ನಮ್ಮೊಂದಿಗೆ ಜಾಹೀರಾತು ನೀಡಿ

Udyam Prkashan Kannad    08-Jan-2020
Total Views |

ಜೂನ್ 2017 ರಲ್ಲಿ ಸ್ಥಾಪನೆಯಾದ ನಂತರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಈ ಉತ್ಪಾದನೆಯ ಕ್ಷೇತ್ರಕ್ಕೆ ಸಮರ್ಪಿಸಲ್ಪಟ್ಟ `ಧಾತುಕಾಮ’ ಎಂಬ ಮರಾಠಿ ಮಾಸ ಪತ್ರಿಕೆಯ 30 ಕ್ಕಿಂತಲೂ ಹೆಚ್ಚು ಸಂಚಿಕೆಗಳು ಪ್ರಕಾಶಿಸಲ್ಪಟ್ಟಿವೆ. ಹಾಗೆಯೇ ಕನ್ನಡ ಭಾಷೆಯಲ್ಲಿ ನವಂಬರ್ 2018 ರಲ್ಲಿ `ಲೋಹಕಾರ್ಯ’ದ ಪ್ರಕಾಶನವನ್ನು ಪ್ರಾರಂಭಿಸಲಾಯಿತು. ಅದೇ ಸಮಯದಲ್ಲಿ ಅಂದರೆ ನವಂಬರ್ 2018 ರಲ್ಲಿ ಹಿಂದಿ ಭಾಷೆಯಲ್ಲಿ `ಧಾತುಕಾರ್ಯ’ ಎಂಬ ಪತ್ರಿಕೆಯನ್ನು ಮಾರುಕಟ್ಟೆಗೆ ತರಲಾಯಿತು. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಈ ತನಕ 13 ಸಂಚಿಕೆಗಳನ್ನು ಪ್ರಕಟಿಸಲಾಯಿತು. ಈ ಎಲ್ಲ ಮೂರೂ ಭಾಷೆಗಳಲ್ಲಿ ಪ್ರಕಟಿಸಲಾಗುತ್ತಿರುವ ಸಂಚಿಕೆಗಳಿಗೆ ಗಮನಾರ್ಹವಾದ ಪ್ರತಿಕ್ರಿಯೆಯು ಲಭಿಸುತ್ತಿದೆ. 40,000 ಕ್ಕಿಂತಲೂ ಹೆಚ್ಚು ಲಘು, ಮಧ್ಯಮ ಮತ್ತು ಬೃಹತ್ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೋದ್ಯಮಗಳ ತನಕ ಈ ಮಾಸ ಪತ್ರಿಕೆಯು ಪ್ರತಿ ತಿಂಗಳೂ ನಿಯಮಿತವಾಗಿ ತಲುಪುತ್ತಿದೆ. ಭಾರತದಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಎಂಬ ಸಂಸ್ಕೃತಿಯನ್ನು ನಿರ್ಮಿಸುವಲ್ಲಿ ಸಹಾಯವಾಗಬೇಕು, ಎಂಬ ಗುರಿಯನ್ನು ಎದುರಲ್ಲಿ ಇಟ್ಟುಕೊಂಡು ಇಂಜಿನಿಯರಿಂಗ್ ಕುರಿತಾದ ಮಾಸ ಪತ್ರಿಕೆಯನ್ನು ಭಾರತೀಯ ಭಾಷೆಗಳಲ್ಲಿ ಪ್ರಕಟಿಸಿ ಎಲ್ಲೆಡೆಗೂ ತಲುಪಿಸಲಾಗುತ್ತಿದೆ. ಉದ್ಯಮ ಪ್ರಕಾಶನವು ಈ ನಿಟ್ಟಿನಲ್ಲಿ ಮಹತ್ತರವಾದ ಕೆಲಸವನ್ನು ಮಾಡುತ್ತಿದೆ.
 
ತಾವು ತಮ್ಮ ಕಾರ್ಖಾನೆಯಲ್ಲಿ ತಯಾರಿಸುತ್ತಿರುವ ಉತ್ಪಾದನೆಗಳು, ಅವುಗಳ ವೈಶಿಷ್ಟ್ಯಗಳು ಮತ್ತು ಹೊಸ ತಂತ್ರಜ್ಞಾನ ಇತ್ಯಾದಿ ವಿಷಯಗಳ ಕುರಿತು ಬಳಕೆದಾರರೊಂದಿಗೆ ನೇರವಾಗಿ ಸಂಭಾಷಣೆಯನ್ನು ಮಾಡುವಲ್ಲಿ ಈ ಮಾಧ್ಯಮವು ಸೂಕ್ತವಾದ ವೇದಿಕೆಯಾಗಿದೆ. ತಮ್ಮ ಕಂಪನಿಯ, ಉದ್ಯಮದ ಕುರಿತಾದ ವಿವರಗಳನ್ನು ಜಾಹಿರಾತುಗಳ ಮೂಲಕ 40,000 ಕ್ಕಿಂತಲೂ ಹೆಚ್ಚು ಕಂಪನಿಗಳೆಡೆಗೆ ತಲುಪಿಸುವಲ್ಲಿ ಇದೊಂದು ಸುವರ್ಣಾವಕಾಶವಾಗಿದೆ. ಅಷ್ಟೇ ಅಲ್ಲದೇ ಈ ಮಾಸ ಪತ್ರಿಕೆಯಲ್ಲಿರುವ ಲೇಖನಗಳನ್ನು ತಾಂತ್ರಿಕದೃಷ್ಟಿಯಲ್ಲಿ ಅನುಭವಿಗಳಾಗಿರುವ ಓದುಗರ ತನಕ ತಲುಪಿಸಿದ್ದರಿಂದ ಉತ್ಪಾದನೆ ಮತ್ತು ಕೈಗಾರಿಕೋದ್ಯಮಿಗಳಿಗೂ, ಕೆಲಸಗಾರರಿಗೂ ಸಹಾಯವಾಗುತ್ತದೆ.
 
ಓದುಗರಿಗೆ ಸಂಬಂಧಪಟ್ಟ ಉತ್ಪಾದನೆಗಳ ಕುರಿತು ಮಾಹಿತಿಯನ್ನು ನೀಡಿ ಮಾಸ ಪತ್ರಿಕೆಯ ಮೌಲ್ಯವನ್ನು ಹೆಚ್ಚಿಸುವುದರೊಂದಿಗೆ ಮಾಸ ಪತ್ರಿಕೆಯು ಸುಲಲಿತವಾಗಿ ಮುಂದುವರಿಯಲು ಜಾಹಿರಾತುಗಳೇ ಬೆನ್ನೆಲುಬು, ಎಂಬ ಅಂಶವು ತಮ್ಮೆಲ್ಲರಿಗೂ ತಿಳಿದ ವಿಷಯವೇ ಸರಿ. ತಮ್ಮ ಉದ್ಯಮದ ಅಭಿವೃದ್ಧಿಗೋಸ್ಕರ 3/6/12 ತಿಂಗಳುಗಳ ಕಾಲಾವಧಿಯ ಜಾಹಿರಾತುಗಳನ್ನು ನೀಡಿ `ಉದ್ಯಮ ಪ್ರಕಾಶನ’ದ ಈ ವಿನೂತನವಾದ ಮತ್ತು ವಿಶೇಷವಾದ ಕಾರ್ಯಕ್ಕೆ ಸಹಾಯವನ್ನು ನೀಡುವ ಕೋರಿಕೆಯನ್ನು ತಮ್ಮ ಮುಂದೆ ಇಡುತ್ತಿದ್ದೇವೆ.
 
ಸಮಯದ ಸೂಚಿ ಮತ್ತು ಜಾಹಿರಾತುಗಳ ಬೆಲೆಗಳ ವಿವರಗಳಿಗೆ ಈ ಕೆಳಗೆ ನೀಡಲಾಗಿರುವ ಕ್ರಮಾಂಕದಲ್ಲಿ ನಮ್ಮ ಪ್ರತಿನಿಧಿಗಳನ್ನು ಸಂಪರ್ಕಿಸಿರಿ. 
 
Pune: +91 9307909747    Email: [email protected]
 
ಉದ್ಯಮ ಪ್ರಕಾಶನದ ಮೇಲೆ ತಿಳಿಸಿರುವ ಮಾಸ ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಿ ಭಾರತದ ಮೂಲೆ ಮೂಲೆಗಳಲ್ಲಿ ಹರಡಿರುವ ಕೈಗಾರಿಕೋದ್ಯಮಗಳ ಪ್ರತಿಯೊಂದು ಘಟಕದ ತನಕ ಈ ಜ್ಞಾನವನ್ನು ಮತ್ತು ಮಾಹಿತಿಯನ್ನು ತಲುಪಿಸುವಂತಹ ಮಹತ್ಕಾರ್ಯಕ್ಕೆ ತಾವು ತಮ್ಮ ಬೆಂಬಲವನ್ನು ನೀಡಬೇಕು, ಎಂದು ನಾವು ಈ ಮೂಲಕ ಕೋರುತ್ತೇವೆ.