಟಿತ್ತು. ಪ್ರೊಗ್ರಾಮ್ ಮತ್ತು ಟೂಲಿಂಗ್‌ನಲ್ಲಿ ಮಲ್ಟಿಪಲ್ ಕಟರ್ ಬಳಸುವುದು, ಒಂದೇ ಬಾರಿ ಕಚ್ಚು ಮತ್ತು ವ್ಯಾಾಸದ ಯಂತ್ರಣೆಯನ್ನು ಮಾಡುವುದು ಇಂತಹ ವಿವಿಧ ಸುಧಾರಣೆಗಳನ್ನು ಮಾಡಿದ ನಂತರ ಈ ಸಮಯವು
37 ನಿಮಿಷಗಳಷ್ಟು ಕಡಿಮೆ ಮಾಡುವುದು ಸಾಧ್ಯವಾಯಿತು.
 

3_1  H x W: 0 x 
 
‘ಮಝಾಕ್’ನ ಎಲ್ಲ ಮಶಿನ್‌ಗಳಲ್ಲಿ ಹೆವಿ ಯಂತ್ರಣೆಯನ್ನು ಮಾಡುತ್ತಿರುವಾಗ ವೇಗವಾಗಿ ಹೊರಬಹುವಂತಹ ಚಿಪ್‌ಗಳನ್ನು ಸಹಜವಾಗಿ ತೆಗೆಯಲ್ಪಡುತ್ತವೆ. ಯಂತ್ರಣೆಯ ಮತ್ತು ಮಶಿನ್‌ನ ಸುದೀರ್ಘವಾದ ಬಳಕೆಗೆ ಇದು ತುಂಬಾ ಉಪಯುಕ್ತವಾಗಿದೆ. ಈ ಮಶಿನ್‌ನ ಟೂಲ್ ಮ್ಯಾಗೆಝಿನ್‌ನಲ್ಲಿ ಒಟ್ಟು 60 ಟೂಲ್‌ಗಳನ್ನು ಇಡುವ ವ್ಯವಸ್ಥೆ ಇದೆ. ಸದ್ಯಕ್ಕೆ ಪ್ರೊಗ್ರಾಮ್‌ನಲ್ಲಿ ಸುಮಾರು 40 ಟೂಲ್‌ಗಳು ಬೇಕಾಗುತ್ತವೆ. ಇದರಿಂದಾಗಿ ಉತ್ಪಾದಕತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಹೊಸ ಟೂಲ್ ತಯಾರಿಸುವಾಗ ಹಲವಾರು ದೊಡ್ಡ ವ್ಯಾಾಸವಿರುವ ಟೂಲ್‌ಗಳನ್ನು ಬಳಸಲಾಯಿತು. ಅದಕ್ಕೋಸ್ಕರ ಟೂಲ್ ಮ್ಯಾಗೆಝಿನ್‌ನ ಪಕ್ಕದಲ್ಲಿರುವ ಅಂತಸ್ತನ್ನು ಖಾಲಿಯಾಗಿ ಇಡುವುದು ಸಾಧ್ಯವಿದೆ. ಈ ಮಶಿನ್‌ನ ಶಕ್ತಿಯು ತುಂಬಾ ಹೆಚ್ಚಿರುವುದರಿಂದ ಮಿಲ್ಲಿಂಗ್, ಬೋರಿಂಗ್‌ ನಂತಹ ಯಂತ್ರಣೆಯನ್ನು ಮಾಡುವಾಗ ಬೃಹದಾಕಾರದ ಟೂಲ್‌ಗಳನ್ನು ಬಳಸಿ ಉತ್ಪಾದನೆಯನ್ನು ಹೆಚ್ಚಿಸುವುದು ಸಹಜ ಸಾಧ್ಯವಾಗಿದೆ.
 

4_1  H x W: 0 x 
 
ಈ ಮಶಿನ್ ಸೆಂಟರ್‌ನೊಂದಿಗೆ ಒಂದು ಪ್ಯಾಲೇಟ್ ಚೇಂಜರ್ ಕೂಡಾ ಉಪಲಬ್ಧವಿದೆ. ಇದರಿಂದಾಗಿ ಒಂದು ಯಂತ್ರಭಾಗದ ಯಂತ್ರಣೆಯನ್ನು ಮಾಡುವಾಗ ಆಪರೇಟರ್ ಉಪಲಬ್ಧ ಸಮಯವನ್ನು ಬಳಸಿ, ಇನ್ನೊಂದು ಪ್ಯಾಲೇಟ್‌ನ ಸಮಾನವಾಗಿರುವ ಫಿಕ್ಸ್ಚರ್‌ನಲ್ಲಿ ಮತ್ತೊಂದು ಯಂತ್ರಭಾಗವನ್ನು ಅಳವಡಿಸಬಹುದಾಗಿದೆ. ಪ್ರೊಗ್ರಾಾಮ್‌ನಲ್ಲಿ ಪ್ಯಾಲೇಟ್ ಬದಲಾಯಿಸುವ ಸಮಯವನ್ನು ಕಡಿಮೆ ಅಳವಡಿಸುವ ವ್ಯವಸ್ಥೆಯು ಇದೆ. ಇದರಿಂದಾಗಿ ಒಟ್ಟು ಉತ್ಪಾದಕತೆಯಲ್ಲಿ ಗಮನಾರ್ಹವಾದ ಹೆಚ್ಚಳವಾಗುತ್ತದೆ. ಮಝಾಕ್ ಮಶಿನ್‌ನ ರೋಲರ್ ಗೈಡ್ ತುಂಬಾ ನಿರ್ದೋಷವಾಗಿ ಮತ್ತು ದೃಢವಾದ ಯಂತ್ರಣೆಯಿಂದ ತಯಾರಿಸಲಾಗಿದ್ದರಿಂದ ದೀರ್ಘಕಾಲಾವಧಿಯ ಬಳಕೆಯಲ್ಲಿ ನಿರ್ದೋಷವಾದ ಯಂತ್ರಣೆ ಮತ್ತು ದೃಢತೆಯು ತುಂಬಾ ಕಾಲಾವಧಿಯ ತನಕ ಉಳಿಯುತ್ತದೆ. ಬೃಹದಾಕಾರದ ಯಂತ್ರಭಾಗಗಳ ಮಿಲ್ಲಿಂಗ್ ಮಾಡಲು ಇದೊಂದು ತುಂಬಾ ಮಹತ್ವದ ಘಟಕವಾಗಿದೆ.
 

5_1  H x W: 0 x 
 
ಮೇಲೆ ತಿಳಿಸಿದಂತೆ ಗ್ರಾಾಹಕರಾಗಿರುವ ಕಂಪನಿಗಳ ಎಲ್ಲ ಅಂತರರಾಷ್ಟ್ರೀಯ ಪ್ಲಾಂಟ್‌ಗಳಿಗೆ ಈ ಯಂತ್ರಭಾಗಗಳನ್ನು ಪೂರೈಸುವ ಸಂಪೂರ್ಣ ಕಾಂಟ್ರ್ಯಾಕ್ಟ್‌ ‘ನಿಯೋಸಿಮ್’ ಇವರಿಗೆ ಲಭಿಸಿದೆ, ಎಂಬುದು ನಮಗೆ ಹೆಮ್ಮೆಯನ್ನುಂಟು ಮಾಡುವ ವಿಷಯವಾಗಿದೆ. ಈ ಮಶಿನ್‌ನಲ್ಲಿ ಈಗ ಒಂದುವೇಳೆ ಅವರು ಎಸ್.ಜಿ. ಅಯರ್ನ್‌ನಲ್ಲಿ ಕಾಸ್ಟ್‌ ಮಾಡಿರುವ ಯಂತ್ರಭಾಗಗಳನ್ನು ಮಾಡುತ್ತಿದ್ದರೂ ಕೂಡಾ ಮಶಿನ್‌ನ ಸಾಮರ್ಥ್ಯವನ್ನು ನೋಡಿದಾಗ ಭವಿಷ್ಯತ್ಕಾಲದಲ್ಲಿ ಇನ್ಕೋನೆಲ್, ಟೂಲ್ ಸ್ಟೀಲ್‌ನಲ್ಲಿ ತಯಾರಿಸಿರುವ ಕಠಿಣವಾದ ಯಂತ್ರಭಾಗಗಳು ಕೂಡಾ ಮಶಿನಿಂಗ್‌ನ ಉಚ್ಚ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಕಾಪಾಡಬಲ್ಲವು. ಇದರಿಂದಾಗಿ ಕಂಪನಿಯ ಏಳಿಗೆಯಲ್ಲಿ ಈ ಮಶಿನ್‌ಗಳ ಪಾಲು ತುಂಬಾ ಹೆಚ್ಚಾಗಿರುವಲ್ಲಿ ಯಾವುದೇ ಅನುಮಾನವೇ ಇಲ್ಲ.
 
 
 

raosaheb bhole_1 &nb 
ರಾವ್‌ಸಾಹೇಬ್ ಭೋಳೆ
ಹಿರಿಯ ವ್ಯವಸ್ಥಾಪಕರು,
ಅಪ್ಲಿಕೇಶನ್ ವಿಭಾಗ,
ಯಾಮಾಝಾಕಿ ಮಝಾಕ್ ಇಂಡಿಯಾ ಪ್ರೈ.ಲಿ. 
9970002048
 
ರಾವ್‌ ಸಾಹೇಬ್ ಭೋಳೆ ಇವರು ಯಾಮಾಝಾಕಿ ಮಝಾಕ್ ಇಂಡಿಯಾ ಪ್ರೈ. ಲಿ. ಕಂಪನಿಯ ಎಪ್ಲಿಕೇಶನ್ ವಿಭಾಗದಲ್ಲಿ ವರಿಷ್ಠ ವ್ಯವಸ್ಥಾಪಕರಾಗಿದ್ದಾಾರೆ. ಇವರಿಗೆ ಇಂಜಿನ್ ಯಂತ್ರಭಾಗಗಳು, ಹೆವಿ ಇಂಡಸ್ಟ್ರಿಯಲ್ಲಿರುವ ಮಶಿನಿಂಗ್ ಕ್ಷೇತ್ರದಲ್ಲಿ                                                  ಪ್ರೊಜೆಕ್ಟ್‌ ಡಿಸೈನ್ ಮತ್ತು ಪ್ರೊಡಕ್ಷನ್‌ನಲ್ಲಿ 17 ವರ್ಷಗಳ ಅನುಭವವನ್ನು
                                                 ಹೊಂದಿದ್ದಾರೆ.