ಸ್ಕ್ವೇರ್ ಶೋಲ್ಡರ್ ಮಿಲ್ಲಿಂಗ್

Udyam Prkashan Kannad    30-Jan-2020
Total Views |


ಮಶಿನ್‌ನ ಬಳಕೆ, ಮಾನವ ಶಕ್ತಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ಮತ್ತು ಕಾರ್ಖಾನೆಯಲ್ಲಿ ಮಾಡಬೇಕಾಗಿರುವ ನಿಗದಿತ ಖರ್ಚು ಈ ಎಲ್ಲ ಅಂಶಗಳು ಯಾವುದೇ ಉತ್ಪಾಾದಕರ ಲಾಭ ಮತ್ತು ಸ್ಪರ್ಧೆಯನ್ನು ನಿರ್ಧರಿಸುತ್ತವೆ. ಇದಕ್ಕೋಸ್ಕರ ಕಟಿಂಗ್ ಟೂಲ್‌ಗಳಿಂದಾಗಿ ಕನಿಷ್ಠ ಸಮಯದಲ್ಲಿ ಉನ್ನತ ಗುಣಮಟ್ಟದ ಯಂತ್ರೋಪಕರಣಗಳ ನಿರ್ಮಿತಿಯಾಗುವಾಗ ಮಶಿನ್‌ಗೆ ತಗಲುವ ಸಮಯದಲ್ಲಿ ಉಳಿತಾಯವಾಗಿ, ಪ್ರತಿದಿನವೂ ಹೆಚ್ಚೆಚ್ಚು ಯಂತ್ರಭಾಗಗಳ ಉತ್ಪಾಾದನೆಯಾಗುವುದನ್ನು ನಿರೀಕ್ಷಿಸಲಾಗುತ್ತದೆ.
 
ಈ ಎಲ್ಲ ಅಂಶಗಳ ಕುರಿತು ವಿಚಾರ ಮಾಡಿ ನಾವು ದೊಡ್ಡ ಅಥವಾ ಸಣ್ಣ, ಹಗುರ ಅಥವಾ ಹೆವಿ, ಫಿನಿಶ್ ಅಥವಾ ರಫ್, ಸರಳ ಅಥವಾ ಕ್ಲಿಷ್ಟ ಇತ್ಯಾಾದಿ ಯಾವುದೇ ವಿಧದ ಕೆಲಸಕ್ಕೋಸ್ಕರ ಪರಿಪೂರ್ಣವಾದ ಸ್ಕ್ವೇರ್ ಶೋಲ್ಡರ್ ಮಿಲ್ಲಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದನ್ನು ಬಳಸಿ ತುಂಬು ಆತ್ಮವಿಶ್ವಾಾಸದಿಂದ ಯಂತ್ರಣೆಯನ್ನು ಮಾಡಬಹುದಾಗಿದೆ. ಹಾಗೆಯೇ ಉತ್ಕೃಷ್ಟವಾದ ಕೆಲಸವನ್ನು ಸಾಧಿಸುವುದರೊಂದಿಗೆ ಸೈಕಲ್ ಟೈಮ್ ಕೂಡಾ ಕಡಿಮೆ ಮಾಡಬಹುದು. ಉಚ್ಚಮಟ್ಟದ ಪಾಸಿಟಿವ್ ರ್ಯಾಾಕ್ ಇರುವ ಟೂಲ್‌ನ ಭೌಮಿತೀಯ ಪ್ರಕ್ರಿಯೆಯಲ್ಲಿ ಕಡಿಮೆ ಉಷ್ಣಾಂಶದ ಉತ್ಪತ್ತಿಯನ್ನು ಮಾಡಲು ಸಹಾಯವಾಗುತ್ತದೆ. ಹಾಗೆಯೇ ಶಕ್ತಿಯ ಬಳಕೆ ಕಡಿಮೆ, ಬರ್‌ನಿಂದ ಕೂಡಿರುವ ಯಂತ್ರಣೆ, ವರ್ಸಟ್ಯಾಲಿಟಿ, ಸ್ಟ್ಯಾಾಂಡರ್ಡ್‌ಗೋಸ್ಕರ ವಿಭಿನ್ನ ತ್ರಿಜ್ಯಗಳ ಆಯ್ಕೆ ಉನ್ನತಮಟ್ಟದ ಕಾರ್ಯ ಪ್ರದರ್ಶನದ ಶ್ರೇಣಿ ಮತ್ತು ಎಲ್ಲ ವಿಧದ ಭೌಮಿತೀಯ ಮತ್ತು ಮಟೀರಿಯಲ್‌ನ ಕಾರ್ಯವಸ್ತುಗಳ ಯಂತ್ರಣೆಗೋಸ್ಕರ ಉಪಯುಕ್ತವಾಗಿದೆ.
 

1_1  H x W: 0 x 
 
ಇಂಡೆಕ್ಸೆಬಲ್ ಇನ್ಸರ್ಟ್ ಎಂಡ್ ಮಿಲ್‌ನ ವ್ಯಾಾಪಕವಾದ ವರ್ಸಟ್ಯಾಾಲಿಟಿಯಿಂದಾಗಿ ಟೂಲ್ ಬದಲಾಯಿಸುವ ಖರ್ಚು ಕಡಿಮೆಯಾಗುತ್ತದೆ. ಇದರಿಂದಾಗಿ ಖರ್ಚಿನಲ್ಲಿ ತುಂಬಾ ಉಳಿತಾಯವಾಗುತ್ತದೆ. ಮೈಲ್‌ಡ್‌ ಸ್ಟೀಲ್‌ನಿಂದ ಟೈಟ್ಯಾನಿಯಮ್‌ನಲ್ಲಿ ಇಂತಹ ಮಟೀರಿಯಲ್‌ಗೆ ಅಥವಾ ಸ್ಲಾಟಿಂಗ್‌ನಿಂದ ವೇಗವಾದ ಪ್ರೊಫೈಲಿಂಗ್‌ನೆಡೆಗೆ ಯಂತ್ರಣೆಯ ಪ್ರಕ್ರಿಯೆಯಲ್ಲಿ ಸಹಜವಾಗಿ ಮತ್ತು ಲಾಭಕಾರಿಯಾದ ಬದಲಾವಣೆಗಳನ್ನು ಮಾಡಲು ತುಂಬಾ ಸಲ ಸಮಾನವಾದ ಕಟರ್ ಬಾಡಿ ಬಳಸಿ ಕೇವಲ ಇನ್ಸರ್ಟ್ ಗ್ರೇಡ್ ಅಥವಾ ಭೌಮಿತೀಯಲ್ಲಿರುವ ಸರಳವಾದ ಬದಲಾವಣೆಯೂ ಆವಶ್ಯಕವಾಗಿರುತ್ತದೆ. ಹಾಗೆಯೇ ಎಂಡ್ ಮಿಲ್ ಬಳಸುವಾಗ ತುಂಬಾ ಹೆಚ್ಚು ಯಂತ್ರಣೆಯ ವೇಗ ಮತ್ತು ಸರಿಯುವ ವೇಗ ಬಳಸಲಾಗುವುದರಿಂದ ಉಚ್ಚಮಟ್ಟದ ಉತ್ಪಾಾದನೆಯ ಸಾಮರ್ಥ್ಯವನ್ನು ಪಡೆಯುವುದೂ ಸಾಧ್ಯವಾಗಿದೆ.
 

2_1  H x W: 0 x 
 
ಟರ್ಬೋ ಇನ್ಸರ್ಟ್ ಮತ್ತು ಕಟರ್
 
ಗಾತ್ರ ಮತ್ತು ಆಪರೇಶನ್‌ನ ವಿಸ್ತಾಾರವಾದ ಶ್ರೇಣಿಯಲ್ಲಿ ಸ್ಕ್ವೇರ್ ಶೋಲ್ಡರ್ ಮಿಲ್ಲಿಂಗ್‌ನ ಕೆಲಸಕ್ಕಾಾಗಿ ಟರ್ಬೋ ವಿಧದ ಮಿಲ್‌ ಗಳನ್ನು ಬಳಸುವುದು ಲಾಭಕಾರಿಯಾಗಿದೆ. ಕಾರಣ ಅದರ ಪಾಸಿಟಿವ್ ಕಟಿಂಗ್ ರೇಕ್ ಡಿಸೈನ್‌ನಿಂದಾಗಿ ಕೇವಲ ವಿದ್ಯುತ್ ಶಕ್ತಿಯ ಬಳಕೆಯು ಕಡಿಮೆಯಾಗದೇ, ಇದರಿಂದಾಗಿ ಟೂಲ್‌ಗಳ ಬಾಳಿಕೆ ಮತ್ತು ಕಟಿಂಗ್‌ಗೋಸ್ಕರ ಇರುವ ಪರ್ಯಾಯಗಳೂ ಹೆಚ್ಚಾಾಗುತ್ತವೆ. ಪ್ರತಿಯೊಂದು ಟರ್ಬೋ ಕಟರ್‌ನಲ್ಲಿ ಉಚ್ಚಮಟ್ಟದ ಉತ್ಪಾಾದಕತೆ, ಸಾಮರ್ಥ್ಯ ಮತ್ತು ವರ್ಸಟ್ಯಾಾಲಿಟಿಯು ಒಳಗೊಂಡಿರುತ್ತದೆ. ಉಚ್ಚ ಮಟ್ಟದ ಪಾಸಿಟಿವ್ ಇನ್ಸರ್ಟ್‌ನಿಂದಾಗಿ ಯಂತ್ರಣೆಯ ಶಕ್ತಿಯೂ ಕಡಿಮೆ ಆಗುತ್ತದೆ. ಇದರಿಂದಾಗಿ ಉತ್ತಮವಾದ ಸರ್ಫೇಸ್ ಪಿನಿಶ್ ಕೂಡಾ ಲಭಿಸುತ್ತದೆ. ಟರ್ಬೋ ಕಟರ್‌ನ ಯೋಗ್ಯವಾಗಿರುವ ಡಿಸೈನ್‌ನಿಂದಾಗಿ ಉಚ್ಚಮಟ್ಟದ ಕಾರ್ಯಸಾಮರ್ಥ್ಯ ಮತ್ತು ತುಂಬು ಹೃದಯದ ವಿಶ್ವಾಾಸಾರ್ಹತೆಯೂ ಸಿಗುತ್ತದೆ ಮತ್ತು ಉಚ್ಚಮಟ್ಟದ ಸರಿಯುವ ವೇಗವನ್ನು ನಿರ್ವಹಿಸುವುದೂ ಸಾಧ್ಯವಾಗುತ್ತದೆ. ಹಲವಾರು ವರ್ಷಗಳಿಂದ ಬಳಸಲಾಗುತ್ತಿರುವ ಎರಡು ಬದಿಗಳ XOMX ಇನ್ಸರ್ಟ್‌ನಲ್ಲಿ ಈಗ ಭಿನ್ನ ಭೌಮಿತಿ ಮತ್ತು ಗ್ರೇಡ್‌ಗಳು ಉಪಲಬ್ಧವಿವೆ. ಇದರಿಂದಾಗಿ ಎಲ್ಲ ವಿಧದ ಮಟೀರಿಯಲ್‌ಗಳಲ್ಲಿ ರಫಿಂಗ್‌ನಿಂದ ಫಿನಿಶಿಂಗ್‌ತನಕದ ಕೆಲಸಗಳನ್ನು ಮಾಡುವುದು ಸಾಧ್ಯವಾಗುತ್ತದೆ.
 

3_1  H x W: 0 x 
 
ಉಷ್ಣತೆಯನ್ನು ತಡೆಗಟ್ಟುವಂತಹ ಲೋಹಗಳ ಮಿಶ್ರಣ (ಸೂಪರ್ ಅಲಾಯ್), ಅಲ್ಯುಮಿನಿಯಮ್‌ನಂತಹ ಘಟಕಗಳ ಯಂತ್ರಣೆಯ ಸಮಯದಲ್ಲಿ ತಯಾರಾಗುವ ಉಷ್ಣತೆಯನ್ನು ಕಡಿಮೆ ಮಾಡಲು ಉಚ್ಚಮಟ್ಟದ ಪಾಸಿಟಿವ್ ರೇಕ್ ಇರುವ ಇನ್ಸರ್ಟ್‌ನ ಆವಶ್ಯಕತೆಯು ಇರುತ್ತದೆ. ನಮ್ಮಲ್ಲಿರುವ ಸ್ಕ್ವೇರ್ ಶೋಲ್ಡರ್ ಸಿಸ್ಟಮ್‌ನಲ್ಲಿ ನಾಲ್ಕು ಮತ್ತು ಆರು ಯಂತ್ರಣೆಯ ಬದಿಗಳಿರುವ ಇನ್ಸರ್ಟ್‌ಗಳಿವೆ. ಇದರ ಆಯ್ಕೆಯು ಮಟೀರಿಯಲ್, ಮಶಿನ್, ಯಂತ್ರಭಾಗಗಳ ವೈಶಿಷ್ಟ್ಯ ಮತ್ತು ಇನ್ನಿತರ ಘಟಕಗಳಿಗೆ ಹೊಂದಿಕೊಂಡು ಮಾಡಲಾಗುತ್ತದೆ.
 

4_1  H x W: 0 x 
 
ನಮಗೆ ಇದು ಬರೇ ಕಣ್ಣುಗಳಿಗೆ ಕಾಣುವುದು ಅಸಾಧ್ಯ. ಆದರೆ ಟರ್ಬೋಗಳ ಅಸಾಧಾರಣವಾದ ಇನ್ಸರ್ಟ್ ತುಂಬಾ ಹತ್ತಿರದಿಂದ ನಿರೀಕ್ಷಿಸಿದಾಗ ಅದರಲ್ಲಿ ಆಪ್ಟಿಮೈಜ್ಡ್‌ ಎಡ್ಜ್‌, ಎಡವಾನ್‌ಸ್‌ಡ್‌ ಹೆಲಿಕ್ಸ್‌ ಕೋನ, ದೊಡ್ಡ ವೈಪರ್ ಫ್ಲ್ಯಾಾಟ್ ಮತ್ತು ಒಂದು ದೃಢವಾದ, ತುಂಬಾ ಪಾಸಿಟಿವ್ ರೇಕ್ ಕೋನವು ಇರುವುದು ಕಂಡುಬರಬಹುದು. ಇದರಿಂದಾಗಿ ಸ್ಕ್ವೇರ್ ಶೋಲ್ಡರ್ ಮಿಲ್ಲಿಂಗ್‌ನಲ್ಲಿ ಉತ್ಪಾಾದಕತೆಯ ಉಚ್ಚ ಸ್ತರವನ್ನು ಸಾಧಿಸುವುದು ಸಾಧ್ಯವಾಗುತ್ತದೆ. ತಮಗೆ ಇದರಲ್ಲಿ ಸ್ಲಾಾಟ್, ರ್ಯಾಾಂಪ್, ಕಂಟೂರ್, ಪ್ಲಂಜ್, ಪಾಕೇಟ್ ಮಿಲ್ ಮತ್ತು (ಉರುಟು ಮತ್ತು ಹೆಲಿಕಲ್ ಎಂಬ ಎರಡೂ ವಿಧದ) ಇಂಟರ್‌ ಪೊಲೇಶನ್ ಇಂತಹ ವಿವಿಧ ಕೆಲಸಗಳನ್ನು ಮಾಡುವ ವರ್ಸಟ್ಯಾಾಲಿಟಿಯೂ ಸಿಗುತ್ತದೆ. ಈ ಇನ್ಸರ್ಟ್ ಎಲ್ಲ ರೀತಿಯ ಮಟೀರಿಯಲ್‌ಗಳ ಕಾರ್ಯವಸ್ತುಗಳಿಗೆ ಯಂತ್ರಣೆಯನ್ನು ಮಾಡಲು ಮತ್ತು ನಾನ್ ಫೇರಸ್ ಮಿಶ್ರಲೋಹಗಳಿಂದ ಉಷ್ಣಾಾಂಶದ ಪ್ರತಿರೋಧಕವಾದ ಮಿಶ್ರ ಲೋಹಗಳ ತನಕ ಎಲ್ಲ ಅಪ್ಲಿಕೇಶನ್‌ಗಳ ಕೆಲಸ ಮಾಡಲು ವಿವಿಧ ಶ್ರೇಣಿ ಮತ್ತು ಭೌಮಿತಿಯಲ್ಲಿ ಉಪಲಬ್ಧವಿವೆ.
ಸ್ಟ್ಯಾಾಂಡರ್ಡ್ XOMX ಇನ್ಸರ್ಟ್‌ಗೆ ಬೇಕಾಗಿರುವ ಕ್ಲಿಷ್ಟ ಆಕಾರ ಮತ್ತು ಸರ್ಫೇಸ್ ತಯಾರಿಸಲು ಸೆಕೋ ಇವರು ಪ್ರಗತಿಪರ ಡೈರೆಕ್ಟ್‌ ಪ್ರೆಸ್ ಇನ್ಸರ್ಟ್ ಉತ್ಪಾದನೆಯ ಕೆಲಸದ ರೀತಿಯನ್ನು ಬಳಸಲಾಗುತ್ತದೆ. ಎಲ್ಲಿ ವಿಶಿಷ್ಟವಾದ ಬದಿಗಳ ಆವಶ್ಯಕತೆ ಇರುತ್ತದೆಯೋ, ಅಲ್ಲಿ ಸೆಕೋ ಕಡೆಯಿಂದ ನಿರ್ದೋಷವಾದ ಗ್ರೈಂಡಿಂಗ್ ಮಾಡಿರುವ XOMX ಇನ್ಸರ್ಟ್ ಉಪಲಬ್ಧವಿರುತ್ತವೆ. ಹಾಗೆಯೇ ಎಲ್ಲಿ ಯಂತ್ರಭಾಗಗಳ ರಚನೆ ಮತ್ತು ದೃಢತೆಯೂ ತುಂಬಾ ಮಹತ್ವದ್ದಾಾಗಿರುತ್ತದೆ. ಎರೋ ಸ್ಪೇಸ್ ಉದ್ಯಮ ಕ್ಷೇತ್ರದ ಬೇಡಿಕೆಯನ್ನು ಪೂರ್ತಿಗೊಳಿಸಲು ಕಾರ್ನರ್ ತ್ರಿಜ್ಯಗಳ ಪರ್ಯಾಯವೂ (ಹೆಚ್ಚು ಶಕ್ತಿಗೋಸ್ಕರ ಹೆಚ್ಚು ತ್ರಿಜ್ಯಗಳು) ನಮ್ಮ ವಿಸ್ತಾಾರವಾದ ಟರ್ಬೋ ಶ್ರೇಣಿಯ ಒಂದು ಭಾಗವಾಗಿದೆ.
 

5_1  H x W: 0 x 
 
ಟರ್ಬೋ ಇನ್ಸರ್ಟ್ 06 ಮಿ.ಮೀ., 10 ಮಿ.ಮೀ., 12 ಮಿ.ಮೀ. ಮತ್ತು 18 ಮಿ.ಮೀ. ಈ ರೀತಿಯ ನಾಲ್ಕು ವಿಧಗಳಲ್ಲಿ ಉಪಲಬ್ಧವಿದ್ದು ಅದನ್ನು ಅನುಕ್ರಮವಾಗಿ ನ್ಯಾಾನೋ ಟರ್ಬೋ, ಟರ್ಬೋ 10, ಸುಪರ್ ಟರ್ಬೋ ಮತ್ತು ಪಾವರ್ ಟರ್ಬೋ ಎಂಬ ಹೆಸರುಗಳಿಂದ ಗುರುತಿಸಲಾಗುತ್ತದೆ. ತುಂಡಿನ ಆಳ ಮತ್ತು ಮಶಿನ್‌ನ ವಿದ್ಯುತ್ ಶಕ್ತಿಯ ಉಪಲಬ್ಧತೆಗೆ ಅನುಸಾರವಾಗಿ ಇನ್ಸರ್ಟ್‌ನ ಪರಿಣಾಮಕಾರಿಯಾದ ಬಳಕೆಗೆ ನಾವು ಕಟರ್‌ನ ಆಯ್ಕೆಯನ್ನು ಮಾಡಬಲ್ಲೆವು. ಟರ್ಬೋ ಶ್ರೇಣಿಯಲ್ಲಿರುವ ಎಲ್ಲಕ್ಕಿಂತಲೂ ಚಿಕ್ಕದಾಗಿರುವ ನ್ಯಾನೋ ಟರ್ಬೋ ಇದರ ಕಾರ್ಯವು ತುಂಬಾ ದೊಡ್ಡದಾಗಿದ್ದು ನ್ಯಾನೋ ಟರ್ಬೋ ಇದರ ವ್ಯಾಾಸವು 10 ಮಿ.ಮೀ.ನಿಂದ ಪ್ರಾಾರಂಭವಾಗುತ್ತದೆ. ಎಚ್.ಎಸ್.ಎಸ್. ಮತ್ತು ಸ್ವಾಾಲಿಡ್ ಕಾರ್ಬೈಡ್ ಈ ಎರಡಕ್ಕೂ ನ್ಯಾಾನೋ ಇದು ಸೂಕ್ತವಾದ ಪರ್ಯಾಯವಾಗಿದೆ.
ಅಡ್ಜೆಸ್ಟೆಬಲ್ ಕಟರ್‌ಗೆ ಜೋಡಿಸಿರುವ ವಿಭಿನ್ನ ಪಿಚ್‌ಗಳಿರುವ ವಿವಿಧ ವ್ಯಾಾಸವಿರುವ ಕಟರ್ ನಮ್ಮಲ್ಲಿ ಒಂದು ಸ್ಟ್ಯಾಾಂಡರ್ಡ್ ಶ್ರೇಣಿಯಲ್ಲಿ ಉಪಲಬ್ಧವಿದೆ. ಸಿಲಿಂಡ್ರಿಕಲ್ ಶ್ಯಾಾಂಕ್, ಆರ್ಬರ್ ಡಿಸೈನ್ ಮತ್ತು ಕಾಂಬಿ ಮಾಸ್ಟರ್ ಡಿಸೈನ್‌ನ ಕಟರ್‌ಗಳೂ ಉಪಲಬ್ಧವಿವೆ. ಕಾಂಬಿ ಮಾಸ್ಟರ್‌ನ ಹೆಡ್ ಬದಲಾಯಿಸುವಂತೆ (ರಿಪ್ಲೆಸೆಬಲ್) ಇರುತ್ತವೆ ಮತ್ತು ಅವುಗಳಿಂದಾಗಿ ಸಂಪೂರ್ಣ ವ್ಯವಸ್ಥೆಗೆ ವರ್ಸಟ್ಯಾಾಲಿಟಿ ಮತ್ತು ಹೊಂದಿಕೊಳ್ಳುವಂತೆ ಸಿಗುತ್ತವೆ.
 

6_1  H x W: 0 x 
 
ಸ್ಕ್ವೇರ್ 6TM ಇನ್ಸರ್ಟ್ ಮತ್ತು ಕಟರ್
 
ಸೆಕೋ ಟೂಲ್ಸ್‌ ಇವರ ‘ಸ್ಕ್ವೇರ್ 6TM ಇನ್ಸರ್ಟ್ ಇದು ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಟರ್ಬೋ ಗ್ರೇಡ್‌ಗೆ ಪೂರಕವಾಗಿವೆ. ಮಲ್ಟಿ ಎಜ್ಡ್‌ (ಅನೇಕ ಬದಿಗಳಿರುವ) ಇನ್ಸರ್ಟ್‌ನ ಪರ್ಯಾಯಕ್ಕೆ ಆಧರಿಸಿರುವ ಒಂದು ಸ್ಕ್ವೇರ್ ಶೋಲ್ಡರ್ ಮಿಲ್ಲಿಂಗ್‌ನ ವ್ಯವಸ್ಥೆಯನ್ನು ವಿಕಸಿಸುವುದೇ ಸೆಕೋ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಭಾಗದ ಗುರಿಯಾಗಿತ್ತು. ಈ ಉಪಾಯಗಳು ವಿಸ್ತಾರವಾದ ಎಪ್ಲಿಕೇಶನ್‌ನ ಕ್ಷೇತ್ರವನ್ನು ನಿರ್ವಹಿಸುವಲ್ಲಿ ಸಾಕಷ್ಟು ಹೊಂದಾಣಿಕೆಯುಳ್ಳ, ಹೆಚ್ಚಿನ ಸರಿಯುವ ವೇಗವನ್ನು ನಿರ್ವಹಿಸಲು ಸಾಕಷ್ಟು ದೃಢ ಮತ್ತು ಎಲ್ಲಕ್ಕಿಂತಲೂ ಮಹತ್ವದ್ದೆಂದರೇ ತುಂಬಾ ಲಾಭಕಾರಿಯಾಗಿಯೂ ಇರಬೇಕು ಎಂಬುದೂ ಅವರ ಧ್ಯೇಯವಾಗಿತ್ತು.
 
ಸ್ಕ್ವೇರ್ 6TM ಚದರ ಶೋಲ್ಡರ್ ಮಿಲ್ಲಿಂಗ್‌ನ ಅಸಾಧಾರಣವಾದ ಇನ್ಸರ್ಟ್‌ನಲ್ಲಿ ಆರು ಯಂತ್ರಣೆಯ ಬದಿಗಳಿರುತ್ತವೆ. ಪ್ರತಿಯೊಂದು ಬದಿಯಲ್ಲಿ ಮೂರು 90್ನ ನ ಬದಿಗಳಿರುತ್ತವೆ. ಪ್ರತಿಯೊಂದು ಬದಿಯ ಮೂಲಕ ಇನ್ಸರ್ಟ್ ಮೂಲಕ 90° ಕಟ್ ಪಡೆಯಬಹುದಾಗಿದೆ. ಆದ್ದರಿಂದ 90° ನ ಬದಿಯನ್ನು ಪಡೆಯಲು ಎರಡು ಯಂತ್ರಣೆಗಳ ಪ್ರಕ್ರಿಯೆಯನ್ನು ಮಾಡುವ ಅಗತ್ಯವು ಇಲ್ಲದಂತಾಗುತ್ತದೆ. ಈ ಇನ್ಸರ್ಟ್ ಐ.ಎಸ್.ಓ. ಪ್ರಣಾಳಿಕೆಗೆ ಅನುಸಾರವಾಗಿ X ನ ವರ್ಗೀಕರಣದಲ್ಲಿ ಹೊಂದಿಕೊಳ್ಳುವಂತಹ ಒಂದು ಹೊಸದಾದ ತ್ರಿಕೋನದ ರಚನೆಯಾಗಿದೆ. ಹೊಸದಾಗಿ ಡಿಸೈನ್ ಮಾಡಿರುವ ಕಟರ್ ಬಾಡಿಗೆ ಆಪ್ಟಿಮೈಸ್ಡ್‌ ಬಾಳಿಕೆಯಾಗಲು ಮತ್ತು ತುಕ್ಕು ಹಿಡಿಯದಂತೆ ಪ್ರತಿಕಾರವನ್ನು ಮಾಡಲು ಲೇಪನ (ಕೋಟಿಂಗ್) ಮಾಡಲಾಗಿದೆ. ಪ್ರೀ ಹಾರ್ಡ್‌ನಿಂಗ್ ಮಾಡಿರುವುದರಿಂದ ಇದು ತುಂಬಾ ಕಠಿಣತೆಯಿಂದ ಕೂಡಿರುತ್ತದೆ ಮತ್ತು ಇದರಿಂದಾಗಿ ಪ್ಯಾಕೇಟ್‌ನಲ್ಲಿ ಯಂತ್ರಣೆಯನ್ನು ಮಾಡುವಾಗ ಉಚ್ಚಮಟ್ಟದ ಟಾಲರನ್‌ಸ್‌ ಪಡೆಯಬಹುದಾಗಿದೆ. ಸ್ಕ್ವೇರ್ 6TM ನಲ್ಲಿ ಉಪಲಬ್ಧವಿರುವ ಇನ್ಸರ್ಟ್ ಮತ್ತು ಕಟರ್ ಬಾಡಿ ವಿಸ್ತಾಾರವಾದ ಶ್ರೇಣಿಯಿಂದಾಗಿ ಅದರ ಅಪ್ಲಿಕೇಶನ್ ಮತ್ತು ಕಾರ್ಯವಸ್ತುವಿನ ಮಟೀರಿಯಲ್‌ನ ಕುರಿತಾದ ನೈಜತೆಯಲ್ಲಿ ಇನ್ನಷ್ಟು ಹೆಚ್ಚಳವಾಗಿದೆ.
 
ಹೆಲಿಕಲ್ ಮಿಲ್ಲಿಂಗ್ ಕಟರ್, ಟರ್ಬೋ ಇನ್ಸರ್ಟ್‌ನ ಉಪಯೋಗವನ್ನು ಮಾಡುತ್ತದೆ ಮತ್ತು ಉನ್ನತ ಹೆಲಿಕ್‌ಸ್‌ ಡಿಸೈನ್‌ನಿಂದಾಗಿ ಯಂತ್ರಣೆಯಲ್ಲಿ ಕೆಲಸವು ಸುಲಭವಾಗುತ್ತದೆ. ಇದರಿಂದಾಗಿ ಯಂತ್ರಣೆಯ ಶಕ್ತಿಯು ಕಡಿಮೆ ಆಗಿ ವಿದ್ಯುತ್‌ನ ಬಳಕೆಯೂ ಕಡಿಮೆ ಆಗುತ್ತದೆ.
 
ಮಲ್ಟಿ ಎಡ್‌ಜ್‌ ಟೂಲ್‌ಗಳು ಮಾರುಕಟ್ಟೆಯಲ್ಲಿ ತುಂಬಾ ಪ್ರಚಲಿತವಾಗಿವೆ. ಆದರೆ ಸ್ಕ್ವೇರ್ 6TM ಶೋಲ್ಡರ್ ಮಿಲ್ಲಿಂಗ್‌ಗೆ ಸ್ವಂತದ್ದೇ ಆದ ಒಂದು ಬೇರೆಯೇ ಶ್ರೇಣಿ ಇದೆ. ಇದರ ಪ್ರಮುಖವಾದ ಕಾರಣವೆಂದರೆ ಅದರಲ್ಲಿರುವ ಗುಣಧರ್ಮ ಮತ್ತು ಸಾಮರ್ಥ್ಯ, ದೃಢಪಡಿಸಿರುವ ತಂತ್ರಜ್ಞಾನ ಮತ್ತು ನೂತನವಾದ ಡಿಸೈನ್ ಪರ್ಯಾಯಗಳ ಸಂಯೋಜನೆಯ ಪರಿಣಾಮವಾಗಿದೆ. ಸ್ಕ್ವೇರ್ 6TM ಬಳಸಿ ಯಂತ್ರಣೆಯ ಕೆಲಸದಲ್ಲಿ ಶೋಲ್ಡರ್ ಮಿಲ್ಲಿಂಗ್‌ನ ನಂತರ ಅನೇಕ ಕ್ರಿಯೆಗಳನ್ನು ಮಾಡುವುದೂ ಸಾಧ್ಯವಾಗಿದೆ. ಇದರಲ್ಲಿ ಸ್ಲಾಾಟಿಂಗ್ ಮತ್ತು ಪ್ಲಂಜಿಂಗ್ ಇವುಗಳು ಒಳಗೊಂಡಿವೆ. ಈ ಸ್ಕ್ವೇರ್ ಶೋಲ್ಡರ್ ಕಟರ್ ಫೇಸ್ ಮಿಲ್ಲಿಂಗ್‌ಗೋಸ್ಕರವೂ ಬಳಸಬಹುದಾಗಿದೆ. ಇದರಿಂದಾಗಿ ಈ ಉತ್ಪಾಾದನೆಯ ನೈಜತೆಯು ಸಿದ್ಧವಾಗುತ್ತದೆ.
 
ಸ್ಕ್ವೇರ್ 6TM ನಲ್ಲಿ ಆರು ಯಂತ್ರಣೆಯ ಬದಿಗಳಿರುವುದರಿಂದ ಪ್ರತಿಯೊಂದು ಯಂತ್ರಣೆಯ ಬದಿಯ ಖರ್ಚು ಕಡಿಮೆ ಮಾಡಬಹುದು. ಪ್ಯಾಾಕೇಟ್ ಸೀಟ್‌ನಲ್ಲಿರುವ ಎಕ್ಸಿಸ್ ರೇಕ್ ನಿಗೆಟಿವ್ ಇದೆ. ಆದರೆ
ಇನ್ಸರ್ಟ್‌ನಲ್ಲಿರುವ ಪಾಸಿಟಿವ್ ಯಂತ್ರಣೆಯ ಬದಿಯು ಕಟಿಂಗ್ ರೇಕ್‌ನ ಕೋನವನ್ನು ಪಾಸಿಟಿವ್ ಮಾಡುತ್ತದೆ. ಇದರಿಂದಾಗಿ ಉನ್ನತ ಕಾರ್ಯ ಸಾಮರ್ಥ್ಯವು ನಿರ್ಧರಿಸಲ್ಪಡುತ್ತದೆ.
 
ವೈಶಿಷ್ಟ್ಯಗಳು
 
> 90° ಸೆಟಿಂಗ್ ಕೋನವಿರುವ ಸ್ಕ್ವೇರ್ 6TM ಕಟರ್.
ಒಂದೇ ಆಪರೇಶನ್‌ನಲ್ಲಿ ನಿರ್ದೋಷವಾದ 90° ಸ್ಕ್ವೇರ್ ಪಡೆಯಬಹುದಾಗಿದೆ.
>ವಿವಿಧ ಹಂತಗಳಲ್ಲಿ ಬದಿಯ ಯಂತ್ರಣೆಯನ್ನು ಮಾಡುತ್ತಿರುವಾಗ ಯಾವುದೇ ವ್ಯತ್ಯಾಾಸವು ಕಂಡುಬರುವುದಿಲ್ಲ.
ಲೇಪನ ಮಾಡಿರುವ ಕಟರ್ ಬಾಡಿಯಿಂದಾಗಿ ಟೂಲ್‌ನ ಆಯುಷ್ಯವು ಹೆಚ್ಚುತ್ತದೆ.
ಮುಂಚಿತವಾಗಿ ಹಾರ್ಡ್‌ನೆಸ್ ಮಾಡಿರುವ ಕಟರ್ ಬಾಡಿ ಮತ್ತು ಮಿತಿಯಲ್ಲಿ ಗ್ರೈಂಡ್ ಮಾಡಿರುವ ಇನ್ಸರ್ಟ್ ಹೆಚ್ಚು ಒಳ್ಳೆಯ ಟಾಲರನ್ಸ್‌ ಮತ್ತು ಹೆಚ್ಚು ವಿಶ್ವಾಸಾರ್ಹತೆಯನ್ನು ನೀಡುತ್ತವೆ.
ಯಂತ್ರಣೆಯನ್ನು ಮಾಡಿರುವ ಭಾಗಗಳಲ್ಲಿ ಉಚ್ಚಮಟ್ಟದ ನಿಖರತೆ ಮತ್ತು ಟಾಲರನ್ಸ್‌.
ಒಂದೇ ಟೂಲ್ ಬಳಸಿ ಲಾಭಕಾರಿಯಾಗಿ ಮತ್ತು ಚಟುವಟಿಕೆಗಳೂ ಸಾಧ್ಯ.
 
ಸ್ಕ್ವೇರ್ 6TM ಕಟರ್ 6-04 ಮತ್ತು ಸ್ಕ್ವೇರ್ 608 ಈ ಎರಡು ಇನ್ಸರ್ಟ್‌ಗಳು ಸ್ಕ್ವೇರ್‌ನ ಗಾತ್ರದಲ್ಲಿ ಉಪಲಬ್ಧವಿವೆ. ಇದರ ಆಯ್ಕೆಯು ತುಂಡಿನ ಆಳಕ್ಕೆ ಅನುಗುಣವಾಗಿ ಮಾಡಬಹುದಾಗಿದೆ. ಈ ಕಟರ್ ಒರಟು (ಕೋರ್), ಸಾಮಾನ್ಯ (ನಾರ್ಮಲ್) ಮತ್ತು ಕ್ಲೋಜ್ ಪಿಚ್ ಶೈಲಿ ಇಂತಹ ಮೂರು ವಿಧಗಳಲ್ಲಿ ಲಭ್ಯವಿವೆ. ಭೌಮಿತಿ, ಗ್ರೇಡ್ ಮತ್ತು ಮೂಲೆಗಳ ತ್ರಿಜ್ಯ ಇವುಗಳ ವೈವಿಧ್ಯಗಳು ಬೃಹತ್ ಪ್ರಮಾಣದಲ್ಲಿ ಉಪಲಬ್ಧವಾಗಿರುವುದರಿಂದ ಸ್ಕ್ವೇರ್ 6TM ಕಟರ್ ಈ ಕ್ಷೇತ್ರದಲ್ಲಿ ಎಲ್ಲಕ್ಕಿಂತಲೂ ಯಶಸ್ವಿಯಾಗಿವೆ ಎಂದು ತಿಳಿಯಲಾಗಿದೆ. ಅನೇಕ ಗ್ರಾಾಹಕರಿಗೆ ಕಟಿಂಗ್ ಟೂಲ್‌ನ ಆಯ್ಕೆ ಮಾಡುವಾಗ ಕೇವಲ ಬೆಲೆಯೇ ಪ್ರಮುಖವಾದದ್ದು ಎಂದು ಅನಿಸುವುದಿಲ್ಲ. ಆದರೆ ಆ ಟೂಲ್‌ನ ಮೂಲಕ ಎಷ್ಟು ಯಂತ್ರಣೆಯನ್ನು ಮಾಡಬಹುದು ಮತ್ತು ಅದರ ಪರಿಣಾಮದಿಂದಾಗಿ ಅದರ ಬೆಲೆಯನ್ನು ಹೋಲಿಸಿದಲ್ಲಿ ಆ ಟೂಲ್ ಎಷ್ಟು ಉತ್ಪಾಾದನೆಗೆ ಯೋಗ್ಯವಾಗಿರಬಹುದು, ಎಂಬುದರ ವಿಚಾರವನ್ನು ಪ್ರಮುಖವಾಗಿ ಮಾಡಲಾಗುತ್ತದೆ. ಈ ಗುರಿಯನ್ನು ಸಾಧಿಸುವುದಕ್ಕೋಸ್ಕರ ಸೆಕೋ ಇವರು ಗ್ರಾಾಹಕರೊಂದಿಗೆ ಪಾಲುಗಾರರೆಂದು ಕೆಲಸ ಮಾಡುತ್ತಿದ್ದಾಾರೆ.
 
ಕೇಸ್ ಸ್ಟಡಿ
ಮಶಿನ್ : ಮಝಾಕ್ ವಿ.ಎಮ್.ಸಿ.
ಮಟೀರಿಯಲ್ : SS316L
ಆಪರೇಶನ್ : ಕಚ್ಚುಗಳನ್ನು ಮಾಡುವುದು ಮತ್ತು ಸ್ಕ್ವೇರ್ ಶೋಲ್ಡರ್ ಮಿಲ್ಲಿಂಗ್
 
ಗ್ರಾಹಕರಿಗಾದ ಲಾಭಗಳು
ಉತ್ಪಾಾದಕತೆಯಲ್ಲಿ 100% ಸುಧಾರಣೆಯಾಗಿ ಟೂಲ್‌ನ ಬಾಳಿಕೆಯಲ್ಲಿ 50% ಹೆಚ್ಚಳವಾಯಿತು. ಬದಿಯಲ್ಲಾಾಗುವ ಸವೆತದ ಕುರಿತು ಮೊದಲಾಗಿಯೇ ಅರಿವಾಗುವುದರಿಂದ ಪ್ರಕ್ರಿಯೆಯು ಹೆಚ್ಚು ಸುರಕ್ಷಿತವಾಯಿತು.
 
  

rajesh gupta_1   
ರಾಜೇಶ್ ಗುಪ್ತಾ
ಉಪ ಹಿರಿಯ ವ್ಯವಸ್ಥಾಾಪಕರು,
ಮಿಲ್ಲಿಂಗ್ ಮತ್ತು ಅಡ್ವಾನ್ಸ್‌ ಮಟೀರಿಯಲ್ ವಿಭಾಗ,
ಸೆಕೋ ಟೂಲ್ಸ್‌ ಇಂಡಿಯಾ ಪ್ರೈ.ಲಿ. 
9822604996
 
ರಾಜೇಶ್ ಗುಪ್ತಾ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಸೆಕೋ ಟೂಲ್ಸ್‌ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲಿ ಮಿಲ್ಲಿಂಗ್ ಮತ್ತು ಎಡವಾನ್ಸ್‌ ಮಟೀರಿಯಲ್ ವಿಭಾಗದ ಉಪ ಮಹಾ ವ್ಯವಸ್ಥಾಪಕರಾಗಿದ್ದಾಾರೆ. ಅವರು                                                 ಮಶಿನಿಂಗ್ ಕ್ಷೇತ್ರದಲ್ಲಿ 25 ವರ್ಷಗಳಷ್ಟು ಅನುಭವವನ್ನು ಹೊಂದಿದ್ದಾರೆ.