ಮಿಲ್ಲಿಂಗ್‌ನ ವೇಗವಾದ ಪ್ರೊಗ್ರಾಮಿಂಗ್‌ಗೆ 2D CAM

Udyam Prkashan Kannad    31-Jan-2020
Total Views |
 
 
ಗ್ರಾಮಿಂಗ್‌ನ ವಿಧಗಳನ್ನು ಬಳಸಿ ಸಿ.ಎನ್.ಸಿ. ಟರ್ನಿಂಗ್ ಮತ್ತು ಫೇಸಿಂಗ್, ಬೋರಿಂಗ್, ಡ್ರಿಲ್ಲಿಂಗ್ ಮತ್ತು ಪಾರ್ಟಿಂಗ್ ಇಂತಹ ಪ್ರಕ್ರಿಯೆಗಳ ಕುರಿತು ಡಿಸೆಂಬರ್ 2019 ರ ಸಂಚಿಕೆಯಲ್ಲಿ ತಿಳಿದುಕೊಳ್ಳಲಾಯಿತು. ಈ ಸಂಚಿಕೆಯಲ್ಲಿ 2D ಮತ್ತು ಅದರ ವೈಶಿಷ್ಟ್ಯಗಳಿಗೆ ಸಂಬಂಧಪಟ್ಟ (ಫೀಚರ್ ಬೇಸ್ಡ್‌) ಮಿಲ್ಲಿಂಗ್ ತಂತ್ರದ ಅಂಶಗಳ ಕುರಿತು ವಿಚಾರ ಮಾಡಲಿದ್ದೇವೆ.
 

1_1  H x W: 0 x 
 
2D ಮಿಲ್ಲಿಂಗ್ ಪರಿಚಯ
 
2D ಮಿಲ್ಲಿಂಗ್ ಯಂತ್ರಣೆಯ ಪ್ರಕ್ರಿಯೆ ಅಂದರೆ ಒಂದು ಮೂಲಭೂತವಾದ ವಿಷಯವಾಗಿದೆ. ಹಿಂದಿನ ಅಂಕಣದಲ್ಲಿ ನಾವು ತಿಳಿದುಕೊಂಡಿರುವ ಹಲವಾರು ಕ್ಲಿಷ್ಟವಾದ ಲೇಥ್ ಆಪರೇಶನ್‌ಗಳು ಈಗ ಸುಲಭ ಎಂದು ಅನಿಸುವುದು ಸಹಜ. ಒಂದೇ ಪುಟದಲ್ಲಿ ಚಿತ್ರಗಳನ್ನು ಮಾಡುವುದು ಅಂದರೆ 2D ಮಿಲ್ಲಿಂಗ್ ಎಂದರೆ, ಇದಕ್ಕೋಸ್ಕರ ಯಾವುದೇ ಪುಸ್ತಕದಲ್ಲಿರುವ ಅನೇಕ ಪುಟಗಳ ಕುರಿತು ವಿಚಾರ ಮಾಡಿರಿ, ಇದರಿಂದಾಗಿ ನಿಧಾನವಾಗಿ 2.5D ಮಿಲ್ಲಿಂಗ್ ಅಂದರೆ ಏನು ಎಂಬುದು ತಿಳಿಯುವುದು ಸಾಧ್ಯ. ಕೊನೆಗೆ ಸ್ಲಾಟ್, ರಂಧ್ರಗಳು, ಪಾಕೇಟ್ ಮತ್ತು ಬಾಸ್ ಇಂತಹ ಪ್ಯಾರಾಮೆಟ್ರಿಕ್‌ನ ವೈಶಿಷ್ಟ್ಯಗಳ ಕುರಿತು ವಿಚಾರ ಮಾಡಿದಾಗ ಡೈಮೆನ್ಶನಲ್ ಡೇಟಾ ಬಳಸಿ ಯಂತ್ರಣೆಯನ್ನು ಮಾಡಲಾಗುವಂತಹ ವೈಶಿಷ್ಟ್ಯಗಳ ಸೆಟ್ ತಮ್ಮ ಕಣ್ಣೆದುರು ಬರುತ್ತದೆ.
 
> ಫೇಸ್ ಮಿಲ್ಲಿಂಗ್
ಫೇಸ್ ಮಿಲ್ಲಿಂಗ್ ಸಾಧಾರಣವಾಗಿ ಇದೊಂದು ಮೇಲ್ಭಾಗದಲ್ಲಿ ಯಂತ್ರಣೆಯನ್ನು ಮಾಡುವ ಪ್ರಕ್ರಿಯೆಯಾಗಿದೆ. ಒಂದು ಸಮತಟ್ಟಾಾದ ಫೇಸ್‌ನಿಂದ ಸೂಕ್ತವಾದ ಡೈಮೆನ್ಶನಲ್ ಸಂದರ್ಭವನ್ನು ಪಡೆಯಬೇಕು, ಎಂಬುದಕ್ಕೆ ಈ ಪ್ರಕ್ರಿಯೆಯನ್ನು ತುಂಬಾ ಸಲ ರಂಭದಲ್ಲಿಯೇ ಮಾಡಲಾಗುತ್ತದೆ.
 
> ಕಂಟೂರ್ ಮಿಲ್ಲಿಂಗ್
ಕಂಟೂರ್ ಮಿಲ್ಲಿಂಗ್‌ನಲ್ಲಿ XY ಪ್ಲೇನ್‌ಗೆ ಅವಲಂಬಿಸಿರುವ (2D ಮಿಲ್ಲಿಂಗ್‌ನಲ್ಲಿ) ಒಂದು ವಿಶಿಷ್ಟವಾದ ವಕ್ರರೇಖೆ ಅಥವಾ ಮಾರ್ಗವನ್ನು ಅನುಸರಿಸುವ ಟೂಲ್‌ಪಾಥ್ ಇರುತ್ತದೆ. ಟ್ರೆಸಿಂಗ್ ಮಾಡುವಾಗ ಪೆನ್ಸಿಲ್ ಹೇಗೆ ಸ್ಟೆನ್ಸಿಲ್ ಪ್ರೊಫೈಲ್‌ನ ಅನುಕರಣೆಯನ್ನು ಮಾಡುತ್ತದೆಯೇ, ಹಾಗೆಯೇ ಅಲ್ಲಿ ಟೂಲ್ ಆ ವಕ್ರರೇಖೆಯನ್ನು ಅನುಸರಿಸುತ್ತದೆ.
 

 
3_1  H x W: 0 x
 
> ಪಾಕೇಟ್ ಮಿಲ್ಲಿಂಗ್
ಈ ಪ್ರಕ್ರಿಯೆಯಲ್ಲಿ ಟೂಲ್ ಮೇಲೆ ತಿಳಿಸಿದಂತೆ ಎರಡೂ ಆಪರೇಶನ್ ಒಟ್ಟಾಗಿಯೇ ಮಾಡುತ್ತದೆ ಮತ್ತು Z ಅಕ್ಷದಲ್ಲಿ ಯೋಜಿಸಲಾಗಿರುವ ರೀತಿಯಲ್ಲಿ ಚಟುವಟಿಕೆಗಳನ್ನು ಮಾಡಿ ಪಾಕೇಟ್ (ಒಂದು ಬದಿಯು ಮುಚ್ಚಿರುವುದು ಅಥವಾ ಆರುಪಾರಾಗಿರುವುದು) ತಯಾರಿಸುತ್ತದೆ.
 
> ಡ್ರಿಲ್ಲಿಂಗ್
ಡ್ರಿಲ್ಲಿಂಗ್ ಟೂಲ್‌ನ ಉಪಯೋಗವನ್ನು ಮಾಡಿ ಸಮತಲದಲ್ಲಿ ನಿರ್ದಿಷ್ಟವಾಗಿ ನೀಡಿರುವ ಸಹನಿರ್ದೇಶಕ ಬಿಂದುವಿನಲ್ಲಿ ರಂಧ್ರಗಳನ್ನು ಮಾಡಲಾಗುತ್ತದೆ.
 
> ಪೀಲ್ ಮಿಲ್ಲಿಂಗ್
ಈ ರೀತಿಯಲ್ಲಿ ಟೂಲ್‌ನಲ್ಲಿರುವ ಫ್ಲ್ಯೂೂಟ್‌ನ ಬಳಕೆಯನ್ನು ಮಾಡಿ ಕಾರ್ಯವಸ್ತುವಿನ ಬದಿಯನ್ನು ತುಂಡು ಮಾಡಿ (ಸೈಡ್ ಕಟ್) ಮಿಲ್ಲಿಂಗ್ ಮಾಡಿಯೇ ಮಟೀರಿಯಲ್ ಹೊರಗೆ ತೆಗೆಯಲಾಗುತ್ತದೆ.
 
2_1  H x W: 0 x 
 
> ಡೈನ್ಯಾಮಿಕ್ ಮಿಲ್ಲಿಂಗ್
ಡೈನ್ಯಾಮಿಕ್ ಮಿಲ್ಲಿಂಗ್ 2D ಟೂಲ್ ಪಾಥ್‌ನಲ್ಲಿ ಅನ್ವಯಿಸಲ್ಪಟ್ಟಿರುವ ಹೈ ಸ್ಪೀಡ್ ತಂತ್ರಗಳ ಸಂಯೋಜನೆಯಾಗಿದೆ. ಮುಂದಿನ ಸಂಚಿಕೆಯಲ್ಲಿ 3D ಮತ್ತು ಹೈ-ಸ್ಪೀಡ್ ಟೂಲ್‌ ಪಾಥ್ ಕುರಿತು ವಿವರಗಳನ್ನು ತಿಳಿದುಕೊಳ್ಳುವಾಗ ಇದರ ಕುರಿತು ವಿವರವಾಗಿ ಚರ್ಚಿಸೋಣ.
 
> ವೈಶಿಷ್ಟ್ಯಗಳಿಂದ ಕೂಡಿರುವ ಮಿಲ್ಲಿಂಗ್ 
ವೃತ್ತಗಳು, ಪಾಕೇಟ್, ಸ್ಲಾಟ್, ಬಾಸ್ ಇಂತಹ ಪ್ಯಾರಾಮೆಟ್ರಿಕ್ ಘಟಕಗಳ ಯಂತ್ರಣೆಯನ್ನು ಮಾಡುವುದು. ಯಂತ್ರ ಭಾಗಗಳಿಗೆ 2D ಯಂತ್ರಣೆಗೋಸ್ಕರ ಆವಶ್ಯಕವಿರುವ NC ಕೋಡ್‌ಗಳನ್ನು ಯಶಸ್ವಿಯಾಗಿ ತಯಾರಿಸಲು ತಂತ್ರಜ್ಞರಿಗೆ ಮುಂದಿನಂತೆ ಕೆಲಸಗಳನ್ನು ಮಾಡಬೇಕಾಗಬಹುದು.
 
ಯಂತ್ರಭಾಗಗಳಿಗೋಸ್ಕರ ಒಂದು ಫೈಲ್ ತಯಾರಿಸುವುದು, ಡಿಫಾಲ್ಟ್‌ ಮಶಿನ್‌ನ ವ್ಯಾಖ್ಯೆಯನ್ನು ರೂಪಿಸುವುದು ಮತ್ತು ಸ್ಟಾಕ್ ನಿಖರವಾಗಿ ಎಷ್ಟಿದೆ ಎಂಬುದನ್ನು ಸ್ಪಷ್ಟಪಡಿಸುವುದು.
 
ಕಾರ್ಯವಸ್ತುವಿನ ಹೊರ ಸರ್ಫೇಸ್‌ನ ರಫಿಂಗ್ ಅಥವಾ ಫಿನಿಶಿಂಗ್ ಮಾಡಲು ಅದರ ಪರಿಮಿತಿಯನ್ನು ನಿರ್ಧರಿಸುವುದು. ಟೂಲಿಂಗ್‌ನ ಆಯ್ಕೆ ಮತ್ತು ಯಂತ್ರಣೆಯ ಪ್ಯಾರಾಮೀಟರ್‌ಗಳನ್ನು ಅಳವಡಿಸುವುದು.
 
2D ಪ್ರೊಫೈಲ್‌ನ ಆಧಾರವನ್ನು ಪಡೆದು ಕಾರ್ಯವಸ್ತುವಿನ ಒಳ ಸರ್ಫೇಸ್‌ನ ರಫಿಂಗ್ ಅಥವಾ ಫಿನಿಶಿಂಗ್ ಮಾಡಲು ಅದರ ಪರಿಮಿತಿಯನ್ನು ನಿರ್ಧರಿಸುವುದು.ಟೂಲಿಂಗ್‌ನ ಆಯ್ಕೆ ಮತ್ತು ಯಂತ್ರಣೆಯ ಪ್ಯಾರಾಮೀಟರ್‌ಗಳನ್ನು ಅಳವಡಿಸುವುದು.
 
ಗ್ರಾಫಿಕ್ ವಿಂಡೋದಲ್ಲಿ ಎಲ್ಲ ರೀತಿಯ ಟೂಲ್‌ಪಾಥ್‌ಗಳನ್ನು ಪರಿಶೀಲಿಸುವುದು.
 
ಎಲ್ಲ ಟೂಲ್‌ಪಾಥ್‌ಗಳನ್ನು ಬ್ಯಾಾಕ್‌ಪ್ಲಾಾಟ್ ಮಾಡುವುದು (ಕಾರ್ಯವಸ್ತುವಿನ ಯಂತ್ರಣೆಯನ್ನು ಮಾಡುವಾಗ ಟೂಲ್ ಯಾವ ಮಾರ್ಗವನ್ನು ಹಿಡಿಯುತ್ತದೆ ಎಂಬುದನ್ನು ನೋಡುವುದು).
 
ಸ್ಟಾಕ್ ಮಾಡೆಲ್ ಡಿಸ್ಪ್ಲೇಯಿಂದ ಯಂತ್ರಭಾಗಗಳ ಯಂತ್ರಣೆಯ ಸಿಮ್ಯುಲೇಶನ್ ಪರಿಶೀಲಿಸುವುದು.
 
ಎಲ್ಲ ಟೂಲ್‌ಪಾಥ್ ಆಪರೇಶನ್ NC ಫೈಲ್‌ನಲ್ಲಿ ಪೋಸ್ಟ್‌ ಮಾಡುವುದು. ಅಗತ್ಯಕ್ಕೆ ತಕ್ಕಂತೆ ಕೋಡ್ ಪುನರಾವಲೋಕಿಸಿ ಅಥವಾ ಪರಿಷ್ಕರಿಸಿ NC ಫೈಲ್ ಸೇವ್ ಮಾಡುವುದು.
 
ಕ್ಯಾಮ್ ಸಾಫ್ಟ್‌‌ ವೇರ್‌ನ ಸಹಾಯವನ್ನು ಪಡೆಯದೇ ಅನೇಕ ತಂತ್ರಜ್ಞರು ಮೇಲಿನ ಎಲ್ಲ ಪ್ರೊಗ್ರಾಮ್‌ಗಳನ್ನು ತಯಾರಿಸಬಲ್ಲರು. ಐ.ಎಸ್.ಓ. ಸ್ಟ್ಯಾಂಡರ್ಡ್‌ಗಳ ಅನುಕರಣೆಯನ್ನು ಮಾಡುವಂತಹ ವಿಶೇಷವಾದ G ಮತ್ತು M ಕೋಡ್‌ಗಳನ್ನು ಬಳಸಿ, ಸಿ.ಎನ್.ಸಿ. ನಿಯಂತ್ರಕಗಳಲ್ಲಿ ಚಟುವಟಿಕೆಯನ್ನು ಮತ್ತು ಮಶಿನ್‌ಗೆ ಸಂಬಂಧಿಸಿರುವ ಆಜ್ಞೆಗಳಿಗೆ ಭಾಷಾಂತರಿಸಲ್ಪಡುವಂತಹ ಕೋಡ್‌ಗಳನ್ನು ಬರೆಯಲಾಗುತ್ತದೆ ಮತ್ತು ಅವುಗಳ ಮೂಲಕ ನೀಡಿರುವ ಕಾರ್ಯವಸ್ತುಗಳ ಯಂತ್ರಣೆಯನ್ನು ಮಾಡಲಾಗುತ್ತದೆ. ಇದರಲ್ಲಿ ಯಾವುದೇ ವ್ಯಕ್ತಿ 2D ಮತ್ತು ಫೀಚರ್‌ಗೆ ಆಧರಿಸಿರುವ ಮಿಲ್ಲಿಂಗ್ ಈ ಕ್ಯಾಮ್ ಪ್ರೊಗ್ರಾಮಿಂಗ್ ತಂತ್ರದ ಒಂದು ಅಂಶವಾಗಿರುವ ಅಗತ್ಯವೇನಿದೆ, ಎಂಬ ಪ್ರಶ್ನೆಯು ಎದುರಾಗುವ ಸಾಧ್ಯತೆಯು ಇರುತ್ತದೆ. ಅದಕ್ಕೋಸ್ಕರ ಮುಂದಿನಂತೆ ವಿವರಣೆಯನ್ನು ನೀಡಬಹುದು.
 
ಎ. ಗಣಿತದಲ್ಲಿರುವ ಕ್ಲಿಷ್ಟವಾದ ಪ್ರಶ್ನೆಯನ್ನು ಬಿಡಿಸಲು ಕಾಗದ ಮತ್ತು ಪೆನ್ಸಿಲ್ ಬಳಸುವ ಬದಲಾಗಿ ಆಧುನಿಕವಾದ ಇಂಜಿನಿಯರಿಂಗ್ ಕ್ಯಾಲ್ಕ್ಯುಲೇಟರ್ ಬಳಸಿದಲ್ಲಿ ಯಾವ ವ್ಯತ್ಯಾಾಸವು ಕಂಡುಬರಬಹುದು ಎಂಬ ವಿಚಾರವನ್ನು ಮಾಡಿರಿ. ಖಂಡಿತವಾಗಿಯೂ ಇದರಿಂದ ಅತ್ಯಮೂಲ್ಯವಾದ ಸಮಯದ ಉಳಿತಾಯವಾಗುತ್ತದೆ.
ಬಿ. ಯಾವುದೇ ಯಂತ್ರಭಾಗದ ಮಾಡೆಲಿಂಗ್ ಮಾಡುವಾಗ ಮ್ಯಾನ್ಯುವಲ್ ಪ್ರೊಗ್ರಾಮಿಂಗ್‌ನ ರೀತಿಯ ಹೋಲಿಕೆಯಲ್ಲಿ ಅದರಲ್ಲಿ ಬಡಿತ ಮತ್ತು ಗೌಜ್‌ನ ಅಪಾಯವು ಕಡಿಮೆ ಪ್ರಮಾಣದಲ್ಲಿರುತ್ತದೆ.
ಸಿ. ಕ್ಯಾಮ್ ಬಳಸಿ ರೂಪಾಂತರಿಸುವುದು (ಮೂವ್, ಪ್ಯಾಟರ್ನ್, ಸ್ಕೇಲ್ ಇತ್ಯಾಾದಿ) ತುಂಬಾ ಸುಲಭವಾಗಿದೆ. ಆದರೆ ಮ್ಯಾನ್ಯುವಲ್ ಪ್ರೊಗ್ರಾಮಿಂಗ್ ತಂತ್ರವನ್ನು ಬಳಸಿದಲ್ಲಿ ತುಂಬಾ ಸಲ ಅದು ಕ್ಲಿಷ್ಟ ಮತ್ತು ಗೊಂದಲವನ್ನುಂಟು ಮಾಡುತ್ತದೆ.
ಡಿ. ಡಿರೆಕ್ಟರಿಯಿಂದ ಅಗತ್ಯವಿದ್ದಾಗ ಫೈಲ್ ಮತ್ತೆ ಪಡೆದು ಪ್ರಕೃತ ಟೂಲ್‌ಪಾಥ್‌ನಲ್ಲಿ ತಕ್ಷಣ ಬದಲಾವಣೆಗಳನ್ನು ಮಾಡುವುದು ಇನ್ನಷ್ಟು ಸುಲಭವಾಗಿದೆ.
 

4_1  H x W: 0 x 
 
ವೈಶಿಷ್ಟ್ಯಗಳಿಗೆ ಅವಲಂಬಿಸಿರುವ ಯಂತ್ರಣೆ
 
ವೈಶಿಷ್ಟ್ಯಗಳಿಗೆ ಅವಲಂಬಿಸಿರುವ ಯಂತ್ರಣೆಯನ್ನು (ಫೀಚರ್ ಬೆಸ್ಡ್‌ ಮಶಿನಿಂಗ್ FBM) ಮಾಡುವಾಗ ಘನರೂಪದ ಯಂತ್ರಭಾಗಗಳ ಮಿಲ್ಲಿಂಗ್ ಮತ್ತು ಡ್ರಿಲಿಂಗ್ ಪ್ರಕ್ರಿಯೆಯ ಪ್ರೊಗ್ರಾಮ್ ಮಾಡಲು ವೈಶಿಷ್ಟ್ಯಗಳನ್ನು ಗುರುತಿಸುವಂತಹ ಮ್ಯಾನ್ಯುವಲ್ ಪ್ರಕ್ರಿಯೆಯನ್ನು ತೆಗೆಯಲಾಗುತ್ತದೆ. ಯಾವುದೇ ರೀತಿಯ ವೈಶಿಷ್ಟ್ಯಗಳಿಗೋಸ್ಕರ (ಗಾತ್ರ, ನೈಜತೆ, ರಂಧ್ರಗಳ ಸ್ಥಾನ ಇತ್ಯಾಾದಿ) ಯಂತ್ರಭಾಗಗಳ ವಿಮರ್ಶೆಯನ್ನು ಮಾಡಿ FBM ಆಯ್ಕೆ ಮಾಡಿರುವ ವೈಶಿಷ್ಟ್ಯಗಳ ಯಂತ್ರಣೆಯನ್ನು ಮಾಡಲು ಅಗತ್ಯವಿರುವ ವಿಶೇಷವಾದ ಟೂಲ್‌ಪಾಥ್ ಸ್ವಯಂಚಾಲಿತವಾಗಿ ತಯಾರಿಸಿ ಯಂತ್ರಣೆಯ ಪರಿಣಾಮಕಾರಿಯಾದ ಯೋಜನೆಯನ್ನು ತಯಾರಿಸಬಹುದು.
 
ಉತ್ತಮ ಫಲಿತಾಂಶವನ್ನು ನೀಡಲು FBM ನಾಲೇಜ್ ಬೆಸ್ಡ್‌ ಯಂತ್ರಣೆ (KBM) ಎಂದು ಗುರುತಿಸಲಾಗುವಂತಹ ಒಂದು ಸಾಮಾನ್ಯವಾದ, ಆದರೂ ಬಲಶಾಲಿಯಾದ ತಂತ್ರಜ್ಞಾನದ ಉಪಯೋಗವಾಗುತ್ತದೆ. ಉದ್ಯಮಗಳಲ್ಲಿರುವ ಅನುಭವವನ್ನು ಹೊಂದಿರುವಂತಹ ಉದ್ಯಮಿಗಳ ಅನೇಕ ದಶಮಾನಗಳ ಅನುಭವ ಮತ್ತು ಗ್ರಾಹಕರ ಪ್ರತಿಕ್ರಿಯೆಗಳನ್ನು ಒಟ್ಟುಗೂಡಿಸಿ KBM ನಲ್ಲಿ ವಿಶಿಷ್ಟವಾದ ಯಂತ್ರಣೆಯ ಪ್ರಕ್ರಿಯೆಗಳ ಪ್ಯಾರಾಮೀಟರ್ ನಿರ್ಧರಿಸಲಾಗಿದೆ. ಥ್ರೆಡಿಂಗ್, ಗ್ರೂವಿಂಗ್, ಸ್ಲಾಟಿಂಗ್, ಪಾಕೇಟ್ ಮಿಲ್ಲಿಂಗ್ ಇಂತಹ FBM ಬಳಸಿ ತಯಾರಿಸಿರುವ FBM ಟೂಲ್‌ ಪಾಥ್‌ಗಳ ಹಲವಾರು ಉದಾಹರಣೆಗಳಿವೆ. ಇದರಿಂದಾಗಿ ಬಳಕೆದಾರರಿಗೆ ತನ್ನ ಪ್ರಕ್ರಿಯೆಯ ಜ್ಞಾನದ ಕುರಿತು ವಿಚಾರ ಮಾಡುವಂತಹ ಅಗತ್ಯವೇ ಇರುವುದಿಲ್ಲ. ಸಾಫ್ಟ್‌ ‌ವೇರ್ ಯಂತ್ರಣೆಯು ಪ್ರಕ್ರಿಯೆಯ ವಿಧಗಳ ಕುರಿತು ವಿಚಾರ ಮಾಡುತ್ತದೆ, ತುಂಬಾ ವೇಗವಾದ ಮತ್ತು ಸಮರ್ಥವಾದ ರೀತಿಯಲ್ಲಿ ರಫಿಂಗ್‌ನಿಂದ ಫಿನಿಶಿಂಗ್ ತನಕದ ಪ್ರಕ್ರಿಯೆಗಳನ್ನು ಪೂರ್ತಿ ಮಾಡುತ್ತದೆ. ಬಳಕೆದಾರರಿಗೆ ಕೇವಲ ಮಾಡೆಲ್, ಮಟೀರಿಯಲ್, ಮಿತಿ ಮತ್ತು ಮಶಿನ್‌ಗಳ ಕುರಿತು ಸ್ಪಷ್ಟೀಕರಿಸುವ ಆವಶ್ಯಕತೆ ಇರುತ್ತದೆ.
 
ಯಂತ್ರಭಾಗಗಳ ವೈಶಿಷ್ಟ್ಯಗಳು ಮತ್ತು ಸ್ಟಾಕ್‌ನ ವ್ಯಾಪ್ತಿ ಇವುಗಳಿಂದ ಲಭಿಸುವ ಮಾಹಿತಿಯನ್ನು ಬಳಸಿ FBM ಮುಂದಿನ ಕೆಲಸಗಳನ್ನು ಮಾಡುತ್ತದೆ.
 
ಬಳಕೆದಾರರು ಸ್ಪಷ್ಟೀಕರಿಸಿದ ಅಂಶಗಳಲ್ಲಿ ಆಯ್ಕೆ ಮಾಡಿರುವ FBM ಟೂಲ್‌ಪಾಥ್‌ನ ವಿಧಗಳಿಗೋಸ್ಕರ ಸೂಕ್ತವಾದ ವೈಶಿಷ್ಟ್ಯಗಳನ್ನು ಹುಡುಕುವುದು, ಅದರ ನಂತರ ಬಳಕೆದಾರರು ಗುರುತಿಸಿರುವ ಎಲ್ಲ ಯಂತ್ರಣೆಯ ವೈಶಿಷ್ಟ್ಯಗಳ ವಿಮರ್ಶೆಯನ್ನು ಮಾಡಬಲ್ಲರು ಮತ್ತು ಟೂಲ್‌ಪಾಥ್ ತಯಾರಿಸುವ ಮುನ್ನ ಆಯ್ಕೆ ಮಾಡಿರುವ ಪಟ್ಟಿಯಿಂದ ವೈಶಿಷ್ಟ್ಯಗಳನ್ನು ಸುಧಾರಿಸಬಲ್ಲರು ಅಥವಾ ಹೊರಗೆ ತೆಗೆಯಬಲ್ಲರು.
ಇಷ್ಟವಾಗಿರುವ ಟೂಲ್‌ಗಳ ಪಟ್ಟಿಯಿಂದ ಅಥವಾ ನಿಗದಿಸಿರುವ ಲೈಬ್ರೆರಿಯಿಂದ ಯೋಗ್ಯವಾದ ಟೂಲ್‌ಗಳ ಆಯ್ಕೆ ಮಾಡುವುದು.
ಟೂಲ್‌ಗಳನ್ನು ನಡೆಸಲು ಅಥವಾ ತಡೆಯಲು ಆವಶ್ಯಕವಿರುವ ಮಿತಿಗಳನ್ನು ತಯಾರಿಸುವುದು ಮತ್ತು ನೇಮಿಸುವುದು.
ವೈಶಿಷ್ಟ್ಯಗಳ ಯಂತ್ರಣೆಯನ್ನು ಮಾಡಲು ಇರುವ ಎಲ್ಲ ಟೂಲ್‌ಪಾಥ್‌ಗಳನ್ನು ಸ್ವಯಂಚಾಲಿತವಾಗಿ ತಯಾರಿಸುವುದು.
 
FBM ಮಿಲ್ ಸಾಫ್ಟ್‌‌ವೇರ್
 
FBM ಮಿಲ್ ಒಂದು ಗಟ್ಟಿಯಾದ ಭಾಗದ ವಿಮರ್ಶೆಯನ್ನು ಮಾಡುತ್ತದೆ. ನಿಗದಿತ ಸಮತಲದಲ್ಲಿ ಯಂತ್ರಣೆಯ ಎಲ್ಲ ವೈಶಿಷ್ಟ್ಯಗಳನ್ನು ಹುಡುಕುತ್ತದೆ ಮತ್ತು ಆಯ್ಕೆ ಮಾಡಿರುವ ವೈಶಿಷ್ಟ್ಯಗಳ ಯಂತ್ರಣೆಗೋಸ್ಕರ ಆವಶ್ಯಕವಿರುವ ಎಲ್ಲ 2D ಮಿಲಿಂಗ್ ಟೂಲ್‌ಪಾಥ್ ಸ್ವಯಂಚಾಲಿತವಾಗಿ ತಯಾರಿಸುತ್ತದೆ. ಮುಚ್ಚಿರುವ, ತೆರೆದಿರುವ, ಅಡಗಿರುವ (Nested) ಮತ್ತು ಆರುಪಾರಾಗಿರುವಂತಹ ಎಲ್ಲ ಪಾಕೇಟ್‌ಗಳ ಯಂತ್ರಣೆಯನ್ನು FBM ಮಿಲ್ ಮಾಡುತ್ತದೆ. ಅಡಗಿರುವ ಪಾಕೇಟ್‌ಗಳಿಗೋಸ್ಕರ ಮಾಸ್ಟರ್‌ ಕ್ಯಾಮ್ ಪ್ರತಿಯೊಂದು ವಿಭಾಗಕ್ಕೋಸ್ಕರ ಒಂದು ಸ್ವತಂತ್ರವಾದ ವಲಯವನ್ನು ಸ್ಪಷ್ಟೀಕರಿಸುತ್ತದೆ ಮತ್ತು ಅದರ ಯಂತ್ರಣೆಗೋಸ್ಕರ ಬೇಕಾಗಿರುವ ಮಿತಿಯನ್ನೂ ತಯಾರಿಸುತ್ತದೆ. FBM ಮಿಲ್‌ನಲ್ಲಿ ಈ ಕೆಳಗಿನ ವಿಧಗಳು 2D ಟೂಲ್‌ಪಾಥ್‌ನಲ್ಲಿ ಕಾರ್ಯಗತವಾಗಿವೆ.
ಸ್ಟಾಕ್ ಕಾರ್ಯವಸ್ತುವಿನ ಮೇಲ್ಭಾಗದ Z ಅಕ್ಷದಲ್ಲಿ ಇದ್ದಲ್ಲಿ ಫೇಸಿಂಗ್ ಟೂಲ್‌ ಪಾಥ್.
ಪ್ರತಿಯೊಂದು ವಲಯಕ್ಕೋಸ್ಕರ (ರೆನ್) ರಫಿಂಗ್ ಮತ್ತು ರೆಸ್ಟ್‌ ‌ಮಿಲ್ ಟೂಲ್‌ಪಾಥ್.
ಪ್ರತಿಯೊಂದು ವಲಯದಲ್ಲಿ (ರೆನ್) ವಾಲ್ ಮತ್ತು ಫ್ಲೋರ್‌ಗೋಸ್ಕರ ಸ್ವತಂತ್ರವಾದ ಫಿನಿಶ್ ಟೂಲ್‌ ಪಾಥ್.
ಸ್ಟಾಕ್ X ಮತ್ತು Y ಅಕ್ಷಗಳಲ್ಲಿ ಕಾರ್ಯವಸ್ತುವನ್ನು ದಾಟಿದಾಗ ಹೊರಗಿನ ಕಂಟೂರ್‌ನ ಟೂಲ್‌ ಪಾಥ್.
 
FBM ಡ್ರಿಲ್ ಸಾಫ್ಟ್‌‌ವೇರ್
 
FBM ಡ್ರಿಲ್ ಈ ಕೆಳಗಿನ ಮೂಲಭೂತವಾದ ಕೆಲಸಗಳನ್ನು ನಿರ್ವಹಿಸುತ್ತದೆ.
ನಿರ್ದಿಷ್ಟ ಕ್ರೈಟೇರಿಯಾಗೆ ಅವಲಂಬಿಸಿರುವ ಗಟ್ಟಿಯಾದ ವಸ್ತುಗಳಲ್ಲಿ ರಂಧ್ರಗಳನ್ನು ಹುಡುಕುವುದು.
ಕಂಡುಬಂದಿರುವ ವೈಶಿಷ್ಟ್ಯಗಳ ಪಟ್ಟಿಯ ಕುರಿತು ವಿಮರ್ಶೆಯನ್ನು ಮಾಡುವುದು ಮತ್ತು ವೈಶಿಷ್ಟ್ಯಗಳನ್ನು ತಿದ್ದುಪಡಿ ಮಾಡುವುದು ಅಥವಾ ತೆಗೆದು ಹಾಕುವುದು.
ಟೂಲ್‌ಪಾಥ್ ಆಪರೇಶನ್‌ನ ವಿಮರ್ಶೆಯನ್ನು ಮಾಡುವುದು ಮತ್ತು ಅದು ತಯಾರಾಗುವ ಮುಂಚೆಯೇ ಅದರಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡುವುದು.
ಆಯ್ಕೆ ಮಾಡಿರುವ ವೈಶಿಷ್ಟ್ಯಗಳಿಗೆ ಡ್ರಿಲ್ ಆಪರೇಶನ್‌ನ ಸಂಪೂರ್ಣವಾದ ಸರಣಿಯನ್ನು ಸ್ವಯಂಚಾಲಿತವಾಗಿ ತಯಾರಿಸುವುದು.
 
ಉತ್ಪಾದನೆಯ ಕ್ಷೇತ್ರದಲ್ಲಿ ಸುಮಾರು 70% ಮಿಲ್ಲಿಂಗ್‌ನ ಕೆಲಸ, 2D ಮಿಲ್ಲಿಂಗ್ ಮತ್ತು FBM ಇವುಗಳಿಂದಲೇ ಮಾಡಲಾಗುತ್ತದೆ. ಆದ್ದರಿಂದ ಯಂತ್ರಣೆಯ ಕೆಲಸದಲ್ಲಿ ಬೃಹತ್ ಪ್ರಮಾಣದಲ್ಲಿ ಸಹಕರಿಸುವಂತಹ ಈ ವಿಭಾಗವನ್ನು ನಿರ್ಲಕ್ಷಿಸುವುದು ಯೋಗ್ಯವಲ್ಲ. 2D ಯಂತ್ರಣೆಯನ್ನು ಸಮರ್ಥವಾಗಿ ಮಾಡಿದಲ್ಲಿ ಖರ್ಚು ಕಡಿಮೆ ಆಗುತ್ತದೆ. ಮತ್ತೆ ಯಂತ್ರಣೆಯನ್ನು ಮಾಡುವುದನ್ನೂ ತಡೆಯಬಹುದು ಮತ್ತು ಕ್ಲಿಷ್ಟವಾದ ಭಾಗಗಳ ಅಸೆಂಬ್ಲಿಗೆ ಸೂಕ್ತವಾದ ಸಮಯದಲ್ಲಿ ನಿರ್ದೋಷವಾದ ಯಂತ್ರಭಾಗಗಳು ಲಭಿಸಿದ್ದರಿಂದ ಆ ಕೆಲಸವು ಎಂದಿಗೂ ನಿಲ್ಲಲಾರದು.
 
ಸಾಫ್‌ಟ್‌‌ವೇರ್‌ನಿಂದಾಗಿ ಖಂಡಿತವಾಗಿಯೂ ಸಮಯದ ಉಳಿತಾಯವಾಗುತ್ತದೆ. ಅದೇ ಕೆಲಸವನ್ನು ಎರಡೆರಡು ಬಾರಿ ಅಥವಾ ಮತ್ತೆ ಮತ್ತೆ ಮಾಡಬೇಕಾಗುವುದಿಲ್ಲ. ಆದರೂ ಯಂತ್ರಣೆಯ ಮೂಲಭೂತವಾದ ಅಂಶಗಳ ಕುರಿತು ಸಂಪೂರ್ಣವಾದ ಮಾಹಿತಿಯೇ ಸಮರ್ಥವಾದ ಕ್ಯಾಮ್ ಪ್ರೊಗ್ರಾಮಿಂಗ್‌ ನ ಪ್ರಮುಖ ಅಂಶವಾಗಿದೆ. ಮುಂದಿನ ಲೇಖನದಲ್ಲಿ ನಾವು 3D ಮಿಲ್ಲಿಂಗ್ ಮತ್ತು ಹೈ-ಸ್ಪೀಡ್ ಕೆಲಸಗಳ ಕುರಿತು ತಿಳಿದುಕೊಳ್ಳಲಿದ್ದೇವೆ.
 
 

vinit sseth_1   
ವಿನೀತ್ ಸೇಠ್
ವ್ಯವಸ್ಥಾಪಕ ನಿರ್ದೇಶಕರು, (ದಕ್ಷಿಣ ಎಶಿಯಾ ಮತ್ತು ಮಧ್ಯ ಪೂರ್ವ)
ಮಾಸ್ಟರ್‌ ಕ್ಯಾಮ್ ಎಪಿಎಸಿ
7378552000
 
ವಿನೀತ್ ಸೇಠ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರು ಬಿಝಿನೆಸ್ ಎಡ್‌ಮಿನಿಸ್ಟ್ರೇಶನ್‌ನ ಸ್ನಾಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ‘ಮಾಸ್ಟರ್‌ ಕ್ಯಾಮ್ ಇಂಡಿಯಾ ಪ್ರೈ.ಲಿ.’ ಈ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಉತ್ಪಾದನೆಗೆ ಸಂಬಂಧಪಟ್ಟ ಸಾಪ್ಟ್‌‌ ವೇರ್ ಕ್ಷೇತ್ರದಲ್ಲಿ 21                                                  ವರ್ಷಗಳ ಅನುಭವವನ್ನು ಅವರು ಹೊಂದಿದ್ದಾರೆ.