ಪ್ಯಾಕೆಟ್ ಮಿಲ್ಲಿಂಗ್

Udyam Prkashan Kannad    31-Jan-2020
Total Views |

1_1  H x W: 0 x
 
ಎನರ್ಜಿ ಮತ್ತು ಪಾವರ್ ಕ್ಷೇತ್ರ, ಅರ್ಥ್‌ ಮೂವಿಂಗ್ ಸಾಮಗ್ರಿಗಳನ್ನು ತಯಾರಿಸುವ ಕ್ಷೇತ್ರದಂತಹ ಹೆವಿ ಇಂಜಿನಿಯರಿಂಗ್ ಉದ್ಯಮದಲ್ಲಿ ಪ್ರತಿದಿನವೂ ಅಭಿವೃದ್ಧಿಗಳಾಗುತ್ತಿರುವುದು ಕಂಡುಬರುತ್ತದೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿಯೊಂದಿಗೆ ಅವರ ಉತ್ಪಾದನೆಯ ಹೆಚ್ಚಳದ ಅಗತ್ಯವೂ ದೊಡ್ಡ ಪ್ರಮಾಣದಲ್ಲಿ ವೃದ್ಧಿಸುತ್ತಿದೆ. ಅನೇಕ ಮಲ್ಟಿ ನ್ಯಾಶನಲ್ ಕಂಪನಿಗಳು ಭಾರತದಲ್ಲಿ ತಳವೂರಿ ತಮ್ಮದೇ ಆದ ಕಾರಖಾನೆಗಳನ್ನು ಪ್ರಾರಂಭಿಸಿವೆ. ಈ ಉದ್ಯಮಗಳ ಕ್ಷೇತ್ರದಲ್ಲಿ ಬಳಸಲಾಗುವಂತಹ ಗಿಯರ್ ಬಾಕ್ಸ್‌‌ಗಳ ಹೌಸಿಂಗ್, ಗಿಯರ್ ಇಂತಹ ವಿವಿಧ ರೀತಿಯ ಯಂತ್ರಭಾಗಗಳು ತುಂಬಾ ದೊಡ್ಡದಾಗಿ ಮತ್ತು ಹೆವಿ ಆಗಿರುತ್ತವೆ. ಈ ಯಂತ್ರಭಾಗಗಳನ್ನು ಬ್ಯಾಾಚ್‌ನಲ್ಲಿಯೇ ತಯಾರಿಸಲಾಗುತ್ತದೆ. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ಇನ್‌ವೆಂಟರಿ ಎಂದೂ ಇಟ್ಟುಕೊಳ್ಳುವುದು ಅಸಾಧ್ಯವಾಗಿದೆ. ಕಾರಣ ಅದರ ಬೆಲೆಯು ತುಂಬಾ ಹೆಚ್ಚಾಗಿರುತ್ತದೆ ಮತ್ತು ತಯಾರಿಸಲು ಮತ್ತು ಸಂಗ್ರಹಿಸಲು ವಿಸ್ತಾರವಾದ ಸ್ಥಳವೂ ಬೇಕಾಗುತ್ತದೆ. ಹೆಚ್ಚಾಗಿ ಯಂತ್ರಭಾಗಗಳನ್ನು ಕಾಸ್ಟಿಂಗ್ ಮತ್ತು ಫೋರ್ಜಿಂಗ್‌ನಿಂದಲೇ ತಯಾರಿಸಲಾಗುತ್ತದೆ. ಕಾರಣ ಈ ಯಂತ್ರಭಾಗಗಳ ಆಕಾರ ತುಂಬಾ ದೊಡ್ಡದಾಗಿ ಮತ್ತು ಅಂಕುಡೊಂಕಾಗಿಯೂ ಇರುವುದರಿಂದ ಅವುಗಳನ್ನು ಒಂದೇ ಧೃಢವಾದ ತುಂಡಿನಿಂದ ತಯಾರಿಸುವುದೂ ತುಂಬಾ ಕಠಿಣವಾಗಿದೆ, ಅಲ್ಲದೇ ಅದು ಲಾಭಕಾರಿಯಾಗಿರುವುದಿಲ್ಲ. ಇತ್ತಿಚೇಗೆ ಇಂತಹ ಯಂತ್ರಭಾಗಗಳ ಬೇಡಿಕೆಯು ಹೆಚ್ಚಾಗುತ್ತಿದೆ. ಆದ್ದರಿಂದ ಇಂತಹ ಉಪಕರಣಗಳನ್ನು ತಯಾರಿಸುವ ಮೂಲ ಉತ್ಪಾದಕರಿಗೆ (ಓ.ಇ.ಎಮ್.) ಕಠಿಣವಾದ ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ನಿಧಾನವಾಗಿ ಅವರು ಹಲವಾರು ಯಂತ್ರಭಾಗಗಳ ತಯಾರಿಕೆಯನ್ನು ಮೊದಲ ಅಥವಾ ಎರಡನೇ ಹಂತದಲ್ಲಿರುವ ಕಾರಖಾನೆಗಳಿಗೆ ನೀಡಿದರು. ಈ ಲಘು ಅಥವಾ ಮಧ್ಯಮ ಉದ್ಯಮಗಳಿಗೆ ಓ.ಇ.ಎಮ್.ನ ಪ್ಯಾರಾಮೀಟರ್‌ಗಳಿಗೆ ಅನುಸಾರವಾಗಿ ಇಂತಹ ಯಂತ್ರಭಾಗಗಳನ್ನು ತಯಾರಿಸಲು ವಿಶೇಷವಾದ ಉಪಕರಣಗಳ ಅಗತ್ಯವಿರುತ್ತದೆ. ಓ.ಇ.ಎಮ್.ನ ಪ್ಯಾರಾಮೀಟರ್‌ಗಳನ್ನು ಅವಲಂಬಿಸಿ ಕಡಿಮೆ ವೇಳೆಯಲ್ಲಿ ಉತ್ಪಾದನೆಯನ್ನು ಮಾಡುವುದು ಲಘು ಉದ್ಯಮಿಗಳಿಗೆ ದೊಡ್ಡ ಸವಾಲಾಗಿದೆ.
 

2_1  H x W: 0 x 
 
ನಮ್ಮ ಒಬ್ಬ ಗ್ರಾಹಕರು ಅರ್ಥ್‌ ಮೂವಿಂಗ್ ಉಪಕರಣಗಳಿಗೋಸ್ಕರ ದೊಡ್ಡ ಆಕಾರದ ಯಂತ್ರಭಾಗಗಳನ್ನು ತಯಾರಿಸುತ್ತಾಾರೆ. ಯಂತ್ರಭಾಗಗಳ ಕಚ್ಚಾವಸ್ತುಗಳ ಗಾತ್ರವು ತುಂಬಾ ದೊಡ್ಡದಾಗಿರುತ್ತದೆ ಮತ್ತು ಅದರಿಂದ ತುಂಬಾ ದೊಡ್ಡ ಮಟೀರಿಯಲ್ ಯಂತ್ರಣೆಯ ಮೂಲಕ ಹೊರಗೆ ತೆಗೆಯಬೇಕಾಗುತ್ತದೆ. ಇಂತಹ ಯಂತ್ರಭಾಗಗಳ ಉತ್ಪಾದನೆಯಲ್ಲಿ ಸ್ಟ್ಯಾಾಂಡರ್ಡ್ ಮಶಿನ್‌ಗಳನ್ನು ಬಳಸಲಾಗುವುದಿಲ್ಲ. ಆದರೆ ಅವುಗಳನ್ನು ಯಂತ್ರಭಾಗಗಳ ಡಿಸೈನ್‌ಗೆ ಅನುಸಾರವಾಗಿ ತಯಾರಿಸಿರುವ ವಿಶೇಷವಾದ ಮಶಿನ್‌ಗಳಾಗಿರುತ್ತವೆ. ಜಾಸ್ತಿ ಪ್ರಮಾಣದಲ್ಲಿ ಮಟೀರಿಯಲ್ ತೆಗೆಯ ಬೇಕಾಗಿದ್ದರಿಂದ ಯಂತ್ರಣೆಯ ವೇಳೆ ಮತ್ತು ಪ್ರತಿಯೊಂದು ಯಂತ್ರಭಾಗಗಳಿಗೆ ಮಾಡಬೇಕಾದ ಖರ್ಚು ಹೇಗೆ ಕಡಿಮೆ ಮಾಡುವುದು, ಎಂಬ ವಿಚಾರವನ್ನು ಗ್ರಾಹಕರು ಯಾವಾಗಲೂ ಮಾಡುತ್ತಿರುತ್ತಾಾರೆ. ಒಂದು ಯಂತ್ರಭಾಗದಲ್ಲಿ (ಚಿತ್ರ ಕ್ರ. 1) ಒಂದು ದೊಡ್ಡ ಬೃಹತ್ ಆಕಾರದ 4 ಪ್ಯಾಕೇಟ್‌ಗಳ ಯಂತ್ರಣೆಯನ್ನು ಮಾಡಬೇಕಾಗಿತ್ತು. ಇಂತಹ ದೊಡ್ಡ ಆಕಾರದ ಯಂತ್ರಭಾಗಗಳ ಅನೇಕ ಸಮಾನರೂಪವಿರುವ ವಿಧಗಳು ಗ್ರಾಹಕರಿಗೆ ನಿಯಮಿತವಾಗಿ ಪೂರೈಸಬೇಕಾಗಿತ್ತು. ಇದರಿಂದಾಗಿ ಹೀಗೆಯೇ ಎಲ್ಲ ವಿಧದ ಯಂತ್ರಭಾಗಗಳನ್ನು ತಯಾರಿಸುವ ಟೂಲಿಂಗ್ ಒಂದೇ ರೀತಿಯಲ್ಲಿ ಮಾಡುವುದೂ ಕೂಡಾ ಒಂದು ಸವಾಲಾಗಿತ್ತು.
 
ಯಂತ್ರಭಾಗಗಳ ಯಂತ್ರಣೆಯನ್ನು ಎಚ್.ಎಮ್.ಸಿ.ಯಲ್ಲಿ ಮಾಡಲಾಗುತ್ತಿತ್ತು. ಒಂದು ಪ್ಯಾಕೇಟ್‌ನ ಆಕಾರ 104 ಮಿ.ಮೀ. ಉದ್ದ, 52 ಮಿ.ಮೀ. ಅಗಲ ಮತ್ತು 38 ಮಿ.ಮೀ. ಆಳದಷ್ಟು ಇತ್ತು. ಒಂದು ಯಂತ್ರಭಾಗದಲ್ಲಿ ಇಂತಹ ಒಂದೇ ರೀತಿಯಲ್ಲಿರುವ ನಾಲ್ಕು ಪಾಕೇಟ್‌ಗಳಿದ್ದವು. 2 ಮೂಲೆಗಳ (ಕಾರ್ನರ್) ಇನ್ಸರ್ಟ್ ಇರುವ ಟೂಲ್ ಬಳಸಿ ಒಂದು ಪಾಕೇಟ್ ಪೂರ್ತಿ ಮಾಡಲು ತುಂಬಾ ವೇಳೆಯು ವ್ಯರ್ಥವಾಗುತ್ತಿತ್ತು. 4 ಪಾಕೇಟ್ ಪೂರ್ತಿ ಮಾಡಲು 1 ಗಂಟೆ 45 ನಿಮಿಷಗಳ ಕಾಲಾವಧಿಯು ಬೇಕಾಗುತ್ತಿತ್ತು. ಟೂಲ್‌ನ ಆಯುಷ್ಯವೂ ಕಡಿಮೆ ಅಂದರೆ 8 ಪ್ಯಾಕೇಟ್ ಅಥವಾ 2 ಯಂತ್ರಭಾಗಗಳಷ್ಟು ಇತ್ತು.
 
ಈ ಪರಿಸ್ಥಿತಿಯಲ್ಲಿ ನಾವು ವಿಶ್ಲೇಷಣೆಯನ್ನು ಮಾಡಿದೆವು. 4 ಮೂಲೆಗಳಿರುವ ಹೆಚ್ಚು ಫೀಡ್ ಕೊಟ್ಟು ಮಿಲ್ಲಿಂಗ್ ಮಾಡುವ ಸಾಮರ್ಥ್ಯವಿರುವ ಇನ್ಸರ್ಟ್ (ಚಿತ್ರ ಕ್ರ. 2) ಬಳಸಲು ಸೂಚಿಸಲಾಯಿತು. ಕಾರಣ ಪ್ಯಾಕೇಟ್‌ನ ಸರ್ಫೇಸ್ ಫಿನಿಶ್ ರಫ್ ಇರಬಹುದಾಗಿತ್ತು. ಹೆಚ್ಚು ಫೀಡ್ ಕೊಟ್ಟು ಮಾಡಿರುವ ಮಿಲ್ಲಿಂಗ್ ಪ್ರಕ್ರಿಯೆಯಿಂದ ಕೆಲಸಕ್ಕೋಸ್ಕರ ತಗಲುವ ವೇಳೆಯು ಕಡಿಮೆಯಾಯಿತು ಮತ್ತು ಉತ್ಪಾದನೆಯ ಸಾಮರ್ಥ್ಯವೂ ಹೆಚ್ಚಾಯಿತು. ಹಾಗೆಯೇ ಯಂತ್ರಣೆಗೋಸ್ಕರ ರ್ಯಾಪಿಂಗ್‌ನ ರೀತಿಯನ್ನು ಬಳಸಲಾಯಿತು. (ಚಿತ್ರ ಕ್ರ. 3) ಇದರಲ್ಲಿ ಟೂಲ್ ಯಂತ್ರಭಾಗಗಳಲ್ಲಿ ಒಂದು ವಿಶಿಷ್ಟವಾದ ಕೋನದಲ್ಲಿ ಪ್ರವೇಶಿಸುತ್ತದೆ ಮತ್ತು ಹೆಚ್ಚು ಫೀಡ್ ರೇಟ್‌ನಿಂದ ಮಿಲ್ಲಿಂಗ್ ಮಾಡಿ ಮಟೀರಿಯಲ್ ಹೊರಗೆ ತೆಗೆಯುತ್ತದೆ. ಸಾಮಾನ್ಯವಾಗಿ ಪಾಕೇಟ್‌ನ ಯಂತ್ರಣೆಯಲ್ಲಿ ರ್ಯಾಾಂಪಿಂಗ್ ಪ್ರಕ್ರಿಯೆಯ ಉಪಯೋಗವನ್ನು ಮಾಡಲಾಗುತ್ತದೆ. ಈ ಕೆಲಸದ ವಿವರಗಳನ್ನು ಈ ಮುಂದೆ ನೀಡಲಾಗಿದೆ.
 

3_1  H x W: 0 x 
 
> ಯಂತ್ರಭಾಗಗಳು : ಮೂವಿಂಗ್ ಜಾ ವೇಜ್
> ಮಟೀರಿಯಲ್ : EN10025 ಫೋರ್ಜ್ಡ್‌ ಸ್ಟೀಲ್ (ಕಠಿಣತೆ 200-240 BHN)
> ಆಪರೇಶನ್ : ಪಾಕೇಟ್‌ನ ಮಿಲ್ಲಿಂಗ್
> ಮಶಿನ್ : ಎಚ್.ಎಮ್.ಸಿ. ಡಿಎಮ್‌ಜಿ ಮೋರಿ BT40 ಟೇಪರ್
> ಸ್ಪಿಂಡಲ್ ಪಾವರ್ : 18 ಓಡಿ
> ಮಶಿನ್‌ನ ಮ್ಯಾಕ್ಸಿಮಮ್ ಆರ್.ಪಿ.ಎಮ್. : 4000 ಸಮಸ್ಯೆಗಳು
 
ಎ. ಯಂತ್ರಣೆಗೆ ಬೇಕಾಗುವ ಸಮಯ ತುಂಬಾ ಹೆಚ್ಚಾಗಿದೆ. (ಒಂದು ಯಂತ್ರಭಾಗಕ್ಕೆ 1 ಗಂಟೆ 45 ನಿಮಿಷಗಳು)
ಬಿ. ಉತ್ಪಾದನೆಯ ಸಾಮರ್ಥ್ಯ ಕಡಿಮೆ
ಸಿ. ಟೂಲ್‌ನ ಬಾಳಿಕೆ ಕಡಿಮೆ, ಇನ್ಸರ್ಟ್ ತುಂಡಾಗುವುದು.
ಡಿ. ಪ್ರತಿಯೊಂದು ಯಂತ್ರಭಾಗದ 
ಬೆಲೆಯೂ ಜಾಸ್ತಿ.
 
ಹೊಸ ರೀತಿ
 
ಹೊಸ ರೀತಿಯಲ್ಲಿ ನಾವು 4 ಮೂಲೆಗಳ ಚೌಕೋನದಲ್ಲಿರುವ ಇನ್ಸರ್ಟ್ ಬಳಸುವುದನ್ನು ನಿರ್ಧರಿಸಲಾಯಿತು. ಇದರಲ್ಲಿ ಹೆಚ್ಚು ಫೀಡ್ ಇಟ್ಟು ಯಂತ್ರಣೆಯನ್ನು ಮಾಡುವ ಸಾಮರ್ಥ್ಯವು ಇದೆ. ಈ ಇನ್ಸರ್ಟ್‌ನ ಮೂಲೆಯ ತ್ರಿಜ್ಯವು 1.5 ಮಿ.ಮೀ. ಇರುವುದರಿಂದ ಮೂಲೆಗಳು ತುಂಡಾಗುವ ಸಮಸ್ಯೆಯ ಪರಿಹಾರವಾಯಿತು. ನಾವು ತುಂಡುಗಳ ಆಳವನ್ನು ಹೆಚ್ಚಿಸಿ (0.5 ಮಿ.ಮೀ. ಪ್ರತಿ ಪಾಸ್‌ನ ಬದಲಾಗಿ 1 ಮಿ.ಮೀ. ಪ್ರತಿ ಪಾಸ್) ಪಾಸ್‌ಗಳ ಸಂಖ್ಯೆೆಯನ್ನು ಕಡಿಮೆ ಮಾಡಲಾಯಿತು. ಇನ್ಸರ್ಟ್‌ಗಳ ಉಚ್ಚ ಫೀಡ್ ಸಾಮರ್ಥ್ಯದಿಂದಾಗಿ ಸಂಪರ್ಕದ ವೇಳೆಯು ಕಡಿಮೆ ಆಯಿತು. ಇದರಿಂದಾಗಿ ತುಂಡುಗಳ ಆಳ ಮತ್ತು ಯಂತ್ರಣೆಯ ವೇಗವನ್ನು ಹೆಚ್ಚಿಸುವುದು ಸಾಧ್ಯವಾಯಿತು ಮತ್ತು ಪಾಸ್‌ಗಳ ಸಂಖ್ಯೆೆಯನ್ನು ಕಡಿಮೆ ಮಾಡುವುದು ಸಾಧ್ಯವಾಯಿತು.
 

4_1  H x W: 0 x 
 
SDMT 1004 ಇನ್ಸರ್ಟ್‌ನ ವೈಶಿಷ್ಟ್ಯಗಳು
1. 4 ಕಟಿಂಗ್ ಎಡ್ಜ್‌
2. ದೃಢವಾದ ಕೋನೀಯ ಕ್ಲ್ಯಾಂಪಿಂಗ್
3. ಉಚ್ಚಮಟ್ಟದ ಫೀಡ್‌ನಲ್ಲಿ ಯಂತ್ರಣೆಯನ್ನು ಮಾಡುವ ಸಾಮರ್ಥ್ಯ
4. ಕಟಿಂಗ್ ವೇಟ್ ಸಹಿಸಲು ದೃಢವಾದ ಕಟಿಂಗ್ ಎಡ್ಜ್‌
 
SDMT 1004 ಇನ್ಸರ್ಟ್‌ನ ಲಾಭಗಳು
ಹೊಸ ರೀತಿಯನ್ನು ಅವಲಂಬಿಸಿದ ನಂತರ ಮುಂದಿನಂತೆ ಲಾಭಗಳಾದವು.
1. ಟೂಲ್‌ನ ಬಾಳಿಕೆಯು ಶೇಕಡಾ 50 ರಷ್ಟು ಸುಧಾರಿಸಿತು.
2. ಉತ್ಪಾದನೆಯ ಸಾಮರ್ಥ್ಯ ಶೇಕಡಾ 33 ರಷ್ಟು ಸುಧಾರಿಸಿತು.
3. ಕಾಸ್ಟ್‌‌ನಲ್ಲಿ ಕಾಂಪೋನಂಟ್ (ಸಿ.ಪಿ.ಸಿ.) ಶೇಕಡಾ 19 ರಷ್ಟು ಕಡಿಮೆ ಆಯಿತು.
4. ಇನ್ನಿತರ ಯಂತ್ರಭಾಗಗಳ ಯಂತ್ರಣೆಗೋಸ್ಕರ ಗ್ರಾಹಕರಿಗೆ ಹೆಚ್ಚು ವೇಳೆಯು ಉಪಲಬ್ಧವಾಯಿತು.
 
 
 

vv purohit_1  H 
ವಿಜೇಂದ್ರ ಪುರೋಹಿತ
ವ್ಯವಸ್ಥಾಪಕರು (ತಾಂತ್ರಿಕ ಸಹಾಯ),
ಡ್ಯುರಾಕಾರ್ಬ್ ಇಂಡಿಯಾ 
9579352519
 
ವಿಜೇಂದ್ರ ಪುರೋಹಿತ್ ಇವರು ‘ಡ್ಯುರಾಕಾರ್ಬ್ ಇಂಡಿಯಾ’ ಈ ಕಂಪನಿಯಲ್ಲಿ ತಾಂತ್ರಿಕ ಸಹಾಯ ವಿಭಾಗದಲ್ಲಿ ಪ್ರಮುಖರಾಗಿ ಕೆಲಸ ಮಾಡುತ್ತಿದ್ದಾಾರೆ. ಇವರಿಗೆ ಮಶಿನ್ ಟೂಲ್ ಮತ್ತು ಕಟಿಂಗ್ ಟೂಲ್ ಡಿಸೈನ್‌ನ ಸುಮಾರು 20 ವರ್ಷಗಳ ಅನುಭವವಿದೆ.