ಡೀಪ್ ಹೋಲ್ ಡ್ರಿಲಿಂಗ್‌ನ ಅಗ್ರಗಣ್ಯ ಹೆಸರು ‘ಪ್ರೆಸಿಹೋಲ್’

Udyam Prkashan Kannad    31-Jan-2020
Total Views |

1_1  H x W: 0 x
ಫಾರ್ಮೆಂಟ್ ಕಂಪನಿಯಲ್ಲಿರುವ 1975 ರ ಆ ಕಾಲವು ನನಗೆ ಇನ್ನೂ ನೆನಪಾಗುತ್ತಿದೆ. ನಾನು ಆದೇ ವರ್ಷ ಈ ಕಂಪನಿಯಲ್ಲಿ ಸೇರ್ಪಡೆಯಾಗಿದ್ದೆ. ನಮಗೆ CVRDE ಇದರ ಟ್ರ್ಯಾಕ್ ಶೂ ಡ್ರಿಲಿಂಗ್‌ನ ದೊಡ್ಡ ಆರ್ಡರ್ ಸಿಕ್ಕಿತ್ತು. ಈ ಕೆಲಸಕ್ಕಾಗಿ ಡೀಪ್ ಹೋಲ್ ಡ್ರಿಲಿಂಗ್‌ನ ಅವಶ್ಯಕತೆಯು ಇತ್ತು. ಭಾರತದಲ್ಲಿ ಈ ಯಂತ್ರವನ್ನು ನಿರ್ಮಿಸುವವರು, ಹಾಗೆಯೇ ಅದರ ಸಾಮಗ್ರಿಗಳನ್ನು ತಯಾರು ಮಾಡುವವರು ಯಾರೂ ಇರಲಿಲ್ಲ. ಇದರಿಂದಾಗಿ ಇಂತಹ ವಿಧದ ಮಶಿನ್‌ಗಳನ್ನು ಆಮದು ಮಾಡುವುದೊಂದೇ ಪರ್ಯಾಯವಿತ್ತು.
 
‘ಪ್ರೆಸಿಹೋಲ್’ ಕಂಪನಿಯ ಸ್ಥಾಪನೆ
 
ಮಶಿನ್ ಆಮದು ಮಾಡುವುದು ಅಷ್ಟೊಂದು ಸುಲಭದ ವಿಷಯವಾಗಿರಲಿಲ್ಲ. ಎಲ್ಲರೂ ಸಾಂಪ್ರದಾಯಿಕವಾದ ಡ್ರಿಲಿಂಗ್‌ಗಳನ್ನೇ ಉಪಯೋಗಿಸುತ್ತಿದ್ದರು. ಆದರೆ ಸಾಂಪ್ರದಾಯಿಕ ಡ್ರಿಲಿಂಗ್‌ಗಳಿಗೆ ತುಂಬಾ ಸಮಯವು ಬೇಕಾಗುತ್ತಿತ್ತು. ಹಾಗೆಯೇ ನಿರ್ದೋಷತೆಯು ಇರುತ್ತಿರಲಿಲ್ಲ. ಹೀಗಾಗಿ ನಾವು ಇಂತಹ ಮಶಿನ್‌ಗಳನ್ನು ನಿರ್ಮಿಸುವ ಕುರಿತು ವಿಚಾರವನ್ನು ಮಾಡಿದೆವು. ಸಾಮಗ್ರಿಗಳ ಕುರಿತು ನಾವು ಸ್ಯಾಾಂಡ್‌ವಿಕ್ ಏಶಿಯಾ ಈ ಕಂಪನಿಯೊಂದಿಗೆ ಸಹಾಯವನ್ನು ಕೇಳಿದೆವು. ಅವರೊಂದಿಗೆ ಕೆಲಸವನ್ನು ಪ್ರಾರಂಭಿಸಲು ನಾವು ಟ್ಯೂಬ್‌ನ ನಿರ್ಮಿತಿಯನ್ನು ಮಾಡಿದೆವು. ಆದರೆ ನಂತರ ಅವರು ಅವಶ್ಯವಾದ ಗನ್ ಡ್ರಿಲ್ ತಯಾರು ಮಾಡಿ ಕೊಟ್ಟರು ಮತ್ತು ನಾವು ಭಾರತದ ಮೊತ್ತಮೊದಲ ಡೀಪ್ ಹೋಲ್ ಡ್ರಿಲಿಂಗ್ ಮಶಿನ್ ತಯಾರು ಮಾಡಿದೆವು.
 
ಅದರ ನಂತರ ನಮಗೆ NFC ಕಂಪನಿಯಿಂದಲೂ ಒಂದು ದೊಡ್ಡ ಆರ್ಡರ್ ಸಿಕ್ಕಿತು. ಅವರಲ್ಲಿ ‘ಯುಟಿಟಾ’ ಈ ಯಂತ್ರವಿತ್ತು. ಅವರಿಗೆ ಇನ್ನೂ ಕೆಲವಾರು ಯಂತ್ರಗಳನ್ನು ಸೇರಿಸಬೇಕಿತ್ತು. ನಮ್ಮ ಯಂತ್ರದ ಬೆಲೆಯು ‘ಯುಟಿಟಾ’ ಕಂಪನಿಯ ಮಶಿನ್‌ಗಳ ಮೂರು ಪಟ್ಟು ಕಡಿಮೆ ಇದ್ದೂ ಕೂಡಾ ಆರ್ಡರ್ ಸಿಗಲು ಎರಡು ವರ್ಷಗಳಷ್ಟು ಕಾಲ ಬೇಕಾಗಿತ್ತು. ಕಾರಣ ಮಾರುಕಟ್ಟೆಯಲ್ಲಿ ನಮ್ಮ ಪ್ರಸಿದ್ಧಿಯು ಹೇಳುವಷ್ಟೇನು ಇರಲಿಲ್ಲ. ‘ಯುಟಿಟಾ’ಯಂತ್ರದಲ್ಲಿ ಬಿಲೇಟ್‌ಗೆ 20 ಮಿ.ಮೀ.ಗಳ ರಂಧ್ರಗಳನ್ನು ಮಾಡಲು, ಬಿಲೇಟ್ ಚಕ್‌ನಲ್ಲಿ ಹಿಡಿದಿಟ್ಟು ಅದನ್ನು 800-1000 ್ಟಞ ನಲ್ಲಿ ತಿರುಗಿಸುತ್ತಿದ್ದರು. ನಾವು ಬಿಲೇಟ್ ಸ್ಥಿರವಾಗಿಟ್ಟು ಅದಕ್ಕೆ ಬೇಕಾಗುವಷ್ಟು ಡ್ರಿಲ್ ಮಾಡಬಹುದು, ಹಾಗೆಯೇ ನೀವು ಈಗ ಯಾವ ಡ್ರಿಲಿಂಗ್ ಪ್ಯಾಾರಾಮೀಟರ್ ಉಪಯೋಗಿಸುತ್ತಿದ್ದೀರಿ, ಅದಕ್ಕಿಂತ ಉನ್ನತ ಗುಣಮಟ್ಟದ ಪ್ಯಾಾರಾಮೀಟರ್ ಉಪಯೋಗಿಸಿ ನಾವು ಅದಕ್ಕಿಂತ ಒಳ್ಳೆಯ ಡ್ರಿಲಿಂಗ್ ಮಾಡಿಕೊಡುತ್ತೇವೆ. ನೀವು ನಮ್ಮ ಕಡೆ ಬಿಲೇಟ್ ಕಳಿಸಿ ತಪಾಸಣೆ ಮಾಡಿರಿ ಮತ್ತು ನಮ್ಮಿಂದಲೇ ಮಶಿನ್ ಖರೀದಿಸಿರಿ, ಎಂದು ನಾವು ಅವರಿಗೆ ಹೇಳಿದೆವು. ಎರಡು ವರ್ಷಗಳ ಕಠಿಣ ಪರಿಶ್ರಮದ ನಂತರ ನಮಗೆ ಆರ್ಡರ್ ಸಿಕ್ಕಿತು, ನಂತರ ನಾವು ಹಿಂದೆ ತಿರುಗಿ ನೋಡಲೇ ಇಲ್ಲ. ನಾವು ಈ ಮಶಿನ್‌ಗಳನ್ನು ತಯಾರಿಸಿದೆವು ಮತ್ತು ಎರಡು ಮಶಿನ್‌ಗಳನ್ನು ‘ಇಂಪ್ಟೆಕ್‌ಸ್‌’ನಲ್ಲಿ ಪ್ರಸ್ತುತ ಪಡಿಸಿದೆವು. ಅದಕ್ಕೋಸ್ಕರ ನಮಗೆ ‘ಫೈ ಫೌಂಡೇಶನ್’ ಪ್ರಶಸ್ತಿಯೂ ಲಭಿಸಿತು. ಅದರ ನಂತರ ನಮಗೆ ತುಂಬಾ ಆರ್ಡರ್ಸ್‌ಗಳು ಸಿಗಲಾರಂಭಿಸಿದವು. ಈ ರೀತಿಯಲ್ಲಿ ಭಾರತದಲ್ಲಿ ಡೀಪ್ ಹೋಲ್ ಡ್ರಿಲಿಂಗ್‌ನ ಪ್ರಾರಂಭವು 1987 ರಲ್ಲಿ ಆಯಿತು. ಆಗ ನಾನು, ಅನಿಲ ಕುಲಕರ್ಣಿ ಮತ್ತು ಅಯಾಜ್ ಕಾಝೀ ಮೂವರೂ ಸೇರಿ 450 ಚದರ ಅಡಿಯ ಜಾಗದಲ್ಲಿ ‘ಪ್ರೆಸಿಹೋಲ್ ಮಶಿನ್ ಟೂಲ್’ ಈ ಕಂಪನಿಯನ್ನು ಸ್ಥಾಾಪಿಸಿದೆವು. ಸ್ವಂತದ್ದೇ ಆದ ಎರಡು ಗನ್ ಡ್ರಿಲಿಂಗ್ ಮಶಿನ್‌ಗಳನ್ನು ತಯಾರು ಮಾಡಿ ಅದರಲ್ಲಿ ಜಾಬ್‌ವರ್ಕ್ ಮಾಡಿ ಕೊಡಲು ಪ್ರಾರಂಭಿಸಿದೆವು.
 

2_1  H x W: 0 x 
 
ಈ ಹಿಂದೆ ಭಾರತದಲ್ಲಿ ಮೊದಲು ಗನ್ ಡ್ರಿಲಿಂಗ್ ಮಶಿನ್ ನಾವು ಸ್ವತಃ ಡಿಜೈನ್ ಮಾಡಿ ತಯಾರಿಸಿದೆವು. ಪ್ರಾರಂಭದಲ್ಲಿ ನಾವು ಖ ತಯಾರು ಮಾಡಿದೆವು. ಅದರ ನಂತರ ವ್ಯವಸಾಯವನ್ನು ಹೆಚ್ಚಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಪಡೆಯಲು ಡೀಪ್ ಹೋಲ್ ಡ್ರಿಲಿಂಗ್, ಗನ್ ಡ್ರಿಲಿಂಗ್, ಆಅ ಡ್ರಿಲಿಂಗ್, ಸ್ಕೈವಿಂಗ್ ಅ್ಯಂಡ್ ಬರ್ನಿಶಿಂಗ್, ಹೋನಿಂಗ್, ಇಜೆಕ್ಟರ್ ಡ್ರಿಲಿಂಗ್ ಮಶಿನಿನ ಉತ್ಪಾಾದನೆಯನ್ನು ಪ್ರಾರಂಭಿಸಿದೆವು. ‘ಪ್ರೆಸಿಹೋಲ್ ಮಶಿನ್ ಟೂಲ್‌ಸ್‌’ ಇದು ಹೆಸರಿಗೆ ತಕ್ಕಂತೆ ಹೋಲ್ ಮೇಕಿಂಗ್ ಮಶಿನ್‌ಗಳನ್ನು ನಿರ್ಮಿಸುತ್ತದೆ. ನಾವು ತಯಾರು ಮಾಡುವಂತಹ ಮಶಿನ್‌ಗಳ ಕುರಿತು ವಿವರಗಳನ್ನು ತಿಳಿದುಕೊಳ್ಳೋಣ.
 

3_1  H x W: 0 x 
 
ಗನ್ ಡ್ರಿಲಿಂಗ್‌ನ ಪ್ರಕ್ರಿಯೆಯನ್ನು ತೋರಿಸುವ ಚಿತ್ರ ಕ್ರ. 1 ರಲ್ಲಿ ಯಾವ ಹಳದಿ ರೇಖೆಯು ಕಾಣುತ್ತದೆಯೋ, ಅದು 
ಕೂಲಂಟ್‌ನ ಒಳಗೆ ಹೋಗುವ ಲೈನ್ ಆಗಿರುತ್ತದೆ. ಕೆಂಪು ರೇಖೆಯು ಕೂಲಂಟ್ ಮತ್ತು ಚಿಪ್ ಹೊರಗೆ ಬರುತ್ತಿರುವುದನ್ನು ತೋರಿಸುವ ಲೈನ್ ಆಗಿರುತ್ತದೆ. ಚಿತ್ರ ಕ್ರ. 1 ರಲ್ಲಿ ಸಾಮಗ್ರಿಗಳಲ್ಲಿ ಯಾವ ಎರಡು ರಂಧ್ರಗಳು ಕಾಣುತ್ತವೆಯೋ, ಅದರಿಂದ ಕೂಲಂಟ್ ಹೊರಗೆ ಬರುತ್ತದೆ.
 
ಡ್ರಿಲಿಂಗ್ ಪಾಯಿಂಟ್‌ನಲ್ಲಿ ಒತ್ತಡದಿಂದ ಕೂಡಿದ (ಪ್ರೆಶರೈಜ್ಡ್‌) ಕೂಲಂಟ್‌ನ ಪೂರೈಕೆಯು ಆಗುತ್ತದೆ ಮತ್ತು ರಿಟರ್ನ್ ಪಾಥ್‌ ನಲ್ಲಿ ಚಿಪ್ ಮತ್ತು ಕೂಲಂಟ್ ಇದು ಚಿತ್ರ ಕ್ರ. 1 (ಅ) ರಲ್ಲಿ ತೋರಿಸಿದಂತೆ ಹೊರಗೆ ಬರುತ್ತದೆ. ಹೊರಗೆ ಬಂದ ನಂತರ ಬುಶಬಾಕ್ಸ್‌ ಎಂಬ ಹೆಸರಿನ ಒಂದು ಅಸೆಂಬ್ಲಿ ಇರುತ್ತದೆ. ಅದರಲ್ಲಿ ಚಿಪ್ ಮತ್ತು ಕೂಲಂಟ್ ಜಮೆ ಮಾಡಲಾಗುತ್ತದೆ.
 
BTA ನಲ್ಲಿ ಟೂಲ್ ಮುಂದೆ ಹೋಗುತ್ತಿರುವಾಗ ಕೂಲಂಟ್‌ನ ಪೂರೈಕೆಯು ಸಾಮಗ್ರಿಯ ಹೊರಗಿನಿಂದ ಆಗುತ್ತದೆ. ಕೂಲಂಟ್ ಮತ್ತು ಚಿಪ್, ಸಾಮಗ್ರಿಗಳನ್ನು ಇಟ್ಟಿರುವ ಕೊಳವೆಯಿಂದ ಹೊರಗೆ ಬರುತ್ತದೆ.
 

4_1  H x W: 0 x 
 
ಡೀಪ್ ಹೋಲ್ ಡ್ರಿಲಿಂಗ್ ಪ್ರಕ್ರಿಯೆಯಲ್ಲಿ ಯಾವ ಪ್ರಾಥಮಿಕವಾದ ಅಗತ್ಯವು ಇರುತ್ತದೆಯೆಂದರೆ, ಅದು ಡ್ರಿಲಿಂಗ್ ಆಗುವ ಮುಂಚೆ ಸಾಮಗ್ರಿಗಳಿಗೆ ಯೋಗ್ಯವಾದ ಮಾರ್ಗವನ್ನು ತೋರಿಸುವ ಗೈಡ್‌ಬುಶ್‌ನದ್ದೇ ಆಗಿರುತ್ತದೆ. ಅದು ಸಾಮಗ್ರಿಗೆ ಕಾರ್ಯವಸ್ತುವಿನಲ್ಲಿ ಬೇಕಾಗುವಂತಹ ಜಾಗದಲ್ಲಿ ತಪ್ಪಿಲ್ಲದೇ ತಲುಪಿಸುವ ಕೆಲಸವನ್ನು ಮಾಡುತ್ತದೆ. ಡ್ರಿಲ್ ಇದು ಬುಶ್‌ನಲ್ಲಿ ತಿರುಗುತ್ತಾ ಕಾಂಪೋನಂಟ್‌ನೊಳಗೆ ಹೋಗುತ್ತದೆ. ಆಗ ಅದರೊಂದಿಗೆ ಕೂಲಂಟ್‌ಕೂಡಾ ಒಳಗೆ ಹೋಗುತ್ತದೆ. ನಂತರ ಡ್ರಿಲ್ ಸಂಪೂರ್ಣವಾಗಿ ಕಾಂಪೋನಂಟ್‌ನಲ್ಲಿ ಬಂದ ನಂತರ ತಯಾರಾಗುವ ರಂಧ್ರಗಳೇ ಸಾಮಗ್ರಿಗಳ ಗೈಡ್‌ನಂತೆ ಕೆಲಸವನ್ನು ಮಾಡುತ್ತವೆ. ಇದರೊಳಗೆ ಒತ್ತಡದಿಂದ ಕೂಡಿದ ಕೂಲಂಟ್‌ನ ಪೂರೈಕೆಯು ನಿರಂತರವಾಗಿ ಆಗುತ್ತಿರುವುದರಿಂದ ಡ್ರಿಲಿಂಗ್‌ನಿಂದಾಗಿ ತಯಾರಾಗುವ ಚಿಪ್ ತಕ್ಷಣ ಹೊರಗೆ ಬರುತ್ತಿರುತ್ತದೆ. ಇದರಿಂದಾಗಿ ಚಿಪ್ ಸಿಕ್ಕಿಹಾಕಿಕೊಂಡು ಡ್ರಿಲ್ ತುಂಡಾಗುವ ಸಾಧ್ಯತೆಯೂ ಇರುವುದಿಲ್ಲ. ಹಾಗೆಯೇ ಡ್ರಿಲಿಂಗ್ ಆಗುವಾಗ ಉಂಟಾಗುವ ಉಷ್ಣತೆಯನ್ನು ಕೂಲಂಟ್‌ನ ಮುಖಾಂತರ ಕಡಿಮೆ ಮಾಡಲಾಗುತ್ತದೆ. ಡ್ರಿಲಿಂಗ್ ಮಾಡುವಾಗ ಅಪೇಕ್ಷಿಸಿರುವ ರಂಧ್ರಗಳಿಗೆ ಟಾಲರನ್ಸ್‌ ಪಡೆಯಲು ಬರ್ನಿಶಿಂಗ್ ಪ್ಯಾಾಡ್‌ಸ್‌ (ಚಿತ್ರ ಕ್ರ. 2) ಇರುತ್ತದೆ. ಅದು ರಂಧ್ರಗಳಿಗೆ ಫಿನಿಶಿಂಗನ್ನುಂಟು ಮಾಡುವ ಕೆಲಸವನ್ನು ಮಾಡುತ್ತದೆ.
 
ಡ್ರಿಲಿಂಗ್‌ನ ಪ್ರಕ್ರಿಯೆಯನ್ನು ಆಯ್ಕೆ ಮಾಡುವಾಗ ಅದರಲ್ಲಿರುವ L/D ಅಂದರೆ ಡ್ರಿಲಿಂಗ್‌ನ ಉದ್ದ/ ವ್ಯಾಾಸ ಇವೆರಡರ ಗುಣಾಕಾರಗಳು ಮತ್ತು ಅಪೇಕ್ಷಿಸಿರುವ ವ್ಯಾಾಸ ಈ ವಿಷಯಗಳು ತುಂಬಾ ಪ್ರಮುಖವಾಗಿರುತ್ತವೆ. ಇದು ನಮಗೆ ತಿಳಿದಿದೆ. L/D ಗುಣಾಕಾರಗಳು 7-8 ರ ತನಕ ನಾವು ಯಾವಾಗಲೂ ಉಪಯೋಗಿಸುವ ಡ್ರಿಲಿಂಗ್ ಮಶಿನ್‌ನಲ್ಲಿ ‘ವುಡ್ ಪ್ಯಾಾಕಿಂಗ್’ ಈ ಪದ್ಧತಿಯನ್ನು ಉಪಯೋಗಿಸಿ ಮಾಡಬಲ್ಲೆವು. ಆದರೆ ಅದರ ನಂತರ ಡೀಪ್ ಹೋಲ್ ಡ್ರಿಲಿಂಗ್ ಯಂತ್ರವನ್ನು ಉಪಯೋಗಿಸಬೇಕಾಗುತ್ತದೆ. ಸಾಮಾನ್ಯವಾಗಿ 0.8 ರಿಂದ 30 ಮಿ.ಮೀ.ತನಕ ವ್ಯಾಸವಿರುವ ರಂಧ್ರಗಳನ್ನು ಗನ್ ಡ್ರಿಲಿಂಗ್ ರೀತಿಯಲ್ಲಿ ಮಾಡುತ್ತಾರೆ. ಆದರೆ 15 ಮಿ.ಮೀ. ನಿಂದ 300 ಮಿ.ಮೀ.ಗಳ ತನಕ ವ್ಯಾಸದ ರಂಧ್ರಗಳನ್ನು ಮಾಡುವಾಗ BTA ಡ್ರಿಲಿಂಗ್‌ಗಳ ಯಂತ್ರವನ್ನು ಉಪಯೋಗಿಸಬೇಕಾಗುತ್ತದೆ. ಸಾಮಾನ್ಯವಾಗಿ L/D ಗುಣಾಕಾರವು 125 ರ ತನಕ ನಮಗೆ ಡೀಪ್ ಹೋಲ್‌ನ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ನಾವು ನಮ್ಮಲ್ಲಿ 10 ಮಿ.ಮೀ. ವ್ಯಾಸದ ಡ್ರಿಲ್ 3 ಮೀಟರ್‌ನ ತನಕ ಅಂದರೆ L/D=300 ತನಕ ಡೀಪ್ ಹೋಲ್ ಡ್ರಿಲಿಂಗ್ ಮಾಡುತ್ತೇವೆ. ಇದು ತುಂಬಾ ಕಠಿಣವಾದ ಕೆಲಸವಾಗಿರುತ್ತದೆ. ವಿಶೇಷವಾಗಿ ಇಷ್ಟು ಉದ್ದದ ರಂಧ್ರಗಳ ಕಾಂನ್ಸೆಂಟ್ರಿಸಿಟಿ ನಿಖರವಾಗಿಡಲು ವಿಶೇಷವಾದ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಅದಕ್ಕೋಸ್ಕರ ಜಾಬ್ ಮಟೇರಿಯಲ್‌ನ ನಿರಂತರತೆಯು ತುಂಬಾ ಅಗತ್ಯವಾಗಿರುತ್ತದೆ. ಕಂಪೋನಂಟ್‌ನ ಯಾವುದೇ ಕ್ರಾಾಸ್ ಸೆಕ್ಷನ್‌ನಲ್ಲಿ ಏಕರೂಪದ ಗಡಸುತನ (ಯುನಿಫಾರ್ಮ್ ಹಾರ್ಡ್‌ನೆಸ್) ಬೇಕಾಗುತ್ತದೆ. ಒಂದು ವೇಳೆ ಹಾಗಿಲ್ಲದಿದ್ದರೆ ಮತ್ತು ಆ ದೃಢತೆಯಲ್ಲಿ ವ್ಯತ್ಯಾಸವಿದ್ದಲ್ಲಿ ಡ್ರಿಲ್ ಕಡಿಮೆ ಕಠಿಣತೆ ಇರುವ ದಿಕ್ಕಿಗೆ ಬಗ್ಗುತ್ತದೆ. ಆಗ ಜಾಬ್‌ನ ಹೊರಗೆ ಜೋಡಿಸಿರುವ ವೇದಕಗಳು (ಸೆನ್ಸರ್ಸ್) ಉಪಯೋಗಕ್ಕೆ ಬರುತ್ತದೆ. ಅವು ದಪ್ಪವನ್ನು (ವಾಲ್ ಥಿಕ್‌ ನೆಸ್) ಅಳೆಯುತ್ತವೆ ಮತ್ತು ದಪ್ಪದಲ್ಲಿರುವ ವ್ಯತ್ಯಾಸವನ್ನು ತಿಳಿಸುತ್ತವೆ. ಅದರಿಂದ ರಂಧ್ರದ ಮಧ್ಯ ಬಿಂದು (ಸೆಂಟರ್) ಯಾವ ಭಾಗಕ್ಕೆ (ಕ್ವಾಂಡ್ರಂಟ್) ಸರಿದಿದೆ ಎಂದು ತಿಳಿಯುತ್ತದೆ ಮತ್ತು ಕೂಲಂಟ್‌ನ ಒತ್ತಡದ ನಿಯಂತ್ರಣವನ್ನು ಉಪಯೋಗಿಸಿ ಡ್ರಿಲ್‌ನ್ನು ಮತ್ತೆ ಮೂಲ ದಿಕ್ಕಿಗೆ ಬಗ್ಗಿಸಬಹುದು.
 

5_1  H x W: 0 x 
 
ಕೇಸ್ ಸ್ಟಡಿ
 
ಈ ತನಕದ ಪ್ರವಾಸದಲ್ಲಿ ತುಂಬಾ ಕಷ್ಟಕರವಾದ ಮಶಿನ್‌ಗಳನ್ನು ತಯಾರು ಮಾಡಲಾಯಿತು. ಯಾವ ಮಶಿನ್ ಮೊದಲಿಗೆ ತಯಾರು ಮಾಡಲಾಗಿತ್ತೋ ಅದು ಒಂದು ಡಿಝೆಲ್ ಇಂಜಿನ್ ತಯಾರು ಮಾಡುವ ಕಂಪನಿಗೋಸ್ಕರ ಆಗಿತ್ತು. ಜನರೇಟರ್ ಇಂಜಿನ್‌ನ ಇಂಜಿನ್ ಬ್ಲಾಕ್‌ನಲ್ಲಿ ಲ್ಯುಬ್ರಿಕೇಶನ್‌ಗೋಸ್ಕರ ಆಯಿಲ್ ಗ್ಯಾಲರಿ ಹೋಲ್‌ಸ್‌‌ಗಳಿರುತ್ತವೆ. ಆ ಆಯಿಲ್ ಗ್ಯಾಲರಿ ಹೋಲ್ಸ್‌ ಡ್ರಿಲಿಂಗ್‌ಗೋಸ್ಕರ, ನಾವು ಈ ಮಲ್ಟಿಎಕ್ಸಿಸ್ ಕಾಲಮ್ ಮಶಿನ್ ತಯಾರು ಮಾಡಿದ್ದೆವು. ಇದರಲ್ಲಿ ಎರಡು ವಿಧದ ಇಂಜಿನ್ ಬ್ಲಾಕ್‌ಗಳಿದ್ದವು. ಎರಡರ ಉದ್ದ ಮತ್ತು ಭಾರವೂ ಬೇರೆ ಬೇರೆ ಇತ್ತು. ಹಾಗೆಯೇ ಎರಡರ ಡ್ರಿಲಿಂಗ್ ರಂಧ್ರಗಳಲ್ಲಿಯೂ ಸ್ವಲ್ಪ ವ್ಯತ್ಯಾಸವೂ ಇತ್ತು. ಇವೆಲ್ಲದರ ವಿಚಾರವನ್ನು ಮಾಡಿ ಅವರಿಗೆ 8 ಸ್ಪಿಂಡಲ್, 5 ಎಕ್ಸಿಸ್ ಡೀಪ್ ಹೋಲ್ ಡ್ರಿಲಿಂಗ್ ಮಶಿನ್ (ಚಿತ್ರ ಕ್ರ. 3) ನೀಡಲಾಯಿತು. ಒಂದು ಬಟನ್ ಒತ್ತಿ 12 ಸಿಲಿಂಡರ್‌ಗಳಿಂದ 16 ಸಿಲಿಂಡರ್‌ಗಳ ಸೆಟಪ್ ಬದಲಾವಣೆಯ ವ್ಯವಸ್ಥೆಯನ್ನು ಮಾಡಲಾಯಿತು.
 
ಅವರಲ್ಲಿರುವ ಸಾಂಪ್ರದಾಯಿಕವಾದ ಮಶಿನ್‌ಗಳು ತುಂಬಾ ಹಳೆಯದಾಗಿದ್ದರಿಂದ ಆಗಾಗ ನಿಲ್ಲುತ್ತಿದ್ದವು. ಕೆಲಸಗಾರರಿಗೆ ಆ ಮಶಿನ್‌ನಲ್ಲಿ ಕೆಲಸ ಮಾಡುವುದೆಂದರೆ ಒಂದು ಶಿಕ್ಷೆಯಂತೆ ಅನ್ನಿಸುತ್ತಿತ್ತು. ‘ಕೂಲಂಟ್ ಫಿಲ್ಟ್ರೇಶನ್ ಸಿಸ್ಟಮ್’ನಲ್ಲಿ ಅವರಿಗೆ ತುಂಬಾ ಅಡಚಣೆಗಳನ್ನು ಎದುರಿಸಬೇಕಾಗುತ್ತಿತ್ತು. ಆ ಮಶಿನ್‌ಗಳನ್ನು ನಡೆಸುವುದು ಅಷ್ಟೇನು ಸುಲಭವಾಗಿರಲಿಲ್ಲ. ಅಂದರೆ ಕಾಂಪೋನಂಟ್ ಲೋಡ್ ಮಾಡಿದ ನಂತರ ಆಪರೇಟರ್ ಸತತವಾಗಿ ಎಲ್ಲಿಯಾದರೂ ಯಾವುದಾದರೂ ಮಶಿನ್‌ನಲ್ಲಿ ನಿರತರಾಗಿರುತ್ತಾರೆ. ನಾವು ನಮ್ಮ ಮಶಿನ್‌ಗಳನ್ನು ತಯಾರು ಮಾಡುವಾಗ, ಕೆಲವಾರು ವಿಷಯಗಳನ್ನು ಗಮನದಲ್ಲಿಡಬೇಕಾಯಿತು. ಉದಾಹರಣೆ, ಹಳೆಯ ಮಶಿನ್ ಯಾವ ಜಾಗದಲ್ಲಿತ್ತೋ, ಅದೇ ಜಾಗದಲ್ಲಿ ಮಶಿನ್ ಇಡುವಂತಹ ಯೋಜನೆಯು ಇತ್ತು. ಆ ಮಶಿನ್‌ನಲ್ಲಿ ಎರಡು ವಿಧದ ಕಾಂಪೋನಂಟ್ ಆಗಬೇಕು. ‘ಕಾಂಪೋನಂಟ್ ಚೇಂಜಿಂಗ್’ ಅಂದರೆ ಒಂದು ಸೆಟಪ್‌ನಿಂದ ಇನ್ನೊಂದು ಸೆಟಪ್‌ನಲ್ಲಿ ಹೋಗುವಾಗ ಜಾಸ್ತಿ ಕಷ್ಟವಾಗಬಾರದು ಎಂದೂ, ಹಾಗೆಯೇ ಇದರ ಫಿಕ್ಸ್ಚರಿಂಗ್ ಮಾಡುವಾಗ ಎರಡು ಕಂಪೋನಂಟ್ ಇಡಬಹುದಾದಂತಹ ಫಿಕ್ಸ್ಚರ್ ತಯಾರು ಮಾಡಿದೆವು. ಆದರೆ ಒಂದು ಸೆಟಪ್ ಆಗುತ್ತಿರುವಾಗ ಅಕಸ್ಮಾತ್ತಾಗಿ ಎರಡನೇ ಸೆಟಪ್‌ನ ಕಾಂಪೋನಂಟ್ ಜೋಡಿಸಿದಾಗ ಈ ಮಶಿನ್ ಅಲಾರಾಮ್ ಮಾಡುವಂತಹ ವ್ಯವಸ್ಥೆಯನ್ನು ಮಾಡಲಾಯಿತು. ಈ ಮಶಿನ್‌ನಿಂದಾಗಿ ಒಂದು ಕಾಂಪೋನಂಟ್ ತಯಾರು ಮಾಡಲು ಬೇಕಾಗುವ ವೇಳೆಯು (ಸೈಕಲ್ ಟೈಮ್) 96 ನಿಮಿಷದಿಂದ 28 ನಿಮಿಷಕ್ಕೆ ಬಂತು ಮತ್ತು ಆಪರೇಟರ್‌ನ ಕೌಶಲ್ಯವನ್ನು ಅವಲಂಬಿಸುವುದು ಇಲ್ಲದಂತಾಯಿತು. ಆಪರೇಟರ್‌ನ ನಿರಂತರವಾಗಿ ಅದರಲ್ಲೇ ನಿರತರಾಗಬೇಕಾಗಿಲ್ಲ. ಈ ಕಾಂಪೋನಂಟ್ ಕಾಸ್ಟ್‌ ಅಯರ್ನ್‌ ನಿಂದ ಮಾಡಲಾಗಿದ್ದರಿಂದ ಮಶಿನಿಂಗ್ ಆಗುವಾಗ ಕಾಸ್‌ಟ್‌ ಅಯರ್ನ್, ಪೌಡರ್‌ ನಂತಹ ಚಿಪ್ ತಯಾರಾಗುತ್ತದೆ ಮತ್ತು ಅದರಲ್ಲಿ ಯಾವ ಗ್ರಾಫೈಟ್ ಇರುತ್ತದೆಯೋ ಆ ಫಿಲ್ಟರ್ (ಇಂತಹ ಮಶಿನ್‌ಗಳಿಗೆ ಫಿಲ್ಟ್ರೇಶನ್ ಲೆವಲ್ ಇದು 10 ಮೈಕ್ರಾನ್‌ನ ತನಕ ಇರುತ್ತದೆ.) ಮಾಡುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಅದಕ್ಕೋಸ್ಕರ ವಿವಿಧ ತಂತ್ರಗಳನ್ನು ಉಪಯೋಗಿಸಬೇಕಾಗುತ್ತದೆ. ಈ ಮಶಿನ್‌ನಲ್ಲಿ ನಾವು ಉಪಕರಣಗಳನ್ನು ನೋಡಿಕೊಳ್ಳುವ ಯಂತ್ರಣೆಯನ್ನೂ (ಟೂಲ್ ಮಾನಿಟರಿಂಗ್ ಸಿಸ್ಟಮ್) ನೀಡಿದ್ದೇವೆ. ಇದರಿಂದಾಗಿ ಉಪಕರಣಗಳು ಬ್ಲಂಟ್ ಆಗಿದ್ದಲ್ಲಿ, ಯಾವ ಸ್ಪಿಂಡಲ್‌ನಲ್ಲಿ ಯಾವ ಉಪಕರಣ ಬ್ಲಂಟ್ ಆಗಿದೆ ಎಂಬ ಸಂದೇಶವೂ ಈ ಮಶಿನ್ ಕೊಡುತ್ತದೆ.
 
ಗ್ರಾಹಕರ ಸಮಾಧಾನ
 
ಕಂಪನಿಯ ಇತಿಹಾಸದಲ್ಲಿ ತುಂಬಾ ಕಠಿಣವಾದ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ಉದಾಹರಣೆ, 2004 ರಲ್ಲಿ ನಾವು ಆಸ್ಟ್ರಿಯಾದಲ್ಲಿರುವ ಒಂದು ಕಂಪನಿಗೋಸ್ಕರ ಒಂದು ವಿಶೇಷವಾದ ಮಶಿನ್ ತಯಾರಿಸಿದೆವು. ಮೊದಲು ಅವರಲ್ಲಿ ಸ್ವಿಸ್ ಮಶಿನ್ ಇತ್ತು, ಅದು ಏಳು ದಿನವೂ ಮೂರು ಶಿಫ್‌ಟ್‌‌ನಲ್ಲಿ ನಡೆಯುತ್ತಿತ್ತು. ಆದರೆ ಅದರಲ್ಲಿ ಸಮಾಧಾನಕಾರಕವಾದ ಉತ್ಪಾಾದನೆಯು ಸಿಗುತ್ತಿರಲಿಲ್ಲ. ಇದರಿಂದಾಗಿ ಅದಕ್ಕೋಸ್ಕರ ನಾವು ಎರಡು ಸ್ಪಿಂಡಲ್‌ನ ಸ್ವಯಂಚಾಲಿತ ಡೀಪ್ ಹೋಲ್ ಡ್ರಿಲಿಂಗ್ ಮಶಿನ್ ತಯಾರು ಮಾಡಿದೆವು. (ಇದು ನಾವು ರಫ್ತುು ಮಾಡಿರುವ ಮೊದಲನೇ ಮಶಿನ್ ಅಗಿರುತ್ತದೆ.) ಮಶಿನ್ ತಯಾರು ಮಾಡಿದ ನಂತರ ಅಲ್ಲಿರುವ ಗ್ರಾಾಹಕರಿಂದ ಭಾರತದಲ್ಲಿ ಅದರ ತಪಾಸಣೆಯನ್ನು ಮತ್ತು ಟ್ರಯಲ್ ಕೂಡಾ ಮಾಡಿದೆವು. ನಂತರ ಮಶಿನ್‌ನ್ನು ಸರಿಯಾಗಿ ಪ್ಯಾಾಕಿಂಗ್ ಮಾಡಿ ಮಶಿನ್ ಅಲ್ಲಿ ಕಳುಹಿಸಲಾಯಿತು. ಅಲ್ಲಿ ತೆರೆದು ನೊಡಿದ ನಂತರ ಆ ಮಶಿನ್ ಚೂರುಚೂರಾಗಿರುವುದು ಕಂಡುಬಂತು. ಕಂಪನಿಯ ಮತ್ತು ದೇಶದ ಪ್ರತಿಷ್ಠೆಯ ಪ್ರಶ್ನೆಯು ನಮ್ಮ ಮುಂದೆ ನಿಂತುಕೊಂಡಿತು. ನಾವು ನಮ್ಮ ಮೂರು ಉದ್ಯೋಗಿಗಳನ್ನು ಅಲ್ಲಿಗೆ ಕರಕೊಂಡು ಹೋದೆವು. ಪ್ಯಾಾಕಿಂಗ್ ಮಾಡುವಾಗ ಯೋಗ್ಯವಾದ ಮುತುವರ್ಜಿಯನ್ನು ತೆಗೆದುಕೊಳ್ಳದಿದ್ದರಿಂದ ಮಶಿನ್‌ನ ಅವಸ್ಥೆಯು ತುಂಬಾ ಕಠಿಣವಾಗಿತ್ತು. ಕೆಲವಾರು ಬಿಡಿಭಾಗಗಳೂ ತುಂಡಾಗಿದ್ದವು, ವಾಯರ್‌ನ್ನು ಇಲಿಗಳು ಕಚ್ಚಿದ್ದವು. ನಾವು ಇಂತಹ ಮಶಿನ್‌ಗಳ ತಪಾಸಣೆ ಮಾಡಿದೆವು ಮತ್ತು ಭಾರತದಿಂದ ವಿಮಾನದ ಮೂಲಕ ಬಿಡಿಭಾಗಗಳನ್ನು ತರಿಸಿದೆವು. ನಂತರ ದುರಸ್ತಿಯ ಕೆಲಸವನ್ನು ಪ್ರಾರಂಭಿಸಿ 10 ದಿನಗಳಲ್ಲಿ ಮಶಿನ್ ಶುರು ಮಾಡಿಕೊಟ್ಟೆವು. ಗ್ರಾಾಹಕರಿಗೆ ಮಶಿನ್‌ನ ಟ್ರಯಲ್ ಮಾಡಿ ತೋರಿಸಲಾಯಿತು. ಆ ಮಶಿನಿನ ಎಲ್ಲ ಕೆಲಸಗಳನ್ನು ನೋಡಿದೆವು. ಆ ಮಶಿನ್‌ನಲ್ಲಿ 3-4 ಕಾಂಪೋನಂಟ್ ಡ್ರಿಲಿಂಗ್ ಮಾಡಿ ಕೂಡಾ ನೋಡಿದೆವು. ಆ ಮಶಿನ್ ಹಿಂದಿನ ಹಾಗೆ ಕೆಲಸ ಮಾಡುತ್ತಿರುವ ಕುರಿತು ದೃಢೀಕರಿಸಲಾಯಿತು. ಮೊದಲನೇ ದಿನ ನಮಗೆ ಹೊರ ದಾರಿಯನ್ನು ತೋರಿಸುತ್ತಿದ್ದ ಗ್ರಾಾಹಕರು (ಕಸ್ಟಮರ್) ಆ ದಿನದ ನಂತರ ನಮ್ಮ ಸ್ನೇಹಿತರಾದರು ಮತ್ತು ಮುಂದೆ ಅಂತಹ ಮೂರು ಮಶಿನ್‌ಗಳನ್ನು ನಮ್ಮಿಂದ ಖರೀದಿಸಿದರು.
 

6_1  H x W: 0 x 
 
ನಮ್ಮ ಮಶಿನ್‌ನಲ್ಲಿ ಜಾಬ್‌ ವರ್ಕ್ ಮಾಡಿ ಮತ್ತು ಸ್ವಂತ ಮಶಿನ್‌ಗಳನ್ನು ತಯಾರು ಮಾಡಿದೆವು, ನಾವು ನಮ್ಮದೇ ಆದ ಪ್ರಾರಂಭವನ್ನು ಮಾಡಿದೆವು. ಜಾಬ್‌ಶಾಪ್ ಇಡುವ ಕಾರಣವೇ ಇದಾಗಿತ್ತು, ಮಶಿನ್‌ನಲ್ಲಿ ಯಾವ ಬದಲಾವಣೆಗಳನ್ನು ಮಾಡುತ್ತೇವೆ, ಎಂದು ಗ್ರಾಹಕರಿಗೆ ಅದನ್ನು ಮೊದಲೇ ಇಲ್ಲಿರುವ ಜಾಬ್‌ ಶಾಪ್‌ನಲ್ಲಿ ಮಾಡಿ ನೋಡಬಹುದು. ಹಾಗೆಯೇ ನಾವು ಸ್ವಂತ ತುಂಬಾ ಪ್ರಯೋಗಗಳನ್ನು ಇಲ್ಲಿರುವ ಜಾಬ್‌ ಶಾಪ್‌ನಲ್ಲಿ ಮಾಡುತ್ತಿರುತ್ತೇವೆ. ‘ಪ್ರೆಸಿಹೋಲ್’ನ ಕಠಿಣವಾದ ಪರಿಶ್ರಮದ ನಂತರ ಡೀಪ್ ಹೋಲ್ ಡ್ರಿಲಿಂಗ್ ಮಶಿನ್‌ಗಳಿಗೆ ಯುರೋಪ್, ಅಮೇರಿಕಾ, ಕೆನಡಾ, ಕೊಲ್ಲಿ ದೇಶಗಳಲ್ಲಿ ಮತ್ತು ದಕ್ಷಿಣ ಪೂರ್ವ ಏಶಿಯಾದಲ್ಲಿ ಮಾರುಕಟ್ಟೆಯನ್ನು ಸ್ವಾಧೀನಪಡಿಸಿದೆವು, ಎಂಬುದನ್ನು ನಾವು ತುಂಬಾ ಹೆಮ್ಮೆಯಿಂದ ಹೇಳುತ್ತಿದ್ದೇವೆ. ಈಗ ಪರದೇಶದಲ್ಲಿ ಡೀಪ್ ಹೋಲ್ ಡ್ರಿಲಿಂಗ್ ಮಶಿನ್‌ಗಳನ್ನು ತಯಾರಿಸುವವರೊಂದಿಗೆ ‘ಪ್ರೆಸಿಹೋಲ್’ ಯಶಸ್ಸಿನಿಂದ ಪ್ರತಿಸ್ಪರ್ಧೆಯನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಕೆಲವು ವಿವರಗಳು ಈ ಕೆಳಗಿನಂತಿವೆ.
 
ಯುರೋಪಿಯನ್ ಆರ್ಡನನ್ಸ್‌ ಫ್ಯಾಕ್ಟರಿಗಳ ಗನ್ ಬ್ಯಾರಲ್ ತಯಾರಿಸುವುದಕ್ಕೋಸ್ಕರ ಬೇಕಾಗುವ ಸಂಪೂರ್ಣವಾದ ಮಶಿನ್ ರೇಂಜ್‌ಗಳನ್ನು ‘ಪ್ರೆಸಿಹೋಲ್’ ಇವರೇ ನೀಡಿದ್ದಾಾರೆ.
‘ಮೆಡಿಕಲ್ ಇಂಪ್ಲಾಂಟ್‌ನ ಮಶಿನ್ಸ್‌’ಗಳ ಕ್ಷೇತ್ರದಲ್ಲಿ ‘ಪ್ರೆಸಿಹೋಲ್’ನ ಕೊಡುಗೆಯು ತುಂಬಾ ಅತ್ಯಮೂಲ್ಯವಾಗಿದೆ. ಈ ಕ್ಷೇತ್ರದಲ್ಲಿ ಉಪಯೋಗಿಸಲಾಗುವ ಲೋಹಗಳಲ್ಲಿ 1.0 ಮಿ.ಮೀ.ನಿಂದ ರಂಧ್ರಗಳನ್ನು ಮಾಡುವ ಮಶಿನ್‌ಗಳ ಉತ್ಪಾಾದನೆಯನ್ನು ನಿಯಮಿತವಾಗಿ ಪ್ರಾರಂಭಿಸಿದೆವು.
ಇದರೊಂದಿಗೆ ‘ಪ್ರೆಸಿಹೋಲ್’ ತಮ್ಮ ಜಾಬ್‌ ಶಾಪ್‌ನಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್‌ಗೆ ಬೇಕಾಗುವ ಕಂಪೋನಂಟ್ಸ್‌‌ ನ ಡೀಪ್ ಹೋಲ್ ಡ್ರಿಲಿಂಗ್ ನಿರಂತರವಾಗಿ ಮಾಡಿಕೊಡುತ್ತದೆ.
 
ಭಾರತದಲ್ಲಿರುವ ಗನ್ ಡ್ರಿಲಿಂಗ್ ಮಶಿನ್‌ನ ಒಟ್ಟಾರೆ ಮಾರುಕಟ್ಟೆಯು ಸಾಮಾನ್ಯವಾಗಿ 50 ಕೋಟಿ ರೂಪಾಯಿಗಳಷ್ಟಿದೆ. ಅದರ ಪೈಕಿ ನಮ್ಮ ಪಾಲು ಅಂದಾಜು 65-70 ಶೇಕಡಾ ಇದೆ. ‘ಪ್ರೆಸಿಹೋಲ್’ ಇವರು ಪ್ರತಿವರ್ಷ ಅಂದಾಜು 45-48 ಮಶಿನ್‌ಗಳ ನಿರ್ಮಾಣ ಮಾಡುತ್ತಾರೆ. ಬೆಲೆಯ ಕುರಿತು ಈ ಮಶಿನ್‌ಗಳು ಕಡಿಮೆ ಎಂದರೆ 20 ಲಕ್ಷದಿಂದ ಹೆಚ್ಚೆಂದರೆ 8.5 ಕೋಟಿ ರೂಪಾಯಿಗಳ ತನಕ ಇದೆ. ಆದರೆ ‘ಪ್ರೆಸಿಹೋಲ್’ನ ಮಶಿನ್ ಟೂಲ್‌ನ ವ್ಯವಸಾಯವು ವರ್ಷಕ್ಕೆ 35 ರಿಂದ 40 ಕೋಟಿ ರೂಪಾಯಿಗಳ ತನಕ ಇರುತ್ತದೆ.
 
 

VR naik_1  H x  
ವಿ. ಅರ್. ನಾಯಕ್
ನಿರ್ದೇಶಕರು,
ಪ್ರೆಸಿಹೋಲ್ 
9167240368
 
40 ವರ್ಷಗಳಿಂದ ಯಂತ್ರದ ನಿರ್ಮಾಣದಲ್ಲಿ ನಿರತರಾಗಿರುವ ವಿ. ಆರ್. ನಾಯಕ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ಪ್ರೆಸಿಹೋಲ್ ಕಂಪನಿಯ ನಿರ್ದೇಶಕರಾಗಿದ್ದಾರೆ.