ಪ್ರೆಸ್ ಆಗಾಗ ಜಾಮ್ ಆಗುವುದು

Udyam Prkashan Kannad    30-Jan-2020
Total Views |


ಒಂದು ಮಧ್ಯಮ ಕಂಪನಿಯಲ್ಲಿ ಸಿಂಗಲ್ ಅ್ಯಕ್ಷನ್, ಇಕ್ಸೆಂಟ್ರಿಕ್ ಡ್ರಿವನ್, 4 ಪಾಯಿಂಟ್ ಮತ್ತು 4 ಕಾಲಮ್ ಇರುವ 500 ಟನ್ ಸಾಮರ್ಥ್ಯವುಳ್ಳ ಪಾವರ್ ಪ್ರೆಸ್ ಇತ್ತು. ವಾಹನ ಉದ್ಯಮಗಳಿಗೋಸ್ಕರ ಬೇಕಾಗುವ ಶೀಟ್‌ಗಳ ಭಾಗಗಳನ್ನು ಈ ಪ್ರೆಸ್‌ನಲ್ಲಿ ‘ಡ್ರಾ’ ಮಾಡಲಾಗುತ್ತಿತ್ತು. ಈ ಪ್ರೆಸ್ ಆಗಾಗ ಜಾಮ್ ಆಗುತ್ತಿತ್ತು. ಅದು ಜಾಮ್ ಆಗಿದ್ದರಿಂದ ಸಹಜವಾಗಿಯೇ ಕೆಲಸಗಳೆಲ್ಲವೂ ಸ್ಥಗಿತಗೊಳ್ಳುತ್ತಿದ್ದವು. ಮತ್ತೆ ಕೆಲಸ ಪ್ರಾಾರಂಭಿಸಲು ಪ್ರತಿಯೊಂದು ಸಲ ಟೈ ರಾಡ್ ಸಡಿಲಿಸಿ ಜಾಮ್ ಆಗಿರುವ ಪ್ರೆಸ್ ಬಿಡುಗಡೆ (ರಿಲೀಸ್) ಮಾಡಬೇಕಾಗುತ್ತಿತ್ತು. ಆಗಾಗ ಇಂತಹ ಅಡಚಣೆಯನ್ನು ಎದುರಿಸಬೇಕಾಗಿದ್ದರಿಂದ ಮಾಡುತ್ತಿರುವ ಕೆಲಸದಲ್ಲಿ ತೊಂದರೆಗಳು ಉಂಟಾಗುತ್ತಿದ್ದವು. ಇದರ ಹೊರತಾಗಿ ಸಾಕಷ್ಟು ಸಮಯದ ಬಳಕೆಯೂ ಆಗಿ ಆರ್ಥಿಕವಾಗಿ ಈ ಕಂಪನಿಗೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತಿತ್ತು. ಈ ತೊಂದರೆಯು ಯಾವ ಕಾರಣದಿಂದ ಉಂಟಾಗುತ್ತಿದೆ ಮತ್ತು ಇದಕ್ಕೆ ಶಾಶ್ವತವಾದ ಉಪಾಯ ಏನು, ಎಂಬುದರ ಕುರಿತು ಇದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಸಲಹೆಗಾರರಿಗೆ ಕೇಳಲಾಯಿತು.
 
ಸಲಹೆಗಾರರು ಕಂಪನಿಗೆ ಭೇಟಿ ನೀಡಿದರು. ಅವರು ಪ್ರೆಸ್ ನಿರೀಕ್ಷಿಸಿದರು. ಪ್ರೆಸ್ ಯಾವ ಕಾರಣದಿಂದ ಜಾಮ್ ಆಗುತ್ತಿದೆ ಎಂಬುದರ ಕುರಿತು ವಿಚಾರ ಮಾಡುವಾಗ ಪ್ರೆಸ್‌ನ ನಿರ್ವಹಣೆಯನ್ನು ಮಾಡುವ ಇಂಜಿನಿಯರ್ ಮತ್ತು ಆಪರೇಟರ್ ಇವರೊಂದಿಗೆ ಪ್ರೆಸ್‌ನ ಕಾರ್ಯಸ್ಥಿತಿ ಮತ್ತು ಕೆಲಸ ಸಾಮರ್ಥ್ಯದ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಿದರು.
 
1. ಪ್ರಶ್ನೆ: ಪ್ರೆಸ್ ಓವರ್‌ಲೋಡ್ ಆದರೆ ಸುರಕ್ಷೆಯ ಕುರಿತು ಯಾವ ಉಪಾಯಗಳಿವೆ?
ಉತ್ತರ : ಓವರ್‌ಲೋಡ್ ಆದಲ್ಲಿ ಪ್ರೆಸ್‌ ನ ಸುರಕ್ಷೆಗೋಸ್ಕರ ಹೈಡ್ರಾಲಿಕ್ ಪ್ರಣಾಳಿಕೆ ಇದೆ.
 

1_1  H x W: 0 x 
 
2. ಪ್ರಶ್ನೆ: ಪ್ರೆಸ್ ಯಾವಾಗ ಜಾಮ್ ಆಗುತ್ತದೆ? ಪ್ರೆಸ್‌ನಲ್ಲಿ ಕಾರ್ಯವಸ್ತುವಿನ ಸೆಟಿಂಗ್ ಮಾಡುತ್ತಿರುವಾಗ ಜಾಮ್ ಆಗುತ್ತದೆಯೋ ಅಥವಾ ಪ್ರೆಸ್‌ನ ಉತ್ಪಾಾದನೆಯಾಗುತ್ತಿರುವಾಗ?
ಉತ್ತರ : ಉತ್ಪಾಾದನೆಯು ಆಗುತ್ತಿರುವಾಗ ಪ್ರೆಸ್ ಜಾಮ್ ಆಗುತ್ತದೆ.
 
3. ಪ್ರಶ್ನೆ: ಹಲವಾರು ಕಾರ್ಯವಸ್ತುಗಳಿಗೋಸ್ಕರ ರ್ಯಾಕ್ ಕ್ರೆಂಕ್ ಸ್ಕ್ರೂನಲ್ಲಿ ತುಂಬಾ ಕೆಳಗೆ ಮಾಡಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಪ್ರೆಸ್ ಜಾಮ್ ಆಗುತ್ತದೆಯೇ, ಸಾಮಾನ್ಯವಾಗಿ ಸೆಟಿಂಗ್ ಮಾಡಿ ಉತ್ಪಾಾದನೆಯನ್ನು (ಪ್ರಾಾಡಕ್ಷನ್) ಮಾಡುವಾಗ ಪ್ರೆಸ್ ಜಾಮ್ ಆಗುತ್ತದೆಯೇ?
ಉತ್ತರ : ಸಾಮಾನ್ಯವಾಗಿ ಸೆಟಿಂಗ್ ಇರುವಾಗಲೇ ಪ್ರೆಸ್ ಜಾಮ್ ಆಗುತ್ತದೆ. 
 
4. ಪ್ರಶ್ನೆ: ಕಂಪನಿಯಲ್ಲಿ ತುಂಬಾ ಸಲ ವಿದ್ಯುತ್ ಪೂರೈಕೆಯ ಕಡಿತವಾಗುತ್ತದೆಯೇ ಮತ್ತು ಅದೇ ವೇಳೆಯಲ್ಲಿ ಜಾಮಿಂಗ್ ಆಗುತ್ತದೆಯೋ?
ಉತ್ತರ : ಕಂಪನಿಯಲ್ಲಿ ತುಂಬಾಸಲ ವಿದ್ಯುತ್ ಪೂರೈಕೆಯು ನಿಲ್ಲುತ್ತದೆ, ಆದರೆ ಆ ಸಮಯದಲ್ಲಿ ಪ್ರೆಸ್ ಜಾಮ್ ಆಗುವಂತಹ ಸಮಸ್ಯೆಯು ಉಂಟಾಗುವುದಿಲ್ಲ.
 
5. ಪ್ರಶ್ನೆ: ಹೈಡ್ರಾಾಲಿಕ್ ಮತ್ತು ನ್ಯುಮ್ಯಾಾಟಿಕ್ ಇವೆರಡರಲ್ಲಿ ಯಾವ ವಿಧದ ಕ್ಲಚ್ ಮತ್ತು ಬ್ರೇಕ್ ಬಳಸಲಾಗುತ್ತದೆ?
ಉತ್ತರ : ನ್ಯುಮ್ಯಾಟಿಕ್
 
6. ಪ್ರಶ್ನೆ: ಕಾಂಪ್ರೆಸರ್ ಆಗಾಗ ‘ಟ್ರಿಪ್’ ಆಗುತ್ತದೆಯೇ?
ಉತ್ತರ : ಹೌದು. ಕಾಂಪ್ರೆಸರ್ ಆಗಾಗ ‘ಟ್ರಿಪ್’ ಆಗುತ್ತದೆ. ಈ ರೆಸಿಪ್ರೋಕೇಟಿಂಗ್ ಪಿಸ್ಟನ್‌ನ ವಿಧದ ಕಾಂಪ್ರೆಸರ್ ಆಗಿದ್ದು 25 ವರ್ಷಗಳಷ್ಟು ಹಳೆಯದಾಗಿದ್ದರಿಂದ ಅದು ಕಾರಣಾಂತರಗಳಿಂದ ಆಗಾಗ ‘ಟ್ರಿಪ್’ ಆಗುತ್ತದೆ.
 
7. ಪ್ರಶ್ನೆ: ಕಾಂಪ್ರೆಸರ್ ‘ಟ್ರಿಪ್’ ಆಗುವಾಗ ಜಾಮಿಂಗ್‌ನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆಯೇ?
ಉತ್ತರ : ಹೌದು. ಕಾಂಪ್ರೆಸರ್ ‘ಟ್ರಿಪ್’ ಆದನಂತರ ತುಂಬಾ ಸಲ ಪ್ರೆಸ್ ಜಾಮ್ ಆಗುತ್ತದೆ.
 
8. ಪ್ರಶ್ನೆ: ಪ್ರೆಸ್‌ನಲ್ಲಿರುವ ಎಯರ್ ಪ್ರೆಶರ್ ಸ್ವಿಚ್ ಎಷ್ಟು ವ್ಯಾಲ್ಯೂನಲ್ಲಿ ಸೆಟ್ ಮಾಡಲಾಗಿರುತ್ತದೆ?
ಉತ್ತರ: ಎಯರ್ ಪ್ರೆಶರ್ ಸ್ವಿಚ್ 2.5 ಕಿ.ಗ್ರಾಂ./ ಸೆಂ.ಮೀ.2 ಈ ವ್ಯಾಲ್ಯೂಗೆ ಸೆಟ್ ಮಾಡಲಾಗಿತ್ತು. ಈ ವ್ಯಾಾಲ್ಯೂಗಿಂತ ಒತ್ತಡವು ಕಡಿಮೆ ಆಗುವಾಗ ಪ್ರೆಸ್ ಅದೇ ಜಾಗದಲ್ಲಿ ನಿಲ್ಲುತ್ತಿತ್ತು. ಆದರೆ ಎಯರ್ ಪ್ರೆಶರ್ ಸ್ವಿಚ್‌ನಲ್ಲಿ ದೋಷಗಳಿರುವುದರಿಂದ ತುಂಬಾ ದಿನಗಳಿಂದ ಅದನ್ನು ಬೈಪಾಸ್ ಮಾಡಲಾಗಿತ್ತು.
 

2_1  H x W: 0 x 
 
9. ಪ್ರಶ್ನೆ: ಪ್ರೆಸ್ ಜಾಮ್ ಆಗುವಾಗ ಸ್ಟ್ರೋಕ್ ಇಂಡಿಕೇಟರ್ ಇದು ನಿಖರವಾಗಿ ಬಾಟಮ್ ಡೆಡ್ ಸೆಂಟರ್‌ನ ಜಾಗದಲ್ಲಿ (ಬಿ.ಡಿ.ಸಿ.) ಇರುತ್ತದೆಯೋ?
ಉತ್ತರ: ಗೊತ್ತಿಲ್ಲ. ಕಾರಣ ಈ ಹಿಂದೆ ತುಂಬಾ ದಿನಗಳಿಂದ ಸ್ಟ್ರೋೋಕ್ ಇಂಡಿಕೇಟರ್ ಕೆಲಸವನ್ನು ನಿರ್ವಹಿಸುತ್ತಿಲ್ಲ.
ವಿಶ್ಲೇಷಣೆ
 
ಮೆಕ್ಯಾನಿಕಲ್ ಪ್ರೆಸ್ ಇದು ಕ್ರ್ಯಾಾಂಕ್ ಅಥವಾ ಇಕ್ಸೆಂಟ್ರಿಕ್ ರೀತಿಯಲ್ಲಿ (ಮೆಕ್ಯಾನಿಸಮ್) ಕೆಲಸ ಮಾಡುತ್ತದೆ, ಎಂಬುದು ತಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪ್ರೆಸ್‌ನ ಇಲೆಕ್ಟ್ರಿಕ್ ಮೋಟರ್‌ನಿಂದ ತಯಾರಾಗುವ ರೋಟರಿ ಮೋಶನ್ ಕ್ಲಚ್ ಮತ್ತು ಬ್ರೇಕ್ ಯುನಿಟ್‌ನಿಂದ ಮುಂದೆ ಕ್ರ್ಯಾಂಕ್‌ನೆಡೆಗೆ ಟ್ರಾನ್ಸ್‌‌ಮಿಟ್ ಮಾಡಲಾಗುತ್ತದೆ. ಇದರಿಂದಾಗಿ ರ್ಯಾಾಮ್ ಹಿಂದು-ಮುಂದಾಗುವ ಚಟುವಟಿಕೆಯು (ರೆಸಿಪ್ರೊಕೆಟಿಂಗ್ ಮೂವ್‌ಮೆಂಟ್) ಕಾರ್ಯಗತವಾಗುತ್ತದೆ. ರ್ಯಾಮ್‌ಗೆ ಕ್ರ್ಯಾಂಕ್‌ಮೂಲಕ ಸಿಗುವ ಶಕ್ತಿಯು ಫಿಕ್‌ಸ್‌ (ಸ್ಥಿರ) ಆಗಿರುತ್ತದೆ. ರ್ಯಾಾಮ್ ಬಿ.ಡಿ.ಸಿ. ಜಾಗದಲ್ಲಿ ಬರುವಾಗ ಮೆಕ್ಯಾನಿಕಲ್ ಪ್ರೆಸ್‌ನಲ್ಲಿರುವ ಫೋರ್ಸ್ ಹೆಚ್ಚಾಗಿರುತ್ತದೆ. ಬಿ.ಡಿ.ಸಿ. ಸ್ಥಾನದ ಮುಂದೆ 12 ರಿಂದ 15 ಮಿ.ಮೀ.ನಲ್ಲಿ ಈ ಭಾರವು ಪ್ರೆಸ್‌ನ ರೇಟೆಡ್ ಸಾಮರ್ಥ್ಯಕ್ಕೆ ತುಂಬಾ ಹತ್ತಿರ ಇರುತ್ತದೆ. ಸ್ಟ್ರೋಕ್ ಮತ್ತು ಕ್ರ್ಯಾಂಕ್ ಅ್ಯಂಗಲ್‌ನಲ್ಲಿ ‘ಸಿನ್ಯುಸೈಡಲ್’ನ ಸಂಬಂಧವು ಇರುತ್ತದೆ. ರ್ಯಾಮ್‌ನ ಕ್ರ್ಯಾಾಂಕ್ ಅ್ಯಂಗಲ್ 800 ಮತ್ತು 1000 ಯಲ್ಲಿ (ಕ್ರ್ಯಾಂಕ್‌ನ 200 ರೋಟೇಶನ್) ದಾಟಿರುವ (ಟ್ರಾವೆಲ್) ನೆಟ್ಟರಿಗುವ ನೇರವಾದ ದೂರವು 15 ಸೆಂ.ಮೀ. ಇದ್ದಲ್ಲಿ, ರ್ಯಾಮ್‌ನ ಕ್ರ್ಯಾಾಂಕ್ ಅ್ಯಂಗಲ್ 1600 ಮತ್ತು 1800 ಯಲ್ಲಿ (ಕ್ರ್ಯಾಂಕ್‌ನ 200 ರೋಟೇಶನ್) ದಾಟಿರುವ ನೆಟ್ಟಗಿರುವ ನೇರವಾದ ದೂರವು ಅಂದಾಜು 1.5 ಸೆಂ.ಮೀ. ಇರುವುದು ಗ್ರಾಫ್ ಕ್ರ. 1 ರಲ್ಲಿ ಕಂಡುಬರುತ್ತದೆ.
 

3_1  H x W: 0 x 
 
ಒಂದು ವೇಳೆ ಪ್ರೆಸ್ 750t-cm ನಷ್ಟು ಎನರ್ಜಿಗೋಸ್ಕರ (ಶಕ್ತಿ) ಡಿಸೈನ್ ಮಾಡಲಾಗಿದ್ದಲ್ಲಿ ಮುಂದಿನ ಸೂತ್ರವು ಅನ್ವಯಿಸುತ್ತದೆ.
 

4_1  H x W: 0 x 
15 ಸೆಂ.ಮೀ. ದೂರವನ್ನು ನಿರ್ದಿಷ್ಟ ವೇಳೆಯಲ್ಲಿ ಕ್ರಮಿಸುವಾಗ ಉಂಟಾಗಿರುವ ಟನೇಜ್
"T1' = 750/ 15 = 50 T
1.5 ಸೆಂ.ಮೀ. ದೂರವನ್ನು ಅಷ್ಟೇ ವೇಳೆಯಲ್ಲಿ ಕ್ರಮಿಸುವಾಗ ಉಂಟಾಗಿರುವ ಟನೇಜ್
"T2' = 750/ 1.5 = 500 T
 
ಚಟುವಟಿಕೆಗಳ ದಿಕ್ಕಿನಲ್ಲಿ ಕೆಳಗಿನಿಂದ ಮೇಲಿನ ತನಕ ಇಂತಹ ಬದಲಾವಣೆ ಆಗುತ್ತದೆಯೋ, ಆಗ ಕೆಲವಾರು ಕ್ಷಣಗಳಲ್ಲಿ ಮುಂದೂರಿದ ದೂರವು ‘ಶೂನ್ಯ’ವಾಗಿರುತ್ತದೆ. ಈ ಸ್ಥಿತಿಯಲ್ಲಿ ತಯಾರಾಗಿರುವ ಬಲವು ತುಂಬಾ ಹೆಚ್ಚಾಾಗಿರುತ್ತದೆ. ಅದಕ್ಕೋಸ್ಕರವೇ ಕಾರ್ಯವಸ್ತುವಿನ ಪ್ರೆಸಿಂಗ್ ಆಗುತ್ತಿರುವಾಗ ಪ್ರೆಸ್ ಬಿ.ಡಿ.ಸಿ. ಸ್ಥಾಾನದಲ್ಲಿ ಯಾವತ್ತೂ ನಿಲ್ಲುವುದಿಲ್ಲ. ಅದು ಸಾಮಾನ್ಯವಾಗಿ ಬಿ.ಡಿ.ಸಿ. ಸ್ಥಾಾನದ ಅಕ್ಕಪಕ್ಕದಲ್ಲಿ 15 ಮಿ.ಮೀ. ದೂರದಲ್ಲಿ ನಿಲ್ಲಿಸುತ್ತಾಾರೆ. ಪ್ರೆಸ್‌ನ ಕಂಟ್ರೋಲ್ ಸರ್ಕಿಟ್‌ನಿಂದ ಇದನ್ನು ನಿರ್ಧರಿಸಲಾಗುತ್ತದೆ. ಪ್ರೆಸ್ ಯಾವುದೇ ಕಾರಣದಿಂದ ನಿಲ್ಲುತ್ತಿದ್ದಲ್ಲಿ ಅದು ಮತ್ತು ಪ್ರಾಾರಂಭವಾಗಲು ತುಂಬಾ ಬಲವೂ ಬೇಕಾಗುತ್ತದೆ. ಮೋಟರ್ ಮತ್ತು ಕ್ಲಚ್ ಇಷ್ಟು ಸಾಮರ್ಥ್ಯದ ಬಲಕ್ಕೋಸ್ಕರ ಯೋಗ್ಯವಾಗಿ ಇಲ್ಲದ್ದರಿಂದ ಪ್ರೆಸ್ ಸ್ಟಾಾರ್ಟ್ ಆಗುವುದಿಲ್ಲ. ಇದಕ್ಕೆ ಪ್ರೆಸ್ ಜಾಮ್ ಆಗಿದೆ ಎಂದು ಹೇಳಲಾಗುತ್ತದೆ.
 
ಮೇಲಿನ ಪ್ರಶ್ನೋತ್ತರಗಳಲ್ಲಿ ಎಂಟನೇ ಪ್ರಶ್ನೆಯು ತುಂಬಾ ಮಹತ್ವದ್ದಾಾಗಿದೆ. ಈ ಕಂಪನಿಯಲ್ಲಿ ಕ್ಲಚ್ ನ್ಯುಮ್ಯಾಟಿಕ್ ಒತ್ತಡದ ಮೂಲಕ ಕೆಲಸ ಮಾಡುತ್ತಿತ್ತು. ಕಾಂಪ್ರೆಸರ್ ನಿಂತಾಗ ಒತ್ತಡವೂ ಕಡಿಮೆ ಆಗುತ್ತಿತ್ತು. ಈ ಪರಿಸ್ಥಿತಿಯಲ್ಲಿ ಪ್ರೆಸ್ ಕಾರ್ಯವಸ್ತುವಿಗೆ ಬಿ.ಡಿ.ಸಿ. ಸ್ಥಾನದಲ್ಲಿ ಪ್ರೆಸ್ ಮಾಡುತ್ತೇವೆ, ಅಗ ಕ್ಲಚ್‌ನ ಸಂಪೂರ್ಣ ಸಾಮರ್ಥ್ಯದಿಂದ ಪಾವರ್ ಹಸ್ತಾಂತರಿಸುವುದು ತುಂಬಾ ಅಗತ್ಯವಾಗಿದೆ. ಆದರೆ ಒತ್ತಡ ಕಡಿಮೆ ಇರುವ ಗಾಳಿಯಿಂದಾಗಿ ಅದು ಸಾಧ್ಯವಾಗುತ್ತಿರಲ್ಲಿಲ್ಲ. ಇದರಿಂದಾಗಿ ಕ್ಲಚ್ ಸ್ಲಿಪ್ ಆಗಿ ಪ್ರೆಸ್ ಬಿ.ಡಿ.ಸಿ. ಸ್ಥಾನದಲ್ಲಿ ಜಾಮ್ ಆಗುತ್ತಿತ್ತು.
 
ಗಾಳಿಯ ಒತ್ತಡವು 2.5 ಕಿ.ಗ್ರಾಂ./ಸೆಂ.ಮೀ.2 ಈ ವ್ಯಾಲ್ಯೂಗಿಂತ ಕಡಿಮೆಯಾದಾಗ ಪ್ರೆಶರ್ ಸ್ವಿಚ್‌ ಮೂಲಕ ಸಾಮಾನ್ಯವಾಗಿ ಬಿ.ಡಿ.ಸಿ. ಸ್ಥಾಾನದ ಅಕ್ಕಪಕ್ಕದಲ್ಲಿ ಪ್ರೆಸ್ ತಕ್ಷಣ ನಿಲ್ಲಿಸಲಾಗುತ್ತದೆ. ಆದರೆ ಈ ಉದಾಹರಣೆಯಲ್ಲಿ ಎಯರ್ ಪ್ರೆಶರ್ ಸ್ವಿಚ್ ಕೆಲಸವನ್ನೇ ನಿರ್ವಹಿಸುವುದಿಲ್ಲ. ಇದರಿಂದಾಗಿ ಪ್ರೆಸ್ ಜಾಮ್ ಆಗುತ್ತಿತ್ತು. ಪ್ರೆಶರ್ ಸ್ವಿಚ್ ಕಾರ್ಯಗತವಿರುವಾಗ ಯಾವ ಒತ್ತಡದಲ್ಲಿ ಸ್ವಿಚ್ ಸ್ಲಿಪ್ ಆಗುವ ಮುಂಚೆಯೇ ಪ್ರೆಸ್ ನಿಲ್ಲುತ್ತದೆ. ಸರ್ಕಿಟ್‌ನಲ್ಲಿರುವ ಕ್ಯಾಮ್ ಸ್ವಿಚ್ ಬಿ.ಡಿ.ಸಿ. ಭಾಗದಲ್ಲಿ ಪ್ರೆಸ್ ನಿಲ್ಲುವುದರ ಕುರಿತು ಮುತುವರ್ಜಿಯನ್ನು ವಹಿಸುತ್ತದೆ. ಇದರಿಂದಾಗಿ ಪ್ರೆಸ್ ಜಾಮ್ ಆಗುವುದು ತಡೆಯಲ್ಪಡುತ್ತದೆ.
 
ಸಲಹೆಗಾರರು ನಿರ್ವಹಣೆಯನ್ನು ಮಾಡುವ ಇಂಜಿನಿಯರ್‌ಗೆ ಹೊಸ ಪ್ರೆಶರ್ ಸ್ವಿಚ್ ಜೋಡಿಸುವ ಸಲಹೆಯನ್ನು ನೀಡಿದರು. ಹೊಸ ಪ್ರೆಶರ್ ಸ್ವಿಚ್ ಅಳವಡಿಸಿದ ನಂತರ ಪ್ರೆಸ್ ಜಾಮ್ ಆಗುವಂತಹ ಸಮಸ್ಯೆಯು ಶಾಶ್ವತವಾಗಿ ಇಲ್ಲದಂತಾಯಿತು.
 
 

anil gupta_1  H 
ಅನಿಲ ಅ. ಗುಪ್ತೆ
ತಾಂತ್ರಿಕ ಸಲಹೆಗಾರರು 
9767890284
 
ಅನಿಲ ಗುಪ್ತೆ ಇವರು ಇಲೆಕ್ಟ್ರಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಇವರಿಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ 53 ವರ್ಷಗಳಷ್ಟು ಸುದೀರ್ಘ ಕಾಲಾವಧಿಯ ಅನುಭವವಿದೆ. ಟಾಟಾ ಮೋಟರ್ಸ್ ಈ ಕಂಪನಿಯಲ್ಲಿ ಮೆಂಟೆನನ್ಸ್‌ ಮತ್ತು ಪ್ರೊಜೆಕ್ಟ್ಸ್‌‌ಗೆ ಸಂಬಂಧಪಟ್ಟ ಪ್ಲಾಂಟ್‌ನಲ್ಲಿ ಇಂಜಿನಿಯರಿಂಗ್‌ನ ಕೆಲಸದ ಅನುಭವವಿದ್ದು ಸದ್ಯಕ್ಕೆ ತಾಂತ್ರಿಕ ಸಲಹೆಗಾರರೆಂದು ಸೇವೆಯನ್ನು ಸಲ್ಲಿಸುತ್ತಿದ್ದಾರೆ.