ದೊಡ್ಡ ಮತ್ತು ಉದ್ದದ ಕಾರ್ಯವಸ್ತುಗಳಿಗೆ CLX 750

Udyam Prkashan Kannad    10-Feb-2020
Total Views |
 

1_1  H x W: 0 x 
 
ಇಮೋ ಹೆನೋವರ್ 2019 ಈ ಪ್ರದರ್ಶನದಲ್ಲಿ ಡಿಎಮ್‌ಜಿ ಮೋರಿ ಇವರು CLX ಶ್ರೇಣಿಯ ಹೊಸ ಮಾಡೆಲ್ CLX 750 ಪ್ರಸ್ತುತ ಪಡಿಸಿದರು. ಈ ಮಶಿನ್ 600 ಕಿ.ಗ್ರಾಂ. ಭಾರದ ತನಕ ಮತ್ತು 1,290 ಮಿ.ಮೀ.ತನಕದ ಟರ್ನಿಂಗ್ ಉದ್ದದ ಕಾರ್ಯವಸ್ತುಗಳಿಗೋಸ್ಕರ ಡಿಸೈನ್ ಮಾಡಲಾಗಿದೆ. ಹಾಗೆಯೇ ಯುನಿವರ್ಸಲ್ ಟರ್ನಿಂಗ್ ಸೆಂಟರ್ ಎಂದು ವಿಶೇಷವಾಗಿ ಬೃಹದಾಕಾರದ ಶಾಪ್‌ಟ್‌‌ಗಳ ಯಂತ್ರಣೆಗೋಸ್ಕರ ಉಪಯುಕ್ತವಾಗಿದೆ. ಇದರ ಹೊರತಾಗಿ ಇದರಲ್ಲಿ ಡಿಎಮ್‌ಜಿ ಮೋರಿ ಟೆಕ್ನಾಲಾಜಿ ಸೈಕಲ್, IoT ಕನೆಕ್ಟರ್‌ನಂತಹ ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳು ಒಳಗೊಂಡಿದೆ. ಇದರಿಂದಾಗಿ ಅತ್ಯಾಧುವಿನ 3D ನಿಯಂತ್ರಣೆಯನ್ನು ತಂತ್ರಜ್ಞಾನದಿಂದ ಸಿದ್ಧಪಡಿಸಲಾಗಿರುವ CLX750 ಮಶಿನ್‌ನಲ್ಲಿ ಭವಿಷ್ಯತ್ಕಾಲದಲ್ಲಿ ವಿವಿಧ ಉತ್ಪಾದನೆಯನ್ನು ಮಾಡುವುದು ಸಹಜವಾಗಿ ಸಾಧ್ಯವಾಗುತ್ತದೆ. ಗ್ರಾಹಕರಿಗೆ ಹೊಂದಿಕೊಂಡು ವಿಶಿಷ್ಟ ಸ್ವಯಂಚಾಲನೆಗೆ ಉಪಾಯಗಳಿರುವ (ಆಟೊಮೇಶನ್ ಸಲ್ಯುಶನ್) ಮಶಿನ್ ಕೂಡಾ ಈ ಶ್ರೇಣಿಯಲ್ಲಿವೆ.
 
ಟರ್ನ್ ಮಿಲ್
 
ಯಾವುದೇ ಬೃಹದಾಕಾರದ ಕಾರ್ಯವಸ್ತುವಿನಲ್ಲಿ ಯಂತ್ರಣೆಯ ಕೆಲಸಗಳನ್ನು ಮಾಡುವುದಾದಲ್ಲಿ ಆಗ ಕೆಲಸಕ್ಕೆ ಅನುಸಾರವಾಗಿ ಆ ಕಾರ್ಯವಸ್ತುವನ್ನು ಬೇರೆಬೇರೆ ಮಶಿನ್‌ನಲ್ಲಿ ಹೊಂದಾಣಿಸಬೇಕಾಗುತ್ತದೆ. ಇದರಿಂದಾಗಿ ಸೆಟಪ್ ಹೆಚ್ಚುತ್ತದೆ ಮತ್ತು ನಿಖರತೆಯು ಕಡಿಮೆ ಆಗುತ್ತದೆ. ಕಾರ್ಯವಸ್ತು ಟರ್ನ್ ಮಿಲ್‌ನಲ್ಲಿ ಅಳವಡಿಸಿ ಯಂತ್ರಣೆಯನ್ನು ಮಾಡುವಾಗ ಸಾಕಷ್ಟು ಕೆಲಸಗಳು ಒಂದೇ ಸೆಟಿಂಗ್‌ನಲ್ಲಿ ಆಗುತ್ತಿರುವುದರಿಂದ ಲೋಡಿಂಗ್- ಅನ್‌ಲೋಡಿಂಗ್‌ನ ಸಮಯದಲ್ಲಿ ಉಳಿತಾಯವಾಗುತ್ತದೆ. ಎರಡು ಸೆಟಪ್‌ಗಳಲ್ಲಿ ಕಾರ್ಯವಸ್ತುವನ್ನು ನಿರ್ವಹಿಸುವ ಕೆಲಸವೂ ಇಲ್ಲದಂತಾಗುತ್ತದೆ. ಅದರೊಂದಿಗೆ ಯಂತ್ರಭಾಗಗಳ ನಿರ್ದೋಷತ್ವವೂ ಹೆಚ್ಚಾಗುತ್ತದೆ. ಹಿಂದೆ ಯಾವ ಕೆಲಸಗಳು ಟರ್ನಿಂಗ್, ಮಿಲ್ಲಿಂಗ್ ಮತ್ತು ವಿ.ಎಮ್.ಸಿ.ಯಲ್ಲಿ ಬೇರೆಬೇರೆಯಾಗಿ ಮಾಡಬೇಕಾಗುತ್ತಿದ್ದವೋ, ಅವುಗಳನ್ನು ಈ ಮಶಿನ್‌ನಲ್ಲಿ ಒಟ್ಟಾಗಿಯೇ ಮಾಡಬಹುದಾಗಿದೆ.
 
600 ಕಿ.ಗ್ರಾಂ.ನಷ್ಟು ತೂಕವಿರುವ ಕಾರ್ಯವಸ್ತುಗಳ ಹೆವಿ ಡ್ಯೂಟಿ ಯಂತ್ರಣೆಯನ್ನು ಮಾಡಲು ಮಶಿನ್‌ನಲ್ಲಿ ಆವಶ್ಯಕವಿರುವ ವೈಶಿಷ್ಟ್ಯಗಳನ್ನು ಈ ಮುಂದೆ ನೀಡಲಾಗಿದೆ. 
 
 
2_1  H x W: 0 x
 

3_1  H x W: 0 x 
 
>700 ಮಿ.ಮೀ.ನಷ್ಟು ವ್ಯಾಸವಿರುವ ಮತ್ತು 1,290 ಮಿ.ಮೀ.ನಷ್ಟು ಟರ್ನಿಂಗ್‌ನ ಉದ್ದವಿರುವ ಕಾರ್ಯವಸ್ತು. (ಪರ್ಯಾಯವಾಗಿರುವ Y ಅಕ್ಷದೊಂದಿಗೆ ಮ್ಯಾಕ್ಸಿಮಮ್ ವ್ಯಾಸ 640 ಮಿ.ಮೀ. ಇರುವ ಸಾಧ್ಯತೆ ಇದೆ.)
>46 kW, 2000 Nm ಮುಖ್ಯ ಸ್ಪಿಂಡಲ್ (A2-11’’)
>ಯಂತ್ರಭಾಗಗಳ ಟೊಳ್ಳು ಕ್ಲ್ಯಾಂಪಿಂಗ್‌ನ ವ್ಯಾಸ 127 ಮಿ.ಮೀ.
>12-ವೆ ವಿಡಿಎಮ್ 50 ಟರೇಟ್.
>ಆಫ್ ಸೆಂಟರ್ ಯಂತ್ರಣೆಗೋಸ್ಕರ ±80 ಮಿ.ಮೀ. Y ಅಕ್ಷ (ಪರ್ಯಾಯ), 430 ಮಿ.ಮೀ. ವ್ಯಾಸದಷ್ಟು ಕಡ್ಡಾಯವಲ್ಲದ ಸ್ಟೆಡಿ ರೆಸ್ಟ್.
>4000 ಆರ್.ಪಿ.ಎಮ್. ಮತ್ತು 360 Nm ಇರುವ ಪರ್ಯಾಯವಾದ ಸಬ್ ಸ್ಪಿಂಡಲ್ ISM76.>ಡಿಎಮ್‌ಜಿ ಮೋರಿ ಟೆಕ್ನಾಲಾಜಿ ಸೈಕಲ್‌ನ ವಿಸ್ತಾರವಾದ ಶ್ರೇಣಿ.
>ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳಿರುವ ಡಿಎಮ್‌ಜಿ ಮೋರಿ ಇವರ IoT ಕನೆಕ್ಟರ್.>19 ಇಂಚು ಟಚ್ ಪ್ಯಾನೆಲ್‌ನಲ್ಲಿರುವ 3D ಕಂಟ್ರೋಲ್ ಟೆಕ್ನಾಲಾಜಿ, ಐಚ್ಛಿಕವಾಗಿ ಬಳಸಲಾಗುವ ಸಿಮೆನ್ಸ್ ಅಥವಾ ಫಾನುಕದೊಂದಿಗೆ.
>ಬೆಡ್‌ನಲ್ಲಿರುವ ಸ್ವಿಂಗ್ Ø: 950 ಮಿ.ಮೀ.>ಗರಿಷ್ಠ ಟರ್ನಿಂಗ್ ವ್ಯಾಸ Ø: 700 ಮಿ.ಮೀ.
>Z ಅಕ್ಷದಲ್ಲಿ ಟ್ರಾವೆಲ್: 1300 ಮಿ.ಮೀ.>ಬಾರ್ ಪ್ಯಾಕೇಜ್ Ø: 127 ಮಿ.ಮೀ.
>ನಾಮಿನಲ್ ಚಕ್‌ನ ಆಕಾರ Ø: 400/500 ಮಿ.ಮೀ.
>ಟೂಲ್ ಇಂಟರ್‌ಫೇಸ್: 12x VDI 50/6 XBT/12x VDI 40 (V6)
 
ಮಹತ್ವಪೂರ್ಣವಾದ ಇನ್ನಿತರ ವೈಶಿಷ್ಟ್ಯಗಳು
ಆಲ್ಟರ್‌ನೆಟಿಂಗ್‌ನ ವೇಗ
 

4_1  H x W: 0 x 
 
>ಮೂರು ಪ್ಯಾರಾಮೀಟರ್ ಇರುವುದರಿಂದ ಮತ್ತು ಅತಿರಿಕ್ತವಾದ ಸೆನ್ಸರ್ ಇಲ್ಲದೇ ಇರುವುದರಿಂದ ಸುಲಭವಾದ ಅಪ್ಲಿಕೇಶನ್.
>ಸ್ಪೀಡ್ ಎಡಾಪ್ಷನ್‌ನಿಂದಾಗಿ ಕಂಪನಗಳ ತಡೆಯುವಿಕೆ.
>ಮುಖ್ಯ ಮತ್ತು ಕೌಂಟರ್ ಸ್ಪಿಂಡಲ್ ಎರಡಕ್ಕೋಸ್ಕರ ಅಪ್ಲಿಕೇಶನ್.
 
ರಿಟ್ರ್ಯಾಕ್ಷನ್ ರೊಟೇಶನ್
 

5_1  H x W: 0 x 
 
>ಸಂಬಂಧಪಟ್ಟ ಬಟನ್ (ಕಿ) ಒತ್ತಿದ ನಂತರ X ಅಕ್ಷ ಮತ್ತು Y ಅಕ್ಷ ಹೊರ ಯಂತ್ರಣೆಗೋಸ್ಕರ ಕೊನೆಯ ಪಾಝಿಟಿವ್ ಸ್ಥಾನದ ತನಕ ಹೋಗುತ್ತವೆ.
>ಸೆಟಪ್ ಮಾಡಲು ಬೇಕಾಗುವ ಜಾಗವನ್ನು ತಯಾರಿಸಲು ಸುಲಭ ಮತ್ತು ತುರ್ತುಪರಿಸ್ಥಿತಿಯಲ್ಲಿ ಐಚ್ಛಿಕವಾದ ಬಳಕೆ.
 
ಮಲ್ಟಿ ಥ್ರೆಡಿಂಗ್ 2.0
 

6_1  H x W: 0 x 
 
>ಆನ್ ಪಾಯಿಂಟ್ ಥ್ರೆಡಿಂಗ್
>ಕಂಟೂರ್, ಪಿಚ್ ಮತ್ತು ಗಿಯರ್ ಇವೆಲ್ಲವುಗಳ ಮುಕ್ತವಾದ ರಚನೆಯೂ (ಡೆಫಿನಿಶನ್) ಸಾಧ್ಯ.
>ಸಾಮಾನ್ಯವಾದ ಥ್ರೆಡ್ ಚೇಸಿಂಗ್ ಮೂಲಕ ಮಾಡಲಾಗದಿರುವ ದೊಡ್ಡ ಟ್ರಾನ್ಸ್‌ಮಿಶನ್ ಅಥವಾ ವಿಶೇಷವಾದ ಥ್ರೆಡ್‌ನ ತಯಾರಿಕೆಯೂ ಸಾಧ್ಯ.
 
ಕೌಂಟರ್ ಸ್ಪಿಂಡಲ್ TIP
 

7_1  H x W: 0 x 
 
>6 ಬದಿಗಳಲ್ಲಿ ಸಂಪೂರ್ಣ ಯಂತ್ರಣೆ ಮತ್ತು ಟೇಲ್‌ಸ್ಟಾಕ್‌ನ ಕೆಲಸದ ಸೂಕ್ತ ಯೋಜನೆ
>ರೇಟ್‌ನ ದಾರಿಯಲ್ಲಿ ಕೌಂಟರ್ ಸ್ಪಿಂಡಲ್‌ನ ಚಕ್‌ನಲ್ಲಿ ಟೇಲ್‌ಸ್ಟಾಕ್ ಸೆಂಟರ್‌ನಲ್ಲಿ ಸ್ವಯಂಚಾಲಿತವಾಗಿ ಲೋಡ್ ಮತ್ತು ಅನ್‌ಲೋಡ್ ಮಾಡಬಹುದಾಗಿದೆ.
>ಸಮಾನಾಂತರವಾದ ಸಿಂಕ್ರೋನಸ್ ಇರುವ ಕೌಂಟರ್ ಸ್ಪಿಂಡಲ್‌ನ ತುದಿಯ ಸಹಾಯದಿಂದ ಮುಖ್ಯವಾದ ಸ್ಪಿಂಡಲ್‌ನಲ್ಲಿ ಉದ್ದದ, ತೆಳುವಾದ ಕಾರ್ಯವಸ್ತುವಿಗೆ ಆಶ್ರಯವನ್ನು ನೀಡಬಹುದಾಗಿದೆ.
>ಬಾಗಿಲನ್ನು ತೆರೆಯದೇ ಸ್ವಯಂಚಾಲಿತವಾಗಿ ಬದಲಾಯಿಸುವುದು ಸಾಧ್ಯ (ಸ್ಥಿರವಾದ ಉಷ್ಣತೆಯ ಪ್ರವಾಹ). ಇದರಿಂದಾಗಿ ಯಂತ್ರಭಾಗಗಳ ನಿಖರತೆಯು ಇನ್ನಷ್ಟು ವೃದ್ಧಿಸುತ್ತದೆ.
>ಸ್ಪಿಂಡಲ್‌ನ ತುದಿಯೊಂದಿಗೆ ಪೊಸಿಶನ್ ಲಾಕಿಂಗ್ ಮಾಡಿದ್ದರಿಂದ ಪ್ರಕ್ರಿಯೆಯ ಸುರಕ್ಷಿತತೆಯಲ್ಲಿ ಹೆಚ್ಚಳ.
 
ಟೂಲ್‌ಗಳ ಸಹಜವಾದ ಉಸ್ತುವಾರಿ 2.0
(ಈಝೀ ಟೂಲ್ ಮಾನಿಟರಿಂಗ್)
 

8_1  H x W: 0 x 
 
>ಟೂಲ್ ತುಂಡಾಗಿರುವುದರಿಂದ ಅಥವಾ ಟೂಲ್ ಓವರ್‌ಲೋಡ್ ಆಗಿರುವುದರಿಂದ ಉಂಟಾಗುವ ನಷ್ಟವನ್ನು ತಡೆಯುವುದೂ ಸಾಧ್ಯ.
>ಸೆನ್ಸರ್‌ಗಳನ್ನು ಬಳಸಲಾಗುವುದಿಲ್ಲ. ಭಾರದ ಮಿತಿಯನ್ನು ಸ್ವಯಂಚಾಲಿತವಾಗಿ ವಿಶ್ಲೇಷಿಸಲಾಗುತ್ತದೆ.
>ಟರ್ನಿಂಗ್, ಮಿಲ್ಲಿಂಗ್ ಮತ್ತು ಡ್ರಿಲ್ಲಿಂಗ್‌ನ ಸಹಜವಾದ ಉಸ್ತುವಾರಿ.
>ಮೊದಲ ಕಾರ್ಯವಸ್ತುಗಳ ನಂತರ ಸಮರ್ಥವಾದ ಉಸ್ತುವಾರಿಗೋಸ್ಕರ ಶಕ್ತಿಶಾಲಿಯಾದ ಅಲ್ಗೋರಿದಮ್.
>ಪ್ರತಿಯೊಂದು ಟೂಲ್ ಮತ್ತು ಪ್ರತಿಯೊಂದು ಯಂತ್ರಣೆಯ ಎಡ್‌ಜ್‌‌ಗೋಸ್ಕರ ಉಸ್ತುವಾರಿಯ ಮಿತಿ ಪ್ರೊಗ್ರಾಮ್‌ನಲ್ಲಿ ಸಂಗ್ರಹಿಸಬಹುದಾಗಿದೆ.
 
ಕೀ-ವೇ ಬ್ರೋಚಿಂಗ್
 

10_1  H x W: 0  
 
>ಕಚ್ಚುಗಳ ಜ್ಯಾಮಿತಿ, ಟೂಲ್ ಮತ್ತು ಯಂತ್ರಣೆಯ ಸ್ಟ್ರಾಟಿಜಿ ಇದಕ್ಕೋಸ್ಕರ ತಯಾರಿಸಿರುವ ಇನ್‌ಪುಟ್ ಪ್ಯಾರಾಮೀಟರ್.
>ಯಾವುದೇ ಸ್ಥಾನದಲ್ಲಿ ಮತ್ತು ಎಷ್ಟೇ ಸಂಖ್ಯೆಯಲ್ಲಿ ಒಳಗೊಂಡಿರುವ ಮತ್ತು ಹೊರ ಕಚ್ಚುಗಳನ್ನು ಮುಕ್ತವಾಗಿ ಹೊಂದಾಣಿಸುವುದು ಸಾಧ್ಯ.
>ಟೂಲ್‌ನ ಸ್ಥಳಾಂತರಕ್ಕೆ ಸಹಜವಾದ ಪರಿಹಾರ.
>ಆಯ್ಕೆ ಮಾಡಿರುವ ಯಂತ್ರಣೆಯ ಕೆಲಸದ ಯೋಜನೆಗೆ ಅನುಸಾರವಾಗಿ ರೆಸಿಡ್ಯುವಲ್ ಸ್ಟ್ರೋಕ್‌ನ ಗಣನೆ.
 
Y ಅಕ್ಷದ ಪಾರ್ಟಿಂಗ್
 
 
09_1  H x W: 0
 
>ಟೂಲ್ ಹೋಲ್ಡರ್‌ನ ಲಾಂಜಿಟ್ಯುಡನಲ್ ದಿಕ್ಕಿನಲ್ಲಿ ಬಲದ ಅಪ್ಟಿಮಮ್
>ಟ್ರಾನ್ಸ್‌ಮಿಶನ್ ಆಗುತ್ತಿರುವುದರಿಂದ ಉನ್ನತ ಮಟ್ಟದ ಸ್ಥಿರತೆ.
>ಯಂತ್ರಭಾಗಕ್ಕೆ ‘ಪಾರ್ಟ್ ಆಫ್’ ಮಾಡಲು ಒಂದು ಬಟನ್ ಒತ್ತಿ ಟೂಲ್‌ನ ಪೀಡ್‌ರೇಟ್ Y ದಿಕ್ಕಿಗೆ ಮಾಡಬಹುದು. 
>ಸ್ಟ್ಯಾಂಡರ್ಡ್ ರೊಟೇಶನ್ CYCLE92 (ಪಾರ್ಟ್ ಆಫ್ ಸೈಕಲ್) ಇದರೊಂದಿಗೆ ಹೊಂದಿಕೊಳ್ಳುವಂತಹದ್ದು, ಇದರಿಂದಾಗಿ ಆಪರೇಟರ್ ಎಂದಿನಂತೆ ಪ್ರೊಗ್ರಾಮ್ ತಯಾರಿಸಬಹುದು. (ಶಾಪ್‌ಟರ್ನ್ ಮತ್ತು DIN/IS).
 
ಸುಧಾರಿಸಿರುವ ನಿಯಂತ್ರಣೆ (ಕಂಟ್ರೋಲ್)
 
 
11_1  H x W: 0
 
ಯಂತ್ರಣೆಯ ಕೆಲಸದಲ್ಲಿ ಹೆಚ್ಚಾಗುತ್ತಿರುವ ಡಿಜಿಟಲೈಜೆಶನ್‌ನ ಹಿನ್ನೆಲೆಯಲ್ಲಿ ಡಿಎಮ್‌ಜಿ ಮೋರಿ ಇವರು CLX750 ಫ್ಯೂಚರ್ ಪ್ರೂಫ್ ತಯಾರಿಸಲಾಗಿದೆ. ಇದರಲ್ಲಿ ಸಿಮೆನ್ಸ್ ಅಥವಾ ಫಾನುಕ್ ಕಂಪನಿಯಿಂದ ಪಡೆದಿರುವ ಅತ್ಯಾಧುನಿಕ ಕಂಟ್ರೋಲ್ ತಂತ್ರಜ್ಞಾನವು ಉಪಲಬ್ಧವಿದೆ. ಇದರ ಹೊರತಾಗಿ ಈ ಮಶಿನ್‌ನಲ್ಲಿರುವ ಅಲ್ಟರ್‌ನೆಟಿಂಗ್ ರೊಟೇಶನಲ್ ಸ್ಪೀಡ್, ಈಝೀ ಟೂಲ್ ಮಾನಿಟರ್ 2.0 ಅಥವಾ ಮಲ್ಟಿ ಥ್ರೆಡಿಂಗ್ ಸೈಕಲ್ ಈ ಕಂಪನಿಯವರು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನದಿಂದಾಗಿ ರೊಟೇಶನ್ ಮತ್ತು ಯಂತ್ರಣೆಯ ಕಾರ್ಯವು ಸುಲಭ ಮತ್ತು ಸಮರ್ಥವಾಗುತ್ತದೆ. IoT ಕನೆಕ್ಟರ್ ಇದು ಎಲ್ಲ CLX ಮಶಿನ್‌ಗಳ ಸ್ಟ್ಯಾಂಡರ್ಡ್ ಉಪಕರಣೆಗಳ ಭಾಗವಾಗಿದೆ. ಇದರಿಂದಾಗಿ ಮಶಿನ್‌ನ ಡಿಜಿಟಲ್ ನೆಟ್‌ವರ್ಕಿಂಗ್ ಸಮರ್ಥವಾಗುತ್ತದೆ. ಇಂಟಿಗ್ರೇಟೆಡ್ ಫಾಯರ್‌ವಾಲ್‌ನ ಸಹಾಯದಿಂದ ಸಾಕಷ್ಟು ಹೆಚ್ಚು ಮತ್ತು ಸಾಧ್ಯವಾದಷ್ಟು ಸಂರಕ್ಷಣೆಯನ್ನು ನೀಡುತ್ತದೆ ಮತ್ತು ಸರ್ವಿಸ್ ಕ್ಯಾಮೆರಾ ಮತ್ತು ನೆಟ್ ಸರ್ವಿಸ್‌ನೊಂದಿಗೆ ಮುಂಚೂಣಿಯಲ್ಲಿರುವ ಉಪಾಯವನ್ನು (ಸರ್ವಿಸ್ ಸಲ್ಯುಶನ್) ಸಾಮರ್ಥ್ಯಯುಕ್ತವಾಗಿ ಮಾಡುತ್ತದೆ.
 

12_1  H x W: 0  
 
ಭವಿಷ್ಯತ್ಕಾಲದಲ್ಲಿ ಉತ್ಪಾದನೆಯ ನಿರ್ಮಾಣ ಮತ್ತು ಸ್ವಯಂಚಾಲಿತ (ಆಟೊಮೇಟೆಡ್) ಉತ್ಪಾದನೆಗಳು ಕೂಡಿಕೊಂಡು ಮುನ್ನಡೆಯು ಸಾಧಿಸಲ್ಪಡುತ್ತದೆ, ಎಂಬುದನ್ನು ಡಿಎಮ್‌ಜಿ ಮೋರಿ ಇವರು ಯಾವಾಗಲೂ ಗಮನದಲ್ಲಿಟ್ಟಿದ್ದಾರೆ. ಈ ರೀತಿಯಲ್ಲಿ CLX750 ನ ಉತ್ಪಾದನೆಯ ಸಾಮರ್ಥ್ಯ ಕಸ್ಟಮೈಜ್ಡ್‌ ಆಟೊಮೇಶನ್ ಸಲ್ಯುಶನ್ ಬಳಸಿ ದೀರ್ಘ ಕಾಲಾವಧಿಯವರೆಗೆ ಸುಧಾರಿಸಬಹುದಾಗಿದೆ.
 
 
 

ravindra kruhnamutri_1&nb 
ರವೀಂದ್ರ ಕೃಷ್ಣಮೂರ್ತಿ
ಪ್ರೊಡಕ್ಟ್ ಸೇಲ್ಸ್‌ ಮ್ಯಾನೆಜರ್,
ಟರ್ನಿಂಗ್ ಅ್ಯಂಡ್ ಎಡ್‌ವ್ಹಾನ್ಸ್ ಟೆಕ್ನಾಲಾಜಿ,
ಡಿಎಮ್‌ಜಿ ಮೋರಿ ಇಂಡಿಯಾ ಪ್ರೈ.ಲಿ. 
080 40896525
 
ರವೀಂದ್ರ ಕೃಷ್ಣಮೂರ್ತಿ ಇವರು ಡಿಎಮ್‌ಜಿ ಮೋರಿ ಇಂಡಿಯಾ ಈ ಕಂಪನಿಯಲ್ಲಿ ಟರ್ನಿಂಗ್ ಮತ್ತು ಅಡವಾನ್ಸ್ ಟೆಕ್ನಾಲಾಜಿಯಲ್ಲಿ ಪ್ರಾಡಕ್ಟ್ ಸೇಲ್ಸ್‌ ವ್ಯವಸ್ಥಾಪಕರಾಗಿ ಕಾರ್ಯನಿರತರಾಗಿದ್ದಾರೆ.